For the best experience, open
https://m.justkannada.in
on your mobile browser.

ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ, ಎಸ್ ಐಟಿ ಏನು ಮಾಡುತ್ತಿದೆ..? ಹೆಚ್ ಡಿಕೆ ಕಿಡಿ.

01:10 PM May 08, 2024 IST | prashanth
ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ  ಎಸ್ ಐಟಿ ಏನು ಮಾಡುತ್ತಿದೆ    ಹೆಚ್ ಡಿಕೆ ಕಿಡಿ

ಬೆಂಗಳೂರು,ಮೇ,8,2024 (www.justkannada.in): ಮಿಸ್ಟರ್ ಪರಮೇಶ್ವರ್ ಗೆ ಕೇಳುತ್ತೇನೆ. ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ ಐಟಿ ಏನು ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾ,ಮಿ ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಹೆಣ್ಣುಮಕ್ಕಳ ಪೆನ್ ಡ್ರೈವ್ ಬಿಡುಗಡೆಯಾಗಿದೆ ಇದಕ್ಕೆ ಯಾರು ಕಾರಣ  ಅನ್ನೋದು ತನಿಖೆಯಾಗಬೇಕು ಎಂದು  ಮಹಿಳಾ ಆಯೋಗ ಹೇಳಿದೆ. ಪೆನ್ ಡ್ರೈವ್ ಪ್ರಕರಣದಲ್ಲಿ ಎಸ್ ಐಟಿ ಏನು ಮಾಡುತ್ತಿದೆ. ಮಿಸ್ಟರ್ ಪರಮೇಶ್ವರ್ ಗೆ ನಾನು ಕೇಳುತ್ತೇನೆ. ರೇವಣ್ಣ, ಪ್ರಜ್ವಲ್ ರೇವಣ್ಣ ಇವರ ಟಾರ್ಗೆಟ್. ಕಾರ್ತಿಕ್ ಗೌಡಗೆ ಟ್ರೈನ್ ಅಪ್ ಮಾಡ್ತಾ ಇದ್ದಾರೆ ಎಂದು ಹರಿಹಾಯ್ದರು.

ಇದೇ ವೇಳೆ ಕಾರ್ತಿಕ್ ಗೌಡ ವಿರುದ್ದ ಆಕ್ರೋಶ ಹೊರ ಹಾಕಿದ ಹೆಚ್ ಡಿಕೆ, ಯಾರ ಬಳಿ ಎಷ್ಟು ದುಡ್ಡು ತೆಗೆದುಕೊಂಡಿದ್ದಿಯಾ..? 14 ವರ್ಷ ಕಾರ್ತಿಕ್ ಪ್ರಜ್ವಲ್ ಬಳಿ ಏಕೆ ಕೆಲಸ ಮಾಡಿದ್ದ ಕಲ್ಲು ಬಂಡೆಯೂ ಕಾನೂನಿಗೆ ತಲೆಬಾಗಬೇಕು ಎಂದು ವಾಗ್ದಾಳಿ ನಡೆಸಿದರು.

Key words: Mr. Parameshwar, SIT, pendrive, case, HDK

Tags :

.