For the best experience, open
https://m.justkannada.in
on your mobile browser.

ಮುಡಾ ಹಗರಣ ಸಿಬಿಐಗೆ ವಹಿಸಲು ಯಾಕೆ ಭಯ? ಡಿಸಿ ವರ್ಗಾವಣೆ ಯಾಕೆ ಮಾಡಿದ್ರಿ? ಪ್ರಹ್ಲಾದ್ ಜೋಶಿ ಕಿಡಿ

01:46 PM Jul 06, 2024 IST | prashanth
ಮುಡಾ ಹಗರಣ ಸಿಬಿಐಗೆ ವಹಿಸಲು ಯಾಕೆ ಭಯ  ಡಿಸಿ ವರ್ಗಾವಣೆ ಯಾಕೆ ಮಾಡಿದ್ರಿ  ಪ್ರಹ್ಲಾದ್ ಜೋಶಿ ಕಿಡಿ

ಹುಬ್ಬಳ್ಳಿ, ಜುಲೈ 6,2024 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ  ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಡಾ ಹಗರಣ ಸಿಬಿಐಗೆ ವಹಿಸಲು ಯಾಕೆ ಭಯ? ಮೈಸೂರು ಜಿಲ್ಲಾಧಿಕಾರಿಯನ್ನ ಯಾಕೆ ವರ್ಗಾವಣೆ ಮಾಡಿದ್ರಿ? ಮುಡಾದಲ್ಲಿ ಹಗರಣ ಆಗಿಲ್ಲ ಅಂದರೆ ಯಾಕೆ ಭಯ. ಮೈಸೂರು ಡಿಸಿ ಯಾಕೆ ವರ್ಗವಣೆ ಮಾಡಿದ್ರಿ.  ಹಗರಣ ಸಿಬಿಐಗೆ ನೀಡಲು ನಿಮಗೆ ಯಾಕೆ ಭಯ?  ನೀವು ರಾಜೀನಾಮೆ ಕೊಟ್ಟು ತನಿಖೆ ಮಾಡಿಸಿ ಎಂದು ಹೇಳಲ್ಲ ಮುಡಾ ಹಗರಣವನ್ನ ಸಿಬಿಐ ತನಿಖೆಗೆ ವಹಿಸಿ. ತನಿಖೆಯನ್ನ ಆಳವಾಗಿ ಮಾಡಬೇಕು ಎಂದರು.

ಮುಡಾ ಹಗರಣದಲ್ಲಿ ಬಹಳ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಆಗಿದೆ. ಮೇಲ್ನೋಟಕ್ಕೆ ಇದು ಸ್ಪಷ್ಟವಾಗಿದೆ. 2017 ರಲ್ಲಿ ಈ ನಿರ್ಣಯಗಳಾಗಿವೆ. ಸಿದ್ದರಾಮಯ್ಯ ಗಮನದಲ್ಲಿ ಇದ್ದೇ ಆಗಿರುವ ಬಹುದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ.

ನೀವ ಏನೂ ಮಾಡಿಲ್ಲ ಅಂದ್ರೆ ಮೈಸೂರು ಡಿಸಿಯನ್ನು ಯಾಕೆ ವರ್ಗಾವಣೆ ಮಾಡಿದ್ದೀರಿ? ಅವ್ಯವಹಾರ ನಡೆಯುತ್ತಿದೆ ಎಂದು ಡಿಸಿ ಪತ್ರ ಬರೆದಿದ್ದರು. ಕಳೆದ ಒಂದು ವರ್ಷದಲ್ಲಿ 15 ಕ್ಕೂ ಹೆಚ್ಚು ಪತ್ರ ಬರೆದಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಹಾಗೂ ಮಗ ಜಮೀನು ವಶಪಡಿಸಿಕೊಂಡಿದ್ದಾರೆ ಎಂದಿದ್ದಾರೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.

Key words: Muda scam, CBI, transfer, DC, Prahlad Joshi

Tags :

.