HomeBreaking NewsLatest NewsPoliticsSportsCrimeCinema

ಮೋದಿ ಎಂದರೆ ಹಿಂದೂ ಧರ್ಮ ಅಲ್ಲ:  ದೇಶದಲ್ಲಿ ಬಿಜೆಪಿಯಿಂದ ಹಿಂಸೆಗೆ ಪ್ರಚೋದನೆ- ಲೋಕಸಭೆಯಲ್ಲಿ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ

03:30 PM Jul 01, 2024 IST | prashanth

ನವದೆಹಲಿ,ಜುಲೈ,1,2024 (www.justkannada.in): ಮೋದಿ ಎಂದರೆ ಹಿಂದೂ ಧರ್ಮ ಅಲ್ಲ. ಆರ್ ಎಸ್ ಎಸ್, ಬಿಜೆಪಿ ಮಾತ್ರವೇ ಪೂರ್ತಿ ಹಿಂದೂ ಧರ್ಮವಲ್ಲ. ದೇಶದಲ್ಲಿ ಬಿಜೆಪಿ 24 ಗಂಟೆಗಳ ಕಾಲ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದರು.

ಲೋಕಸಭೆಸಭೆಯ ವಿಪಕ್ಷರಾದ ಬಳಿಕ ಮೊದಲ ಬಾರಿಗೆ ಭಾಷಣ ಮಾಡಿದ ರಾಹುಲ್ ಗಾಂಧಿ, ಮೋದಿ ನನ್ನ ಮೇಲೆ ಕೇಸ್ ಹಾಕಿಸಿದರು. ನನ್ನ ಮನೆ ಕಿತ್ತುಕೊಂಡರು. ನನ್ನ ರಾಜಕೀಯ ಭವಿಷ್ಯ ಮುಗಿಸಲು ಯತ್ನಿಸಿದರು.    10 ವರ್ಷದಿಂದ ವಿಪಕ್ಷಗಳ ಮೇಲೆ ವ್ಯವಸ್ಥಿತ ದಾಳಿ ನಡೆಸುತ್ತಿದ್ದಾರೆ.  ಬಿಜೆಪಿಯವರು ಹಿಂಸಾವಾದಿಗಳು. 10 ವರ್ಷದಿಂದ ಸಂವಿಧಾನದ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಆದರೆ  ಸಂವಿಧಾನ ರಕ್ಷಣೆಗೆ ನಾವು ಬದ್ದ ಎಂದರು.

ಅಯೋಧ್ಯೆಯಲ್ಲಿ ಬಡಜನರ ಭೂಮಿಯನ್ನ ಕಿತ್ತುಕೊಂಡಿದ್ದಾರೆ.  ಅಯೋಧ್ಯೆಯ ಜನರನ್ನ ಬಿಜೆಪಿ ಭಯಭೀತರನ್ನಾಗಿಸಿದೆ ಅಯೋಧ್ಯೆಯಿಂದ ಮೋದಿ ಸ್ಪರ್ಧೆಗೆ ಬಯಸಿದ್ದರು. ಅದರೆ ಸರ್ವೆ ಮಾಡುವವರು ಬೇಡ ಎಂದರು. ಬಳಿಕ ವಾರಣಾಸಿಯಿಂದ ಸ್ಪರ್ಧಿಸಿದರು. ಮೋದಿ ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.

ರಾಮಮಂದಿರ ಉದ್ಘಾಟನೆ ವೇಳೆ ಅದಾನಿ, ಅಂಬಾನಿ ಇದ್ದರು. ಆದರೆ ಜನರು ಇರಲಿಲ್ಲ. ಹೀಗಾಗಿ ಅಯೋಧ್ಯೆಯಲ್ಲಿ ಬಿಜೆಪಿಯನ್ನ ಸೋಲಿಸಿದ್ದಾರ. 24 ಗಂಟೆಗಳ ಕಾಲ ಬಿಜೆಪಿ ಹಿಂಸೆಗೆ ಪ್ರಚೋದಿಸುತ್ತಾರೆ.  ಬಿಜೆಪಿಯವರು ಬಡವರು ಮತ್ತು ಮಹಿಳೆಯರನ್ನ ಹೆದರಿಸುತ್ತಾರೆ.  ಬಿಜೆಪಿಯವರಿಗೂ ಮೋದಿ ಭಯ  ಹುಟ್ಟಿಸಿದ್ದಾರೆ ಎಂದು ರಾಹುಲ್ ಗಾಂಧಿ ತೀವ್ರ ಟೀಕೆ ಮಾಡಿದರು.

ತಮ್ಮನ್ನು ಹಿಂದೂಗಳು ಎಂದು ಕರೆದುಕೊಳ್ಳುವವರು ಹಿಂಸಾಚಾರ, ದ್ವೇಷ ಮತ್ತು ಸುಳ್ಳುಗಳ ಬಗ್ಗೆ ಮಾತ್ರ ಮಾತನಾಡುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದರು. ಈ ವೇಳೆ ರಾಹುಲ್ ಗಾಂಧಿ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಆಕ್ಷೇಪ ವ್ಯಕ್ತಪಡಿಸಿದರು.  ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಚಿತ್ರಿಸುವುದು ಗಂಭೀರ ವಿಷಯ ಎಂದು ಹೇಳಿದರು.

Key words: Modi, Hinduism, BJP, Rahul Gandhi, Lok Sabha

Tags :
BJPHinduismLok SabhaModiRahul Gandhi
Next Article