HomeBreaking NewsLatest NewsPoliticsSportsCrimeCinema

ಮೋದಿ ಈಗ ಮೌನಿ : ಪ್ರಪಂಚದಲ್ಲಿ ಎಲ್ಲೂ ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡದ ಪ್ರಧಾನಿ ಅಂದ್ರೆ ಅದು ಇವರೇ- ಬಿ.ಕೆ ಚಂದ್ರಶೇಖರ್  ವಾಗ್ದಾಳಿ.

01:51 PM Dec 20, 2023 IST | prashanth

ಮೈಸೂರು,ಡಿಸೆಂಬರ್,20,2023(www.justkannada.in):  ಸಂಸತ್ ನಲ್ಲಿ ವಿಪಕ್ಷಗಳ 141 ಸಂಸದರನ್ನು ಅಮಾನತುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ  ಮಾಜಿ ಸಚಿವ, ಹಿರಿಯ ಮುತ್ಸದ್ದಿ ರಾಜಕಾರಣಿ ಬಿ.ಕೆ ಚಂದ್ರಶೇಖರ್, ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಅವರು ಎಲ್ಲಿ ಸಂಕಷ್ಟ ಇರುತ್ತೋ ಅಲ್ಲಿ ಮೌನ ವಹಿಸುತ್ತಾರೆ. ಎಲ್ಲಿ ಅಬಾಷವಾಗುತ್ತದೆ ಎಂದು ತಿಳಿದರೆ ಅಲ್ಲಿ ಮೌನವಹಿಸುತ್ತಾರೆ.  ಪ್ರಪಂಚದಲ್ಲಿ ಎಲ್ಲೂ ಓಪನ್ ಪ್ರೆಸ್ ಕಾನ್ಫರೆನ್ಸ್ ಮಾಡದ ಪ್ರಧಾನಿ ಅಂದರೆ ಅದು ಪ್ರಧಾನಿ ಮೋದಿ ಮಾತ್ರ.  ಮನಮೋಹನ್ ಸಿಂಗ್ ಅವರನ್ನ ಮೌನಿ ಎಂದು ಜರಿಯುತ್ತಿದ್ದರು.ಆದರೆ ಈಗ ಮೋದಿಯವರೇ ಮೌನಿಯಾಗಿಬಿಟ್ಟಿದ್ದಾರೆ ಎಂದು ಟೀಕಿಸಿದರು.

ಸಂಸತ್ ಅಧಿವೇಶನ ಅಕ್ರಮ ಪ್ರವೇಶ ಪ್ರಕರಣ ಕುರಿತು  ಮೈಸೂರಿನಲ್ಲಿ ಮಾತನಾಡಿದ ಬಿ.ಕೆ ಚಂದ್ರಶೇಖರ್, ಸಂಸತ್ ಅಧಿವೇಶನಕ್ಕೆ ಅಕ್ರಮ ಪ್ರವೇಶ ತೀವ್ರ ಖಂಡನೀಯ. ಅವರ ಉದ್ದೇಶ ಬೇರೆ ಇದ್ದರೂ ಅವರು ಅಕ್ರಮ ಪ್ರವೇಶ ಮಾಡಿರುವುದು ದೊಡ್ಡ ತಪ್ಪು. ಅವರು ಕೊಲ್ಲೋಕೆ ಬರದಿದ್ದರೂ ಒಳಗೆ ಹೋದ ಮೇಲೆ ಏನಾದರೂ ಆಗಿದ್ದರೆ ಯಾರು ಜವಾಬ್ದಾರಿ.ಅಧಿವೇಶನದಲ್ಲಿ ಪ್ರಧಾನಿ ಅವರ ರಕ್ಷಣೆ ಮಾಡುವ ಕೆಲಸವನ್ನ ಬಿಜೆಪಿ ಸಂಸದರು ಮಾಡಿದ್ದಾರೆ. ಎರಡು ಸದನದಲ್ಲೂ ಅದೇ ಕೆಲಸವಾಗಿದೆ. ಸ್ಪೀಕರ್ ಅವರ ಬಗ್ಗೆ ನಾನಗೆ ಗೌರವಿದೆ. ಸದನದಲ್ಲಿ ಸ್ವೀಕರ್ ನಿರ್ಣಯ ಖಂಡನೀಯ ಎಂದು ಕಿಡಿಕಾರಿದರು.

ಭದ್ರತಾ ಲೋಪಕ್ಕೆ ಗೃಹ ಇಲಾಖೆ ಸಂಪೂರ್ಣ ಜವಾಬ್ದಾರಿ ಹೊರಬೇಕು. ಪ್ರಹ್ಲಾದ್ ಜೋಶಿಯವರು ರಾಜಕೀಯ ಮಾಡುತ್ತಾರೆ ಎಂಬ ಆರೋಪ ಮಾಡುತ್ತಿದ್ದಾರೆ. ಪಾಲಿಟಿಕ್ಸ್ ಎಂದರೆ ಏನು ಕಚಡ ಪಾಲಿಟಿಕ್ಸ್ ಅಲ್ಲ. ಪಾಲಿಟಿಕ್ಸ್ ಅಂದರೆ ಅದಕ್ಕೊಂದು ಗೌರವವಿದೆ. ಸಂವಿಧಾನದಲ್ಲಿ ಏನೇನಿದೆ ಅದೆಲ್ಲವೂ ರಾಜಕೀಯವೇ. ನಿನ್ನೇ 141 ಸಂಸದರನ್ನು ಸಸ್ಪೆಂಡ್ ಮಾಡಿ ದೊಡ್ಡ ರೆಕಾರ್ಡ್ ಮಾಡಿದ್ದಾರೆ. ಇನ್ನೂ ಕೆಲವು ವರ್ಷಗಳ ಕಾಲ  ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಸಂಪೂರ್ಣವಾಗಿ ಬದಲಿಸುವ  ಕೆಲಸ ಮಾಡುತ್ತಾರೆ. ಔಪಚಾರಿಕವಾಗಿ ಮಾತ್ರ ಇಟ್ಟುಕೊಂಡು ನಾಮಮಾತ್ರವಾಗಿ ಸಂವಿಧಾನ ಇರಬೇಕು ಹಾಗೆ ಮಾಡುತ್ತಾರೆ. ಇದೆಲ್ಲವು ಜನರಿಗೆ ತಿಳಿಯಬೇಕು. ಪ್ರಶ್ನೋತ್ತರ ಸಮಯದಲ್ಲಿ ವಿಪಕ್ಷಗಳಿಗೆ ಅವಕಾಶ ಮಾಡಿಕೊಡಬೇಕು. ಇದು ಪ್ರಜಾಪ್ರಭುತ್ವದ ಕತ್ತು ಹಿಸುಕುವ ಪ್ರಯತ್ನ ಎಂದು ಹೇಳಬಹುದು. ಸಂಸತ್ತಿನಲ್ಲಿ ಲೋಕಸಭೆ ,ರಾಜ್ಯಸಭೆಗೆ ಅಡ್ಡಿ ಎಂಬ ಒಂದೇ ಒಂದು ಕಾರಣ ಕಾರಣ ಒಡ್ಡಿ ಅಮಾನತು ಮಾಡಿದ್ದು ಖಂಡನೀಯ ಎಂಧು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು ವಿಮಾನ ನಿಲ್ದಾಣ ಹೆಸರು ವಿಚಾರದಲ್ಲಿ ಟಿಪ್ಪು v/s  ಮಹಾರಾಜ ಎಂದು ಬಿಂಬಿಸುವುದು ಬೇಡ.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ  ಮಾಜಿ ಸಚಿವ ಬಿ.ಕೆ ಚಂದ್ರಶೇಖರ್, ಈ‌ ವಿಚಾರದಲ್ಲಿ ಟಿಪ್ಪು v/s  ಮಹಾರಾಜ ಎಂದು ಬಿಂಬಿಸುವುದು ಬೇಡ. ರಾಜ್ಯಕ್ಕೆ ಮಹಾರಾಜರ ಕೊಡುಗೆ ಅಪಾರ ಇದೆ. ಟಿಪ್ಪು ಅವರ ಮೇಲೂ ನನಗೆ ಗೌರವವಿದೆ. ಅದರೆ ನಾನು ಇವರ ಹೆಸರನ್ನೇ ಇಡಬೇಕು ಎಂದು ವೈಕ್ತಿಕವಾಗಿ ಹೇಳಲಾರೆ. ಈ ಸಂಬಂಧ ಕುಳಿತು ಚರ್ಚಿಸಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು. ಇದು ಬಹಳ ಗಂಭೀರವಾದ ವಿಚಾರ ಎಂದರು.

Key words: Modi - silent –now- open -press conference - BK Chandrasekhar

Tags :
BK ChandrasekharModi - silent –now- openpress conference
Next Article