HomeBreaking NewsLatest NewsPoliticsSportsCrimeCinema

ಮಾಸಿಕ ಹುಂಡಿ ಎಣಿಕೆ: ಬರೋಬ್ಬರಿ 2.90 ಕೋಟಿ ರೂ. ಒಡೆಯನಾದ ಮಲೆ ಮಾದಪ್ಪ.

10:59 AM Jan 04, 2024 IST | prashanth

ಹನೂರು,ಜನವರಿ,4,2024(www.justkannada.in): ಪ್ರಸಿದ್ಧ ಯಾತ್ರಸ್ಥಳ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,  ಮಲೆ ಮಾದಪ್ಪ ಬರೋಬ್ಬರಿ 2.90 ಕೋಟಿ ರೂ. ಒಡೆಯನಾಗಿದ್ದಾನೆ.

ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಕೇವಲ 33 ದಿನಗಳಿಗೆ 2.90 ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮತ್ತು ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿ ಹಣ ಏಣಿಕೆ ಕಾರ್ಯ ನಡೆಯಿತು.

ನಿನ್ನೆ ಬೆಳಗ್ಗೆ 8 ಗಂಟೆಯಿಂದ ರಾತ್ರಿ 10.30 ರವರಗೆ ಹುಂಡಿ ಎಣಿಕಾ ಕಾರ್ಯ ನಡೆದಿದ್ದು, ಕ್ರಿಸ್ಮಸ್, ಹೊಸ ವರ್ಷ, ಸಾಲು ಸಾಲು ರಜೆ ಹಿನ್ನಲೆ  ಶ್ರೀ ಮಲೆ ಮಹದೇಶ್ವರ ಕ್ಷೇತ್ರಕ್ಕೆ ಭಕ್ತ ಸಾಗರ ಹರಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಹುಂಡಿಯಲ್ಲಿ 2,90,00732 ನಗದು, 102 ಗ್ರಾಂ ಚಿನ್ನ, 3.355 ಗ್ರಾಂ ಬೆಳ್ಳಿ, ಸಂಗ್ರಹವಾಗಿದೆ.

ರಾಜ್ಯದ ಅತ್ಯಂತ ಹೆಚ್ಚಿನ ಆದಾಯ ಬರುವ ದೇವಾಲಯಗಳಲ್ಲಿ ಮಲೆ ಮಹದೇಶ್ವರ ಬೆಟ್ಟ ಎರಡನೇ ಸ್ಥಾನದಲ್ಲಿದೆ.  ಪ್ರತಿ ತಿಂಗಳಿಗೂ ಗಣನೀಯವಾಗಿ ಹುಂಡಿ ಹಣ ಏರಿಕೆಯಾಗುತ್ತಿದೆ.

Key words: Monthly- Hundi –Count-Rs 2.90 crore - Male Mahadeshwara-hills

Tags :
Monthly- Hundi –Count-Rs 2.90 crore - Male Mahadeshwara-hills
Next Article