HomeBreaking NewsLatest NewsPoliticsSportsCrimeCinema

ಮೋದಿ ಸತ್ತರೇ 140 ಕೋಟಿ ಜನಸಂಖ್ಯೆಯಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಇಲ್ಲವೇ..?  ಕಾಂಗ್ರೆಸ್ ಶಾಸಕ ರಾಜುಕಾಗೆ

10:25 AM May 01, 2024 IST | prashanth

ಬೆಳಗಾವಿ,ಮೇ,1,2024 (www.justkannada.in): ಮೋದಿ ಸತ್ತರೇ  ದೇಶದ 140 ಕೋಟಿ ಜನಸಂಖ್ಯೆಯಲ್ಲಿ ಯಾರು ಪ್ರಧಾನಿ ಅಭ್ಯರ್ಥಿ ಇಲ್ಲವೇ..?  ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿಯಾಗುವುದಿಲ್ಲವೇ  ಎಂದು ಕಾಂಗ್ರೆಸ್ ಶಾಸಕ ರಾಜುಕಾಗೆ  ಲೇವಡಿ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಮದಾಪುರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ಸಭೆ ಮಾತನಾಡಿದ ರಾಜುಕಾಗೆ,  ಪ್ರಧಾನಿ ನರೇಂದ್ರ ಮೋದಿ ತೀರಿಕೊಂಡರೆ ದೇಶದಲ್ಲಿ ಮುಂದೆ ಯಾರೂ ಪ್ರಧಾನಿ ಆಗೋದೇ ಇಲ್ವಾ? ಮೋದಿ ತೀರಿಕೊಂಡರೆ 140 ಕೊಟಿ ಜನಸಂಖ್ಯೆಯಲ್ಲಿ ಪ್ರಧಾನಿ ಅಭ್ಯರ್ಥಿಯೇ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

ಈಗಿನ ಯುವಕರು ಮೋದಿ ಮೋದಿ ಅನ್ನುತ್ತಾರೆ, ಮೋದಿನ ತೆಗೆದುಕೊಂಡು ನೆಕ್ಕುತ್ತೀರಾ? ರಾಜ್ಯದಲ್ಲಿ ಮತದಾರರು ಕಾಂಗ್ರೆಸ್ ಸರ್ಕಾರ ಬೇಕು ಅಂತಾರೆ, ಆದ್ರೆ ಕೇಂದ್ರದಲ್ಲಿ ಮೋದಿನೇ ಬರಬೇಕು ಅಂತಾರೆ. ಇಲ್ಲಿ ಯಾವುದೇ ಸಮಸ್ಯೆಯಾದರೂ ಮೋದಿ ಬಂದು ಪರಿಹರಿಸುತ್ತಾರಾ. ಇಲ್ಲಿನ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳಬೇಕು ಅಲ್ಲವಾ..? ನರೇಂದ್ರ ಮೋದಿ ಅವರು 3 ಸಾವಿರ ಕೋಟಿ ರೂ.  ವಿಮಾನದಲ್ಲಿ ಓಡಾಡ್ತಾರೆ, 4 ಲಕ್ಷ ರೂಪಾಯಿ ಸೂಟ್ ಹಾಕಿಕೊಳ್ತಾರೆ ಎಂದು ಟೀಕಿಸಿದರು.

Key words: Modi, dies, PM, candidate, Rajukage

Tags :
Modi-dies - PM-candidate-Congress- MLA -Rajukage
Next Article