HomeBreaking NewsLatest NewsPoliticsSportsCrimeCinema

ಮೈಸೂರು : ಮುಖ್ಯಾಧಿಕಾರಿ ವರ್ಗವಾಣೆ ಬೆನ್ನಲ್ಲೇ ಮತ್ತೆ ಶುರುವಾದ ಹಣ ಅಕ್ರಮ ವರ್ಗಾವಣೆ..?

12:02 PM Jun 07, 2024 IST | mahesh

 

ಮೈಸೂರು, ಜೂ.07,2024: (www.justkannada.in news)  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ರೂ. ಹಣ ದುರುಪಯೋಗದ ಘಟನೆ ಮಾದರಿಯಲ್ಲೇ ಮೈಸೂರಿನ ಪಟ್ಟಣ ಪಂಚಾಯ್ತಿಯಲ್ಲೂ ಹಣದ ಅಕ್ರಮ ನಡೆದಿದೆ. ನಿಗಮದ ಖಾತೆಯಿಂದ ಅಕ್ರಮವಾಗಿ ಬೇರೆ ಬ್ಯಾಂಕಿನ ಖಾತೆಗೆ ವರ್ಗಾವಣೆ ಮಾಡಿದಂತೆ, ಸರಕಾರದ ಖಾತೆಗೆ ಸೇರ ಬೇಕಾಗಿದ್ದ ಸಾರ್ವಜನಿಕರ ಹಣವನ್ನು ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಅಕ್ರಮವೆಸಗಿದ್ದಾರೆ ಇಲ್ಲಿನ ಕೆಲ ನೌಕರರು.

ಇಲ್ಲಿನ  ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ನೌಕರರು ಸರ್ಕಾರದ ಹಣವನ್ನು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಪರಿಶೀಲನೆಗೆ ತನಿಖಾ ತಂಡ ರಚಿಸಲಾಗಿದೆ.

ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಯೋಜನಾ ನಿರ್ದೇಶಕರು, ಕೆಲ ದಿನಗಳ ಹಿಂದೆ ನಡೆಸಿದ ವಾಡಿಕೆ ತಪಾಸಣೆ ವೇಳೆ  ಈ ಅಕ್ರಮ ಬೆಳಕಿಗೆ ಬಂದಿದೆ. ತೆರಿಗೆದಾರರು ಪಾವತಿಸಿದ ಹಣಕ್ಕೆ ನಕಲಿ ಬಿಲ್ ನೀಡಿ ಹಣವನ್ನು ಸ್ವಂತ ಖಾತೆಗೆ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಹಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಬಿಲ್ ಪಾವತಿ ಬಗ್ಗೆ ಪರಿಶೀಲನೆ ನಡೆಸಿದ ನಂತರ ಹಣ ದುರುಪಯೋಗದ ಬಗ್ಗೆ ಮಾಹಿತಿ ಬೆಳಕಿಗೆ ಬಂದಿದೆ.

ಖಾತಾ ನೀಡಿಕೆ, ವರ್ಗಾವಣೆ ಹಾಗೂ ಇನ್ನಿತರೆ ಮೂಲಗಳಿಂದ ಸಂದಾಯವಾದ ಹಣವು ನೌಕರರ ಖಾತೆಗೆ ವರ್ಗವಾಗಿದೆ. ನಗದು ಲೆಕ್ಚರ್‌ಗಳು ಮತ್ತು ರಸೀದಿ ಅನ್ನು ಪರಿಶೀಲಿಸಿ ಬ್ಯಾಂಕ್‌ನಲ್ಲಿ ಠೇವಣಿ ಮಾಡಿದ ಹಣಕ್ಕೆ ತಾಳೆ ಮಾಡಿ ವರದಿ ಸಲ್ಲಿಸುವಂತೆ ಡಿಯುಡಿಸಿ ಯೋಜನಾ ನಿರ್ದೇಶಕರು ಪಂಚಾಯಿತಿ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ.

Contextual picture

ಈ ಹಿಂದೆಯೂ ನಡೆದಿತ್ತು:

ಸಾರ್ವಜನಿಕರು ಪಾವತಿಸುವ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಈ ಹಿಂದೆಯೂ ಇಲ್ಲಿ ನಡೆದಿತ್ತು. 2020 ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಇದು ಮೇಲ್ದರ್ಜೆಗೇರಿತ್ತು. ಆ ನಂತರದ ದಿನಗಳಲ್ಲಿಇದೇ ರೀತಿ ಹಣ ದುರುಪಯೋಗ ನಡೆದಿತ್ತು. ಆಗ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಯಾಗಿದ್ದ ಶ್ರೀಧರ್‌ ಅವರು ಇದನ್ನು ಪತ್ತೆ ಹಚ್ಚಿದ್ದರು. ಮಾತ್ರವಲ್ಲದೆ, ಹಣ ದುರುಪಯೋಗ ಪಡಿಸಿಕೊಂಡ ನೌಕರರಿಂದಲೇ ಹಣ ವಸೂಲಿ ಮಾಡಿದ್ದರು.

ಇದೀಗ ಕೆಲ ಸಮಯದ ಹಿಂದೆ ಶ್ರೀಧರ್‌ ಅವರು ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ಅವರು ವರ್ಗಗೊಂಡ ಬೆನ್ನಲ್ಲೇ ಮತ್ತೆ ಅದೇ ಸಿಬ್ಬಂದಿಗಳು ತಮ್ಮ ಹಳೇ ಚಾಳಿ ಮುಂದುವರೆಸಿದ್ದಾರೆ.

key words:  Mysore, After the transfer of the Chief Officer, money laundering has resumed?

 

SUMMARY:

The employees of Srirampur town panchayat had transferred government money to their personal bank accounts and an investigation team was formed to look into the matter after the incident came to light.

The irregularities came to light during a routine inspection conducted by the project director of the District Urban Development Cell (DUDC) a few days ago. The money was transferred to his own account by giving a fake bill for the money paid by the taxpayers. The information about the misappropriation of funds came to light after examining the documents related to the money and the payment of bills.

 

 

Tags :
After the transfer of the Chief Officermoney laundering has resumed?Mysore.
Next Article