ಸಂಜೆಯೊಳಗೆ ಸಚಿವ ಭೈರತಿ ಸುರೇಶ್ ರಾಜೀನಾಮೆ ಪಡೆಯಿರಿ- ಶಾಸಕ ಶ್ರೀವತ್ಸ ಆಗ್ರಹ
10:27 AM Sep 03, 2024 IST | prashanth
ಮೈಸೂರು, ಸೆಪ್ಟಂಬರ್,3,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಿಂದಿನ ಆಯುಕ್ತ ದಿನೇಶ್ ಕುಮಾರ್ ರನ್ನು ಅಮಾನತು ಮಾಡಲಾಗಿದ್ದು ಈ ಕುರಿತು ಬಿಜೆಪಿ ಶಾಸಕ ಶ್ರೀವತ್ಸ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ಶ್ರೀವತ್ಸ, ಸಂಜೆಯೊಳಗೆ ಭೈರತಿ ಸುರೇಶ್ ರಾಜೀನಾಮೆ ಪಡೆಯಿರಿ. ಮುಡಾದಲ್ಲಿ ಅದ್ವಾನ ನಡೆಯಲು ಸಚಿವರೇ ಕಾರಣ. ಕೇವಲ ದಿನೇಶ್ ಕುಮಾರ್ ಅಮಾನತು ಸಾಲದು ಅಕ್ರಮದಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
Key words: muda scam, Minister, Bhairati Suresh, resign, MLA Srivatsa