HomeBreaking NewsLatest NewsPoliticsSportsCrimeCinema

ನಾನು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಲು ನಿರ್ಧರಿಸಿದ್ದೆ- ಸಚಿವ ಕೆ.ಎನ್ ರಾಜಣ್ಣ.

12:03 PM Jan 10, 2024 IST | prashanth

ಬೆಂಗಳೂರು,ಜನವರಿ,10,2024(www.justkannada.in): ತುಮಕೂರು ಲೋಕಸಭಾ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡಲು ನಿರ್ಧರಿಸಿದ್ದೆ. ಆದರೆ ನಾನು ಸದ್ಯ ಸ್ಪರ್ಧೆ ಮಾಡಬಾರದು ಅಂತಾ ಅಭಿಪ್ರಾಯಕ್ಕೆ ಬಂದಿದ್ದೇನೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೆ.ಎನ್ ರಾಜಣ್ಣ, ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ದೆಹಲಿಯಲ್ಲಿ ಸಚಿವರ ಸಭೆ ಇದೆ.  ಕೆಲವೆಡೆ ಸಚಿವರ ಸ್ಫರ್ಧೆ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ. ನನ್ನ ಸ್ಪರ್ಧೆ ಬಗ್ಗೆ ತಿಳಿಸಿದರೇ ಸ್ಪರ್ಧಿಸುತ್ತೇನೆ. ಅಗತ್ಯವಿದ್ದರೇ  ಸಚಿವರು ಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂದರು.

ಯಾವ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಇನ್ನೂ ಫೈನಲ್ ಆಗಿಲ್ಲ. ಶಿವಮೊಗ್ಗ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷರು ಅಭ್ಯರ್ಥಿ ಹೆಸರು ಹೇಳಿದ್ದಾರೆ   ನಟಿ ಶಿವರಾಜ್ ಕುಮಾರ್ ಪತ್ನಿ ಗೀತಾ ಅವರನ್ನ ಕಣಕ್ಕಿಳಿಸುತ್ತೇವೆ ಎಂದಿದ್ದಾರೆ.  ಅದು ಫೈನಲ್ ಆಗಿದೆಯೋ ಏನು ಗೊತ್ತಿಲ್ಲ ಎಂದರು.

Key words: MP-Election-contest - Tumkur -constituency - Minister KN Rajanna.

Tags :
constituencyKN RajannaministerMP-Election-contest - Tumkur
Next Article