For the best experience, open
https://m.justkannada.in
on your mobile browser.

ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವವರಿಂದ ಮುಡಾ ಹಗರಣ ಬಯಲು- ಕೇಂದ್ರ ಸಚಿವ ಹೆಚ್.ಡಿಕೆ

12:19 PM Jul 05, 2024 IST | prashanth
ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರುವವರಿಂದ ಮುಡಾ ಹಗರಣ ಬಯಲು  ಕೇಂದ್ರ ಸಚಿವ ಹೆಚ್ ಡಿಕೆ

ಮೈಸೂರು,ಜುಲೈ,5,2024 (www.justkannada.in): ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿರುವವರಿಂದ ಮುಡಾ ಹಗರಣ ಬಯಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮೈಸೂರಲ್ಲಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ,  ಸಿಡಿ ಫ್ಯಾಕ್ಟರಿ ಆಯ್ತು ಇದೀಗ ಮುಡಾದ‌ ಕಾರ್ಯಕ್ರಮಗಳು ಬರ್ತಿವೆ. ನಾನೂ ಮಾಧ್ಯಮಗಳಲ್ಲಿ  ಎಲ್ಲವನ್ನೂ ಗಮನಿಸಿದ್ದೇನೆ. ಮುಡಾ ಹಗರಣದ ಬಗ್ಗೆ ನನಗೂ ಮಾಹಿತಿ ಇದೆ. ಸಿಎಂ ಆಗಲು ಟವೆಲ್ ಹಾಕಿ ಕಾಯುತ್ತಿರುವ ವ್ಯಕ್ತಿಯೇ ಇದನ್ನು ಕೂಡ ಮಾಡಿಸಿದ್ದಾರೆ. ಹಗರಣದಲ್ಲಿ ಸಿಎಂ ಸಿಲುಕಿಸಿ ತಾನು ಸಿಎಂ ಆಗಲು ಪ್ರಯತ್ನ ಮಾಡ್ತಿದ್ದಾರೆ. ಈಗ ಹಗರಣ ಹೊರಗೆ ಬರಲು ಕಾರಣ ಯಾರು ಎಂದು ಎಲ್ಲರಿಗೂ ಗೊತ್ತು. ವಿಪಕ್ಷಗಳಿಗಿಂತ ಸಿಎಂ ರೇಸ್ ನಲ್ಲಿ ಇರುವವರಿಂದ ಇದು ಬೆಳಕಿಗೆ ಬರುತ್ತಿದೆ. ಸಿಎಂ ಕುರ್ಚಿಗೆ ಟವಲ್ ಹಾಸಿಕೊಂಡು‌ ಕುಳಿತವರಿಂದ ಹಗರಣ ಬೆಳಕಿಗೆ ಬಂದಿದೆ ಎಂದು ಡಿ.ಕೆ.ಶಿವಕುಮಾರ್ ಹೆಸರೆಳೆದೆ ಪರೋಕ್ಷ ವಾಗ್ದಾಳಿ ನಡೆಸಿದರು.

ರಾಜ್ಯದ ರಾಜಕಾರಣದ ಆಸಕ್ತಿ ನಮಗಿಲ್ಲ. ನನ್ನ ಗಮನ ಪ್ರಧಾನಿ ಮೋದಿ ಕೊಟ್ಟಿರುವ ಖಾತೆಗಳ ಮೇಲಿದೆ. ಸಿಎಂ ಖುರ್ಚಿ ಮೇಲೆ ನಿತ್ಯ ಪೈಪೋಟಿ ಇದೆ. ಆಡಳಿತ ಪಾರದರ್ಶಕತೆ ಕುರಿತು ಅವರ ಪಕ್ಷದವರೇ ಮಾತನಾಡಿಕೊಳ್ತಾ ಇದ್ದಾರೆ. ಪ್ರಕರಣ ಬೆಳಕಿಗೆ ಬಂದಿದ್ದರ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ ಎಂಬ ಸಂಶಯ ಇದೆ. ಆ ಜಾಗಕ್ಕೆ ಹೋಗಬೇಕು ಎಂದು‌ ಪ್ರಯತ್ನ ಮಾಡ್ತಾ ಇದ್ದಾರೆ. ಇಷ್ಟು ದಿನ ಇಲ್ಲದಿರುವುದು ಈವಾಗ ಹೇಗೆ ಹೊರಗೆ ಬರ್ತಿದೆ. ನೀವೇ ಅದನ್ನ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಿಎಂ ಪತ್ನಿಗೆ 14 ಸೈಟ್ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ,  ಅಡಿಷನಲ್‌ಜನರಲ್ ಆಗಿದ್ದವರು ಈವಾಗ ಎಂಎಲ್ ಎ ಆಗಿದ್ದಾರೆ. ಅವರು ಸಿಎಂ ಪರ ಸುಧೀರ್ಘವಾಗಿ ಮಾತನಾಡಿದ್ದಾರೆ.  62 ಕೋಟಿ ರೂ. ಪರಿಹಾರ ನೀಡಬೇಕು ಎಂದಿದ್ದಾರೆ. ಆದರೆ ಹಲವು ಅಭಿವೃದ್ಧಿ‌ ಹೆಸರಿನಲ್ಲಿ ಭೂ ಸ್ವಾಧೀನವಾಗಿದೆ. ಆ ರೈತರು ಇನ್ನೂ ಕೂಡ ಬೀದಿಯಲ್ಲಿ ಅಲೆದಾಡುತ್ತಿದ್ದಾರೆ. ಆ ಅಮಾಯಕ ರೈತರ ಭೂಮಿಗೆ ವಂಚಿಸಿದ್ದೀರಿ. ಅವರಿಗೆ ರೇಟ್ ಫಿಕ್ಸ್ ಮಾಡುವಾಗ ಹೇಗೆ ಮಾಡ್ತೀರಿ. ರೈತರನ್ನ ಬೀದಿಗೆ ನಿಲ್ಲಿಸಿದ್ದೀರಿ ಇದು ಸರೀನಾ. ನಿಮ್ಮ ಪತ್ನಿಗೆ ಪರಿಹಾರ ಕೇಳ್ತಾ ಇದ್ದೀರಲ್ಲಾ ಆ‌ ದೇವರು ಮೆಚ್ಚುತ್ತಾನಾ..? ಎಂದು ಕಿಡಿಕಾರಿದರು.

ಇಂದು ಮಂಡ್ಯದಲ್ಲಿ ಜನತಾ ದರ್ಶನ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡ್ತಿದೆ. ಜನತಾ ದರ್ಶನದ ಬಗ್ಗೆನೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ದೂರು ಇಡಬಹುದು. ಆದರೆ ಜನರನ್ನ ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಾಂತರದ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡ್ತಿದ್ರಿ. ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ದರು. ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೆಚ್.ಡಿಕೆ ಹೇಳಿದರು.

Key words: Muda, scandal, CM, chair, Union Minister, HDK

Tags :

.