HomeBreaking NewsLatest NewsPoliticsSportsCrimeCinema

ಮುಡಾ ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ: ಸ್ಪೀಕರ್ ಯುಟಿ ಖಾದರ್

10:30 AM Jul 25, 2024 IST | prashanth

ಬೆಂಗಳೂರು,ಜುಲೈ,25,2024 (www.justkannada.in):  ಮುಡಾ ಹಗರಣ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ ನಡೆಸುತ್ತಿರುವ ಕುರಿತು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಪೀಕರ್ ಯುಟಿ ಖಾದರ್, ಸಭಾಧ್ಯಕ್ಷನಾಗಿ ನಿಯಮದಂತೆ ನಾನು ಅವಕಾಶ ಕೊಟ್ಟಿದ್ದೇನೆ. ವಾಲ್ಮಿಕಿ ಹಗರಣ ತನಿಖೆಯಲ್ಲಿದ್ದರೂ ಚರ್ಚೆಗೆ ಅವಕಾಶ ಕೊಟ್ಟಿದ್ದೆ. ಈಗ ಮುಡಾ ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಹುಟ್ಟಿ ಹಾಕಿದಂತಾಗುತ್ತದೆ.ಕೆಟ್ಟ ಸಂಪ್ರದಾಯಕ್ಕೆ ಅವಕಾಶ ನೀಡಲ್ಲ ಎಂದರು.

ಪ್ರತಿಪಕ್ಷದ ಮಿತ್ರರ ಜೊತೆ ಚರ್ಚೆ ಮಾಡಿದೆವು. ಅವರಿಗೆ ಬೇಕಾದ ಸವಲತ್ತಿಗೆ ಅವಕಾಶ ನೀಡಿದ್ದೇವೆ‌. ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಟ್ಟರೆ ಕೆಟ್ಟ ಸಂಪ್ರದಾಯ ಆರಂಭವಾಗುತ್ತದೆ ಎಂದು ಹೇಳಿದರು.

Key words: Muda scam, bjp, protest, Speaker, UT Khader

Tags :
BJPMuda scamprotestSpeakerUT Khader
Next Article