For the best experience, open
https://m.justkannada.in
on your mobile browser.

ರೇಷ್ಮೆ ಬೆಳೆಗಾರರಿಗೆ ತೊಂದರೆ: ಕೇಂದ್ರದಿಂದ ಯೋಜನೆಗಳನ್ನ ನೀಡಿ- ಸಚಿವ ಕೆ. ವೆಂಕಟೇಶ್

12:43 PM Sep 20, 2024 IST | prashanth
ರೇಷ್ಮೆ ಬೆಳೆಗಾರರಿಗೆ ತೊಂದರೆ  ಕೇಂದ್ರದಿಂದ ಯೋಜನೆಗಳನ್ನ ನೀಡಿ  ಸಚಿವ ಕೆ  ವೆಂಕಟೇಶ್

ಮೈಸೂರು,ಸೆಪ್ಟಂಬರ್,20,2024 (www.justkannada.in): ಆಧುನಿಕ ತಂತ್ರಜ್ಞಾನದಿಂದ ರೇಷ್ಮೆ ಬೆಳೆಗಾರರಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸಹಕಾರ ನೀಡಿದ್ರೆ ಉತ್ತೇಜನ ನೀಡಬಹುದು. ಕೇಂದ್ರದಿಂದ ಯೋಜನೆಗಳನ್ನ ನೀಡಬೇಕು ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್  ಮನವಿ ಮಾಡಿದರು.

ಕೇಂದ್ರ ರೇಷ್ಮೆ ಮಂಡಳಿ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವ ಕೆ. ವೆಂಕಟೇಶ್ ಮಾತನಾಡಿದರು.  ರೇಷ್ಮೆ ಪ್ರತಿಷ್ಠಿತ ಬೆಳೆ , ರೈತರಿಗೆ ಕಷ್ಟವಿದರೂ ಬೆಳೆಯುತ್ತಾರೆ. ಇದರ ನಡುವೆಯೂ ರೇಷ್ಮೆ ಬೆಳೆ ಕಡಿಮೆಯಾಗುತ್ತಿಲ್ಲ.  ರೇಷ್ಮೆ ಬೆಳೆಗಾರರಿಗೆ ಕೇಂದ್ರ ಸಹಕಾರ ನೀಡಿದ್ರೆ ಉತ್ತಜನ ನೀಡಬಹುದು. ಈ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿಳಿಸಿದ್ದೇನೆ. ಈ ಹಿಂದೆ ಮೈಸೂರು ಮಹಾರಾಜರ ಕಾಲದಲ್ಲಿ ರೇಷ್ಮೆ ಬೆಳೆ ಮಾರಾಟಕ್ಕೆ ಮಾರುಕಟ್ಟೆ ನಿರ್ಮಿಸಲಾಗಿತ್ತು. ಜನರ ಬೇಡಿಕೆಗೆ ಅನುಗುಣವಾಗಿ ಸೀರೆಗಳನ್ನ ತಯಾರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೊಸ ಹೊಸ ತಂತ್ರಜ್ಞಾನ ಅಳವಡಿಸಲು ಚಿಂತಿಸುತ್ತಿದ್ದೇವೆ. ಈ ಸಮಸ್ಯೆಗೆ ಕೇಂದ್ರ ಸರ್ಕಾರದಿಂದ ಸಹಕಾರ ದೊರೆತರೆ ಉತ್ತೇಜನವಾಗುತ್ತದೆ ಎಂದು ತಿಳಿಸಿದರು.

ಮೈಸೂರು ಸಿಲ್ಕ್ ಗೆ ಬೇಡಿಕೆ ಹೆಚ್ಚಿದೆ. ರೇಷ್ಮೆ ಬೆಳೆಗಾರರಿಗೆ ಕೇಂದ್ರದಿಂದ ಹಲವು ಯೋಜನೆಗಳನ್ನು ನೀಡಬೇಕು. ಕೇಂದ್ರ ರೇಷ್ಮೆ ಇಲಾಖೆಯಿಂದ ನಮಗೆ ಸಹಕಾರ ದೊರೆಯುತ್ತಿದೆ. ರೇಷ್ಮೆ ಬೆಳೆಯನ್ನು ಯಾರು ಬಿಡುವುದು ಬೇಡ. ರೈತರ ವಿಚಾರ ಆಗಿರೋದ್ರಿಂದ ಇಲ್ಲಿ ರಾಜಕೀಯ ಬೇರೆಸುವುದು ಬೇಡ. ನಾವೆಲ್ಲ ಸೇರಿ ರೈತರ ಪರ ನಿಲ್ಲೋಣ ಎಂದು ಸಚಿವ ಕೆ ವೆಂಕಟೇಶ್ ತಿಳಿಸಿದರು.

ಕಾರ್ಯಕ್ರಮ ಹಿಂದಿ, ಇಂಗ್ಲಿಷ್ ಮಯ:  ಸಚಿವ ಕೆ.ವೆಂಕಟೇಶ್ ವ್ಯಂಗ್ಯ

ಕಾರ್ಯಕ್ರಮ ಹಿಂದಿ, ಇಂಗ್ಲಿಷ್ ಮಯವಾಗಿತ್ತು. ಕಾರ್ಯಕ್ರಮದಲ್ಲಿ ಹಿಂದಿ ಇಂಗ್ಲೀಷ್ ಭಾಷಣ ಮಾಡಿದವರಿಗೆ ತಮಾಷೆಯಾಗಿ ವ್ಯಂಗ್ಯ ವಾಡಿದ ಸಚಿವ ಕೆ.ವೆಂಕಟೇಶ್, ಎಲ್ಲಾ ಹಿಂದಿ ಇಂಗ್ಲಿಷ್ ನಲ್ಲಿ ಭಾಷಣ ಮಾಡಿದರು. ನಿಮಗೆ ಏನು ಗೊತ್ತಾಯಿತು ಅಂತ ಗೊತ್ತಾಗಲಿಲ್ಲ. ನನಗು ಏನು ಗೊತ್ತಾಗಲಿಲ್ಲ ಎಂದು ತಮಾಷೆ ಮಾಡಿದರು.

Key words: Modern technology, problems, silk farmers, Minister, K. Venkatesh

Tags :

.