For the best experience, open
https://m.justkannada.in
on your mobile browser.

ಪುತ್ರನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

06:12 PM Jul 13, 2024 IST | prashanth
ಪುತ್ರನನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಾಯಿ

ಬೆಂಗಳೂರು,ಜುಲೈ,13,2024 (www.justkannada.in):  ತಾಯಿಯೊಬ್ಬಳು ಮಗನನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಯಲಂಕದ RNZ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದೆ.  ತಾಯಿ ರಮ್ಯಾ (40) ಎಂಬಾಕೆಯೇ ತನ್ನ ಮಗ  ಭಾರ್ಗವ್ (13)ನನ್ನು ಕೊಲೆ ಮಾಡಿ  ಬಳಿಕ ತಾನು ಕೂಡ ನೇಣಿಗೆ ಶರಣಾಗಿದ್ದಾಳೆ.

ಮೂರು ತಿಂಗಳ ಹಿಂದೆ ರಮ್ಯಾ ಪತಿ ಶ್ರೀಧರ್ ಕ್ಯಾನ್ಸರಿಂದ ಮೃತಪಟ್ಟಿದ್ದರು. ಹೀಗಾಗಿ ಈ ಘಟನೆಯಿಂದ  ರಮ್ಯಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಪುತ್ರನನ್ನು ಮೊದಲು ಕೊಲೆಗೈದು ನಂತರ ರಮ್ಯ ನೇಣಿಗೆ ಶರಣಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: mother, killed, son, committed suicide

Tags :

.