HomeBreaking NewsLatest NewsPoliticsSportsCrimeCinema

ಎಂಎಲ್ ಸಿ ಸೂರಜ್ ರೇವಣ್ಣಗೆ  14 ದಿನಗಳ ಕಾಲ ನ್ಯಾಯಾಂಗ ಬಂಧನ

10:42 AM Jun 24, 2024 IST | prashanth

ಬೆಂಗಳೂರು,ಜೂನ್,24,2024 (www.justkannada.in):  ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 42ನೇ  ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮಾಜಿ ಸಚಿವ ರೇವಣ್ಣ ಪುತ್ರ ಎಂಎಲ್ಸಿ ಸೂರಜ್ ರೇವಣ್ಣರನ್ನ ಬಂಧಿಸಲಾಗಿತ್ತು.  ನಿನ್ನೆ ಸಂಜೆ ಸೂರಜ್ ರೇವಣ್ಣರನ್ನ ಪೊಲೀಸರು ಹಾಸನದಿಂದ ಬೆಂಗಳೂರಿಗೆ ಕರೆತಂದು 42ನೇ ಎಸಿಎಂಎಂ ನ್ಯಾಯಾಧೀಶದ ಮುಂದೆ ಹಾಜರುಪಡಿಸಿದ್ದರು.

ಜುಲೈ 6ರವರೆಗೆ ಅಂದರೆ 14 ದಿನಗಳ ಕಾಲ ಸೂರಜ್ ರೇವಣ್ಣಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಹಾಸನದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.  ಐಪಿಸಿ ಸೆಕ್ಷನ್ 377,342 ಮತ್ತು 506 ರ ಅಡಿ ಪ್ರಕರಣ ದಾಖಲಾಗಿತ್ತು.

Key words: MLC, Suraj Revanna, judicial custody, 14 days

Tags :
14 daysMLC -Suraj Revanna judicial custody
Next Article