For the best experience, open
https://m.justkannada.in
on your mobile browser.

ಹೆಚ್ಚು ಮಳೆಯೂ ಬರಲಿ ತಮಿಳುನಾಡಿಗೂ ನೀರು ಹರಿಯಲಿ- ಡಿಸಿಎಂ ಡಿ.ಕೆ ಶಿವಕುಮಾರ್.

01:20 PM May 22, 2024 IST | prashanth
ಹೆಚ್ಚು ಮಳೆಯೂ ಬರಲಿ ತಮಿಳುನಾಡಿಗೂ ನೀರು ಹರಿಯಲಿ  ಡಿಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು, ಮೇ,22,2024 (www.justkannada.in): ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಈ ಮಧ್ಯೆ ನಿನ್ನೆ ಸಭೆ ನಡೆಸಿದ್ದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಿದೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಮಳೆಯಾಗಲಿ. ಜಾಸ್ತಿ ಮಳೆಯಾದಷ್ಟೂ ನಮಗೆ ಒಳ್ಳೆಯದು. ಹೆಚ್ಚು ಮಳೆ ಬಂದು ತಮಿಳುನಾಡಿಗೂ ನೀರು ಹರಿಯಲಿ ಎಂದು ತಿಳಿಸಿದ್ದಾರೆ.

ಹಾಗೆಯೇ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಇಂದು ಸಿಟಿ ರೌಂಡ್ ಮಾಡುತ್ತಿದ್ದೇವೆ. ಕೆಲವು ಜಾಗ ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ರಿಪೋರ್ಟ್ ಬಂದಿದೆ ಅಲ್ಲಿಗೆ ಬೇಟಿ ನೀಡುತ್ತಿದ್ದೇವೆ. ಆಡಳಿತ ಚುರುಕು ಮಾಡಬೇಕು ಎಂದು ಈ ಕ್ರಮ ಕೈಗೊಂಡಿದ್ದೇವೆ ಎಂದರು.

ರಾತ್ರಿ ಔತಣಕೂಟವಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಲೋಕಸಭೆ ಚುನಾವಣೆಯ ಯಾವ ರೀತಿ ಎದುರಿಸಲಾಗಿದೆ? ಮುಂದಿ ಯಾವ ರೀತಿ ಸಿದ್ಧತೆ ಬೇಕು ಎಂಬ ಕುರಿತು ಚರ್ಚಿಸಲಿದ್ದೇವೆ ಎಂದು  ಡಿಕೆ ಶಿವಕುಮಾರ್ ತಿಳಿಸಿದರು.

Key words: more rain, water, Tamil Nadu, DK Shivakumar

Tags :

.