HomeBreaking NewsLatest NewsPoliticsSportsCrimeCinema

ಎಂಎಲ್ ಸಿ ಸೂರಜ್ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

06:27 PM Jul 08, 2024 IST | prashanth

ಬೆಂಗಳೂರು,ಜುಲೈ,8, 2024 (www.justkannada.in): ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ ಎಲ್ ಸಿ ಸೂರಜ್ ರೇವಣ್ಣ  ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜುಲೈ 10ಕ್ಕೆ ಮುಂದೂಡಿಕೆ ಮಾಡಿದೆ.

ಪ್ರಕರಣ ಸಂಬಂಧಿ ಈಗಾಗಲೇ ಸೂರಜ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು, 2ನೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು, ವಿಚಾರಣೆ ನಡೆಸಿದ ಕೋರ್ಟ್ ಜುಲೈ 10ಕ್ಕೆ ವಿಚಾರಣೆ ಮುಂದೂಡಿದೆ. ಅರ್ಜಿ ವಿಚಾರಣೆ ನಡೆದಿದ್ದು, ಸಿಐಡಿ ತನಿಖಾಧಿಕಾರಿ ಎಂ ಹೆಚ್ ಉಮೇಶ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.

2ನೇ ಪ್ರಕರಣದಲ್ಲೂ ಸೂರಜ್ ರೇವಣ್ಣ ಬಂಧನ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ  ಮಧ್ಯಂತರ ಜಾಮಿನು ನೀಡುವಂತೆ ಸೂರಜ್ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿದರು. ಈ ವೇಳೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ಕೋರಿದರು.

ಆಕ್ಷೇಪಣೆ ಸಲ್ಲಿಸುವವರೆಗೂ ಎರಡನೇ ಕೇಸ್ ನಲ್ಲಿ ಬಲವಂತದ ಕ್ರಮವಿಲ್ಲ ಎಂದು ಹೇಳಿ ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಿಂದ ಮೆಮೊ ಸಲ್ಲಿಕೆ ಮಾಡಲಾಯಿತು. ಬಳಿಕ ಜಾಮೀನು ಅರ್ಜಿ ವಿಚಾರಣೆಯನ್ನು ಜುಲೈ 10 ಕ್ಕೆ  ಕೋರ್ಟ್ ಮುಂದೂಡಿಕೆ ಮಾಡಿತು.

Key words: MLC, Prajwal Revanna, bail application, hearing, adjourned

Tags :
adjournedbail-applicationhearingMLCprajwal revanna
Next Article