HomeBreaking NewsLatest NewsPoliticsSportsCrimeCinema

ಮೋದಿ, ಅಮಿತ್ ಶಾ ವ್ಯಾಪಾರಿಗಳು: ಜನರ ಹಣ ಲೂಟಿ ಮಾಡಿ ಶ್ರೀಮಂತರಿಗೆ ನೀಡಿದ್ದಾರೆ-ಮಲ್ಲಿಕಾರ್ಜುನ ಖರ್ಗೆ.

06:09 PM Apr 27, 2024 IST | prashanth

ಅಸ್ಸಾಂ,ಏಪ್ರಿಲ್, 27,2024 (www.justkannada.in): ಮೋದಿ, ಅಮಿತ್ ಶಾ ವ್ಯಾಪಾರಿಗಳು. ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನ ಮಾರುತ್ತಿದ್ದಾರೆ. ದೇಶದ ಜನರ ಹಣಬನ್ನ ಲೂಟಿ ಮಾಡಿ ಶ್ರೀಮಂತರಿಗೆ ನೀಡಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಅಸ್ಸಾಂನ ಬಾರ್ಪೇಟಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರವು ಶ್ರೀಮಂತರ 16 ಲಕ್ಷ ಕೋಟಿ ರೂ.ಗಳನ್ನು ಮನ್ನಾ ಮಾಡಿದೆ.ಆದರೆ ಬಡವರಿಗೆ ಅಥವಾ ರೈತರಿಗೆ ಏನನ್ನೂ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಮಾರಾಟ ಮಾಡುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳಾದ ರೈಲ್ವೆ, ರಸ್ತೆಗಳು, ಬಂದರುಗಳು, ವಿಮಾನ ನಿಲ್ದಾಣಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೋದಿ ಮತ್ತು ಶಾ ಇಬ್ಬರೂ ಮಾರಾಟಗಾರರು, ಅದಾನಿ ಮತ್ತು ಅಂಬಾನಿ ಇಬ್ಬರು ಖರೀದಿದಾರರು. ಇವರು ನಿರ್ಮಾಣ ಮಾಡೋರಲ್ಲ ಮಾರೋರು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಮಾಜಿ ಪ್ರಧಾನಿಗಳಾದ ಪಂಡಿತ್ ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರು ಭಾರತಕ್ಕೆ ಹಸಿರು ಕ್ರಾಂತಿ ಮತ್ತು ಶ್ವೇತ ಕ್ರಾಂತಿಯನ್ನು ತರುವ ಮೂಲಕ ಆಹಾರ ಭದ್ರತೆಯನ್ನು ಖಚಿತಪಡಿಸಿದ್ದಾರೆ ಎಂದು  ಮಲ್ಲಿಕಾರ್ಜುನ ಖರ್ಗೆ ನುಡಿದರು.

Key words: Modi, Amit Shah, traders, Mallikarjuna Kharge

Tags :
Modi-Amit Shah -traders - Mallikarjuna Kharge.
Next Article