For the best experience, open
https://m.justkannada.in
on your mobile browser.

MUDA COMMISSIONER ತಲೆದಂಡ, ನಿವೇಶನ ಹಂಚಿಕೆ ರದ್ದು: ಸಚಿವ ಬೈರತಿ ಸುರೇಶ್

08:53 PM Jul 01, 2024 IST | mahesh
muda commissioner  ತಲೆದಂಡ  ನಿವೇಶನ ಹಂಚಿಕೆ ರದ್ದು  ಸಚಿವ ಬೈರತಿ ಸುರೇಶ್

ಮೈಸೂರು, June. 01, 2024: (www.justkannada.in news) ಮೈಸೂರು ನಗರಾಭಿವೃದ್ಧಿ ಇಲಾಖೆ (ಮುಡಾ) ದ 50:50 ಸೈಟು ಹಂಚಿಕೆ ವಿಚಾರ. ಮುಡಾ ಆಯುಕ್ತ ದಿನೇಶ್ ಕುಮಾರ್ ಜಿ.ಟಿ. ತಲೆದಂಡ. ತಕ್ಷಣದಿಂದಲೇ ಜಾರಿಗೆ ಬರುವಂತೆ ಸಚಿವ ಭೈರತಿ ಸುರೇಶ್ ಮೌಖಿಕ ಆದೇಶ.

50:50 ನಿವೇಶನ ಹಂಚಿಕೆಯಲ್ಲಿ ಅಕ್ರಮಗಳ ಬಗ್ಗೆ 4 ವಾರಗಳಲ್ಲಿ ವರದಿ ನೀಡುವಂತೆ ಆದೇಶ. ಇಬ್ಬರು  IAS  ಅಧಿಕಾರಿಗಳಾದ ವೆಂಕಟಚಲಪತಿ, ಕವಳಗಿ ಇಂದ ತನಿಖೆ. ಆರೋಪ ಹಿನ್ನಲೆ ಮುಡಾ ಆಯುಕ್ತ, ಕಾರ್ಯದರ್ಶಿ, ಎಇಇ ಕೂಡ ವರ್ಗಾವಣೆ.

ಸುದ್ದಿಗೋಷ್ಟಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ.

ಮುಂದಿನ ಒಂದು ತಿಂಗಳು ಯಾವುದೇ ಸೈಟ್ ಹಂಚಿಕ,ಮುಡಾ ಸಭೆ ಕೂಡ ಮಾಡುವಂತಿಲ್ಲ. ಈ ಹಿಂದೆ ಹಂಚಿಕೆಯಾಗಿರೋ ಎಲ್ಲಾ ಸೈಟುಗಳನ್ನ ಕೂಡ ತಡೆ ಹಿಡಿಯಲಾಗುತ್ತದೆ.  ವರ್ಗಾವಣೆ ಅಧಿಕಾರಿಗಳ ವಿರುದ್ಧ ಕ್ರಮ ಅಲ್ಲ, ನಿಷ್ಪಕ್ಷಪಾತ ತನಿಖೆ ಹಿನ್ನಲೆ ಅಧಿಕಾರಿಗಳ ವರ್ಗಾವಣೆಗೆ ಕ್ರಮ.

ಹಂಚಿಕೆ ರದ್ದು :

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಹಗರಣ ಪ್ರಕರಣ. ಮುಡಾದಲ್ಲಿ 50-50 ಅನುಪಾತದಲ್ಲಿ ನಿಯಮ ಬಾಹಿರ ಹಂಚಿಕೆಯನ್ನು ರದ್ದು ಮಾಡಲಾಗಿದೆ. ಸಚಿವ ಭೈರತಿ ಸುರೇಶ್ ಹೇಳಿಕೆ.

ನಗರಾಭಿವೃದ್ಧಿ ಪ್ರಾಧಿಕಾರದ ಕಾಯ್ದೆ 87ರ ಅನ್ವಯ ರದ್ದು ಪಡಿಸಲು ಆದೇಶ ಮಾಡಲಾಗಿದೆ.

27-102023ರಲ್ಲಿ ಈ ಆದೇಶ ಮಾಡಲಾಗಿದೆ. 50-50 ಅನುಪಾತ ಜಾರಿಗೆ ಬಂದಿದ್ದ 2020ನೇ ಇಸವಿಯಲ್ಲಿ. ಜಾಗ ನೀಡಲು ಕ್ಯಾಬಿನೆಟ್ ಸಮ್ಮತಿ ಬೇಕೆಂದಿರುವ ನಿಯಮ. ಆದರೆ ಈವರೆಗೆ ಮೂಡಾ ನೀಡಿರುವ ಜಾಗಕ್ಕೆ ಯಾವುದೇ ಕ್ಯಾಬಿನೆಟ್ ತೀರ್ಮಾನ ಆಗಿಲ್ಲ. ಇದೇ ನಿಯಮದಲ್ಲಿ ಸಾಕಷ್ಟು ಸೈಟ್ ನೀಡಿರುವ ಮೂಡಾ ಅಧಿಕಾರಿಗಳು.

ಇಲ್ಲಿ ಎಷ್ಟು ಅಕ್ರಮ ಆಗಿದೆ ಅಂತ ಗೊತ್ತಿಲ್ಲ.

ಇದನ್ನು ತಿಳಿದುಕೊಳ್ಳುವ ಸಲುವಾಗಿಯೇ ತನಿಖೆ ನಡೆಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಯಾವುದೇ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಈ ನಿಯಮ ಜಾರಿಗೆ ತಂದಿದೆ. ಅಲ್ಲಿಂದ ಏನು ಆಗಿದೆ ಎಂಬುದನ್ನು ತಿಳಿಯಬೇಕಿದೆ.

KEY WORDS: MUDA COMMISSIONER, DENISH KUMAR, Transferred, allotment of plots cancelled, Minister Byrathi Suresh

Tags :

.