HomeBreaking NewsLatest NewsPoliticsSportsCrimeCinema

MUDA ಹಗರಣ: ತಾ.ಮಾ ವಿಜಯಭಾಸ್ಕರ್ ವರದಿ ಬಹಿರಂಗಪಡಿಸಿ: ಮೈ.ಗ್ರಾ.ಪ

04:48 PM Jul 18, 2024 IST | prashanth

ಮೈಸೂರು,ಜುಲೈ,18,2024 (www.justkannada.in):  ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(MUDA) ಹಗರಣಕ್ಕೆ ಸಂಬಂಧಿಸಿದಂತೆ ತಾ.ಮಾ ವಿಜಯಭಾಸ್ಕರ್ ವರದಿಯನ್ನ ಬಹಿರಂಗಪಡಿಸಬೇಕು ಎಂದು ಮೈಸೂರು ಗ್ರಾಹಕರ ಪರಿಷತ್ ನ ಬಾಮಿ ಶಣೈ ಆಗ್ರಹಿಸಿದರು.

ಮುಡಾ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು  ಮೈಸೂರು ಗ್ರಾಹಕ ಪರಿಷತ್, ಕ್ಲೀನ್ ಮೈಸೂರು ಫೌಂಡೇಶನ್ ವತಿಯಿಂದ ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಮಿ ಶಣೈ, ಮುಡಾ ಹಗರಣ ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಿಂದೆ ಮುಡಾ ಹಗರಣ ಬಗ್ಗೆ ಗ್ರಾಹಕರ ಪರಿಷತ್ ಧ್ವನಿ ಎತ್ತಿತ್ತು. ಮುಡಾ ಹಗರಣದಲ್ಲಿ ಕೇವಲ ಸಿಎಂ ಕಡೆ ಕಾನ್ಸಂಟ್ರೆಟ್ ಮಾಡಲಾಗುತ್ತಿದೆ. ಕೇವಲ ಸಿಎಂ ವಿಚಾರವನ್ನ ಮಾತ್ರ ಮಾತನಾಡುತ್ತಾರೆ ಬೇರೆ ವಿಷಯಗಳ ಬಗ್ಗೆ ಮಾತನಾಡಲ್ಲ. ಮುಡಾದಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ. ಹಗರಣ ಸಂಬಂಧ ದೇಸಾಯಿ ಕಮಿಟಿ, Enquiry ಕಮಿಟಿ ಎಂದು  ಮಾಡಿದ್ದಾರೆ.  ಈ ಹಿಂದೆ ವಿಜಯ ಭಾಸ್ಕರ್ ವರದಿ ಬಂದಿತ್ತು. 1200 ಪುಟಗಳಲ್ಲಿ ವರದಿ ಬಂದಿತ್ತು. ಆದರೆ ಈ ವರದಿ ಬಹಿರಂಗವಾಗಲಿಲ್ಲ.  ಈ ವರದಿ ಬಗ್ಗೆ ಮಾತನಾಡಿದ್ದಕ್ಕೆ ಡಿಸಿಯನ್ನ ವರ್ಗಾವಣೆ ಮಾಡಿದ್ರು ಎಂದರು.

ತಾ.ಮಾ ವಿಜಯಭಾಸ್ಕರ್ ವರದಿ, Enquiry ಕಮಿಟಿ ವರದಿ ಬಹಿರಂಗ ಮಾಡಬೇಕು. ಸಿಎ ಸೈಟ್ ಗಳು ದುರ್ಬಳಕೆಯಾಗುತ್ತಿದೆ. ಈ ಹಿಂದೆ ಮೈಸೂರು ಗ್ರಾಹಕ ಪರಿಷತ್ ಎಷ್ಟೋ ಸಾರಿ ಕಮಿಷನರ್ ಜೊತೆ ಈ ಬಗ್ಗೆ ಮಾತನಾಡಿದರೂ ಸಹ ಪ್ರಯೋಜನವಾಗಲಿಲ್ಲ. ಹೀಗಾಗಿ ಮುಡಾದಲ್ಲಿ ಸಾಕಷ್ಟು ಅವ್ಯವಹಾರ ಆಗಿದ್ದು, ಹಗರಣ ಮಾಡಿರುವ ಪ್ರತಿಯೊಬ್ಬರ ಮೇಲೂ ಕ್ರಮ ಆಗಬೇಕು. ಮುಡಾ ಹಗರಣವನ್ನ ಸಿಬಿಐಗೆ ನೀಡಬೇಕು. ರಾಜಕಾಲುವೆ ಮತ್ತು ಪೂರ್ಣಯ್ಯ ಕಾಲುವೆಗಳ ಮೇಲಿನ ಒತ್ತುವರಿಯನ್ನ ಕೂಡ ತೆರವು ಮಾಡಬೇಕು ಎಂದು ಒತ್ತಾಯಿಸಿದರು.

Key words: MUDA Scam, Ta.Ma Vijayabhaskar, Report, mysore

Tags :
Muda scamMysore.ReportTa.Ma Vijayabhaskar
Next Article