For the best experience, open
https://m.justkannada.in
on your mobile browser.

MUDA ಹಗರಣದ ರೂವಾರಿ ಸಚಿವ ಬೈರತಿ ಸುರೇಶ್‌, ಒದ್ದು ಒಳಗಾಕಿ : ಸಿದ್ದರಾಮಯ್ಯಗೆ ಸಲಹೆ ನೀಡಿದ ವಿಶ್ವನಾಥ್.‌

12:51 PM Jul 30, 2024 IST | mahesh
muda ಹಗರಣದ ರೂವಾರಿ ಸಚಿವ ಬೈರತಿ ಸುರೇಶ್‌  ಒದ್ದು ಒಳಗಾಕಿ   ಸಿದ್ದರಾಮಯ್ಯಗೆ ಸಲಹೆ ನೀಡಿದ ವಿಶ್ವನಾಥ್ ‌

ಮೈಸೂರು. ಜು.30,2024: (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದಲ್ಲಿ ನಾವ್ಯಾರು 50:50 ನಿವೇಶನ ಪಡೆದಿಲ್ಲ. ಬದಲಿಗೆ ನಾನು ಕಾನೂನು ಬದ್ದವಾಗಿಯೇ ನಿವೇಶನ ಪಡೆದಿದ್ದೇನೆ ಎಂದು ವಿಧಾನ ಪರಿಷತ್‌ ಸದಸ್ಯ ಅಡಗೂರು ಎಚ್.ವಿಶ್ವನಾಥ್‌ ಸ್ಪಷ್ಟನೆ ನೀಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೇಳಿದಿಷ್ಟು..

ರಾಜ್ಯ ಸರ್ಕಾರ ಮುಡಾ ಮತ್ತು ವಾಲ್ಮೀಕಿ ಹಗರಣದಿಂದ ತತ್ತರಿಸಿ ಹೋಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಾಂಗಿಯಾಗಿದ್ದಾರೆ‌, ಹೆದರಿದ್ದಾರೆ, ಬೆದರಿದ್ದಾರೆ. ಸಿಎಂ ಏನೇನೋ ಮಾತನಾಡುತ್ತಿದ್ದಾರೆ‌. ದೇವೇಗೌಡರ ಕುಟುಂಬ,  ಯಡಿಯೂರಪ್ಪ ಕುಟುಂಬ ನಿವೇಶನ ಪಡೆದಿಲ್ಲವೇ ಎಂದೆಲ್ಲಾ ಹೇಳುತ್ತಿದ್ದಾರೆ. ನಾವು ಹೇಳುತ್ತಿರುವುದು 50:50 ವಿಚಾರ ಸಿದ್ದರಾಮಯ್ಯ.

ಮುಡಾ ಎಕ್ಕುಟ್ಟು ಹೋಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ‌. ಇದನ್ನು ಸರಿಪಡಿಸುವ ಬದಲು ನೀವು ಮಾಡಿಲ್ವಾ, ಅವರು ಮಾಡಿಲ್ವಾ ಎಂದು ಹೇಳುತ್ತಿದ್ದಾರೆ. ಆಡಳಿತದಲ್ಲಿ ಇರುವ ಸರ್ಕಾರ ಭಂಡತನ ಮಾಡಬಾರದು. ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಕೇವಲ ಜೆಡಿಎಸ್ ಬಿಜೆಪಿ ನಾಯಕರ ಹೆಸರು ಹೇಳುತ್ತಿರುವ ಸಿಎಂ ಕಾಂಗ್ರೆಸ್ ನವರ ಹೆಸರು ಏಕೆ ಹೇಳುತ್ತಿಲ್ಲ.

ಹಿನಕಲ್‌ ಪಾಪಣ್ಣನ ಹೆಸರೇಳಿ :

ಕಾಂಗ್ರೆಸ್ ನ ಹಿನಕಲ್ ಪಾಪಣ್ಣನ ಹೆಸರು ಹೇಳಿ ಸಿದ್ದರಾಮಯ್ಯನವರೇ. ನಿಮ್ಮ ನಾಮಬಲದಿಂದ ಅವರೆಷ್ಟು ಸೈಟು, ಜಮೀನು ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ಸಿದ್ದರಾಮಯ್ಯ ತಮ್ಮ ಹೆಂಡತಿ ಹೆಸರಿನಲ್ಲಿ ಸೈಟು ಪಡೆದಿರುವುದು ನಾಚಿಕೆಗೇಡು. ನಗರಾಭಿವೃದ್ಧಿ ಸಚಿವನನ್ನು (ಬೈರತಿ ಸುರೇಶ್‌ ) ಕೂರಿಸಿಕೊಂಡು ಸಿದ್ದರಾಮಯ್ಯ ಸುದ್ದಿಗೋಷ್ಠಿ ಮಾಡಿದ್ರು‌. ಆ ಸಚಿವ ಕಂತ್ರಿ ರೀತಿ ವರ್ತಿಸುತ್ತಿದ್ದಾನೆ. ಸಿದ್ದರಾಮಯ್ಯ ಶ್ವೇತವಸ್ತ್ರ ಧರಿಸುತ್ತಿದ್ದಾರೆ. ಆ ಶ್ವೇತ ವಸ್ತ್ರದ ಮೇಲೆ‌ ಕಪ್ಪು ಚುಕ್ಕೆ ಬಿದ್ದಿದೆ.

ಸಿದ್ದರಾಮಯ್ಯ ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ಅವರ ಜೊತೆಯಲ್ಲಿರುವವರೇ ಕಪ್ಪು ಮಸಿ ಬಳಿದು ಹೋಗುತ್ತಾರೆ.

ಸಿದ್ದರಾಮಯ್ಯನವರೇ ನೀವೀಗ ರಾಜಕೀಯದ ಸಂಧ್ಯಾ ಕಾಲದಲ್ಲಿದ್ದೀರಿ. ನಿಮ್ಮ ತಪ್ಪಿನಿಂದ ಏನೂ ಅರಿಯದ ನಿಮ್ಮ ಪತ್ನಿ ಪಾರ್ವತಿಯವರ ಹೆಸರಿಗೆ ಕಳಂಕ ಬರುವಂತಾಗಿದೆ‌. ಮುಡಾದಲ್ಲಿ 5 ಸಾವಿರ ಕೋಟಿ ಹಗರಣವಾಗಿದೆ. ಇದಕ್ಕೆ ಸಚಿವ ಭೈರತಿ ಸುರೇಶ್ ನೇರ ಕಾರಣ. ಮೊದಲು ಅವನನ್ನು ಒದ್ದು ಒಳಗೆ ಹಾಕಿ.

ವಾಲ್ಮೀಕಿ ನಿಗಮ‌ ಹಗರಣದಲ್ಲಿ ಸಚಿವ ನಾಗೇಂದ್ರ ತಲೆದಂಡವಾಯಿತು.ಇದಕ್ಕೆ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ ಕೂಡ ಹೊಣೆಗಾರರು. ರಾಜ್ಯದಲ್ಲಿ ಹಿಂದೆಂದೂ ಇಷ್ಟೊಂದು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರಲಿಲ್ಲ. ಎಂಎಲ್ಸಿ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ.

ವರ್ಗಾವಣೆ ಬಳಿಕವೂ ಅಕ್ರಮ :

ಮುಡಾದಲ್ಲಿ 50:50 ಅನುಪಾತದಲ್ಲಿ ನಡೆದಿರುವ ನಿವೇಶನ ಹಂಚಿಕೆ ಹಗರಣದ ಸಮಗ್ರ ತನಿಖೆಯಾಗಬೇಕಿದೆ.ಮುಡಾದಲ್ಲಿ ಈಗಲೂ ಅಕ್ರಮ‌ ಮುಂದುವರಿದಿದೆ. ಮುಡಾದ ಆಯುಕ್ತರಾಗಿದ್ದ ದಿನೇಶ್ ಕುಮಾರ್ ವರ್ಗಾವಣೆ ಆದ ಬಳಿಕವೂ ಅಕ್ರಮ ಮುಂದುವರಿದಿದೆ‌.

ದಿನೇಶ್ ಕುಮಾರ್ ವಿಧಾನಸೌದದಲ್ಲಿ ಕುಳಿತು ಈಗಲೂ ಅಕ್ರಮ ನಡೆಸುತ್ತಿದ್ದಾರೆ. ದಿನೇಶ್ ಕುಮಾರ್ ಅವರನ್ನು ಜೈಲಿಗೆ ಹಾಕಿದ್ದರೇ ಈ ರೀತಿ ಆಗುತ್ತಿರಲಿಲ್ಲ. ತಪ್ಪಿತಸ್ಥರಿಗೆ ಸರ್ಕಾರದ ಕೃಪಾಕಟಾಕ್ಷ ಇದೆ. ಇದೇ ಕಾರಣದಿಂದ ತಪ್ಪಿತಸ್ಥರು ಈಗಲೂ ಅಕ್ರಮ ಮುಂದುವರಿಸಿದ್ದಾರೆ.

ನಾನು ಮತ್ತು ಶಾಸಕ ಶ್ರೀವತ್ಸ ಹೊರತುಪಡಿಸಿದರೇ ಎಲ್ಲಾ ಪಕ್ಷಗಳ ಜನಪ್ರತಿನಿಧಿಗಳು ಮುಡಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮುಡಾ ಹಗರಣದ ವಿರುದ್ಧ ಬಿಜೆಪಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ನಾನು ಕೂಡ ಭಾಗಿಯಾಗುತ್ತೇನೆ ಎಂಎಲ್ಸಿ ಎಚ್ ವಿಶ್ವನಾಥ್ ಮೈಸೂರಿನಲ್ಲಿ ಹೇಳಿಕೆ.

key words: MUDA scam, Minister,Byrathi Suresh, kicked in, Vishwanath, to Siddaramaiah

Tags :

.