For the best experience, open
https://m.justkannada.in
on your mobile browser.

ಮುಡಾ ಹಗರಣ : ರಾಜ್ಯಪಾಲರಿಗೆ ಮತ್ತೊಂದು ದೂರು

06:32 PM Sep 19, 2024 IST | prashanth
ಮುಡಾ ಹಗರಣ   ರಾಜ್ಯಪಾಲರಿಗೆ ಮತ್ತೊಂದು ದೂರು

ಬೆಂಗಳೂರು,ಸೆಪ್ಟಂಬರ್,19,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದ್ದು ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇದನ್ನ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಮಧ್ಯೆ ಇದೀಗ ಮುಡಾ ಕಾಮಗಾರಿ ಕುರಿತು ರಾಜ್ಯಪಾಲರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.

ಮುಡಾ ನಿವೃತ್ತ ಸಿಬ್ಬಂದಿ ನಟರಾಜ್ ಎಂಬುವವರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.  ನಿಯಮ ಬಾಹಿರವಾಗಿ ನಡೆದಿರುವ ಕಾಮಗಾರಿಗಳಿಗೆ ಸಿಎಂ ಮೌಖಿಕ ಆದೇಶ ಇದೇ ಎಂಬ ವಿಚಾರಕ್ಕೆ ಆಕ್ಷೇಪ, ಪ್ರಕರಣ ಸಂಬಂಧ ಸಿಬಿಐಯಿಂದ ತನಿಖೆ ನಡೆಯುವಂತೆ ರಾಜ್ಯಪಾಲರಿಗೆ ನಟರಾಜ್ ಒತ್ತಾಯ ಮಾಡಿದ್ದಾರೆ.

ಮುಡಾದಲ್ಲಿ 450 ಕೋಟಿಗೂ ಅಧಿಕ ಹಣ ಅಕ್ರಮ ಕಾಮಗಾರಿಗೆ ಪೋಲಾಗಿದೆ. ಸಿಎಂ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಕಾಮಗಾರಿ ನಡೆಸಲು ಹೊರಟಿದ್ದಾರೆ. ವರುಣ ವಿಧಾನಸಭಾ ಕ್ಷೇತ್ರಕ್ಕೆ 40 ಕೋಟಿ ಶ್ರೀರಂಗಪಟ್ಟಣ ಕ್ಷೇತ್ರಕ್ಕೆ 15 ಕೋಟಿ ಹಣವನ್ನು ಕ್ಯಾಬಿನೆಟ್ ನಿಂದ ಒಪ್ಪಿಗೆ ಪಡೆಯಲಾಗಿದೆ. ಆಯುಕ್ತರು ಈ ಕಾಮಗಾರಿ ನಡೆಸುವಾಗ ಮುಖ್ಯಮಂತ್ರಿಗಳ ಮೌಖಿಕ ಆದೇಶದ ಮೇರೆಗೆ ನಡೆಸುತ್ತಿರುವ ಕಾಮಗಾರಿಗಳು ಎಂದು ಉಲ್ಲೇಖಿಸಿದ್ದಾರೆ. ಆದ್ರೆ ಇದಕ್ಕೆ ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಕೊಡಲು ಅವಕಾಶವೇ ಇಲ್ಲ. ಕರ್ನಾಟಕ ನಗರಾಭಿವೃದ್ದಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶವಿಲ್ಲ ಮುಡಾ ಕೇವಲ ನಗರ ವ್ಯಾಪ್ತಿಯಲ್ಲಿ ಮಾತ್ರ ಕಾಮಗಾರಿ ಮಾಡಬೇಕು. ಇಲ್ಲಿ ಯಾರನ್ನು ಮೆಚ್ಚಿಸಲು ಗ್ರಾಮಾಂತರ ಭಾಗದಲ್ಲಿ ಅಧಿಕಾರಿಗಳು ಕಾಮಗಾರಿ ಕೈಗೆತ್ತಿಗೊಂಡಿದ್ದಾರೆ?  ಎಂದು ನಟರಾಜು ಪ್ರಶ್ನಿಸಿದ್ದಾರೆ.

ಇದಕ್ಕೆ ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್, ಮುಡಾ ಸಭೆ ಅಧ್ಯಕ್ಷತೆ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ರಾಜೇಂದ್ರ ಉತ್ತರ ಕೊಡಬೇಕು ಅಧಿಕಾರಿಗಳು ಹೇಳಿರುವಂತೆ ಮುಖ್ಯಮಂತ್ರಿಗಳ ಮೌಖಿಕ ಆದೇಶ ಆಗಿದ್ದರೆ ಅದು ಹೇಗೆ ಎಂಬುದನ್ನು ಸಿಎಂ ಸ್ಪಷ್ಟ ಪಡಿಸಬೇಕು. ಸಮಗ್ರ ತನಿಖೆಗೆ ಸಿಬಿಐ ಗೆ ಪ್ರಕರಣ ವಹಿಸುಬೇಕು ಎಂದು ನನ್ನ ದೂರು. ಈ ಮೂಲಕ ನಗರಾಭಿವದ್ದಿಗಾಗಿ ಮೀಸಲಿಟ್ಟ ಹಣ ಪೋಲಾಗದಂತೆ ಕಾಪಾಡಬೇಕು ಎಂದು  ಸಾಮಾಜಿಕ ಕಾರ್ಯಕರ್ತ ನಟರಾಜ್ ಆಗ್ರಹಿಸಿದ್ದಾರೆ.

Key words: Muda Scam,  Another, complaint, Governor

Tags :

.