HomeBreaking NewsLatest NewsPoliticsSportsCrimeCinema

MUDA SCANDAL : ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷಗೆ 7 ಕೋಟಿ ರೂ.ಮೌಲ್ಯದ ನಿವೇಶನ 5 ಲಕ್ಷಕ್ಕೆ ಮಂಜೂರು..!

02:59 PM Sep 16, 2024 IST | mahesh

 

ಮೈಸೂರು, sep.16,2024: (www.justkannada.in news) ಬಗೆದಷ್ಟು ಬಯಲಾಗ್ತಿದೆ ಮುಡಾ ಹಗರಣ. ಮುಡಾ ಹಗರಣದಲ್ಲಿ ಬಿಜೆಪಿ ಹಾಲಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿಯೂ ಪಾಲುದಾರ. ದಾಖಲೆ ಬಿಡುಗಡೆ ಮಾಡಿದ  ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು.

ಅಕ್ರಮವಾಗಿ ಹೆಚ್ಚುವರಿ ನಿವೇಶನ ಖರೀದಿ ಮಾಡಿ ಪತ್ನಿ ಹೆಸರಿಗೆ ರಿಜಿಸ್ಟರ್. 7 ಕೋಟಿ ರೂ. ಮೌಲ್ಯದ ಆಸ್ತಿಯನ್ನ 5,36,200 ರೂ ಗಳಿಗೆ ಪಡೆದಿದ್ದಾರೆ ಅನ್ನೋ ಆರೋಪ. ಇದರಿಂದ ಮುಡಾಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ. ನೀವು ಯಾವ ನೈತಿಕತೆ ಇಟ್ಕೊಂಡು ಪಾದಯಾತ್ರೆ ಮಾಡ್ತೀರಾ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಶಿವರಾಮು ಪ್ರಶ್ನೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಮು ಹೇಳಿದಿಷ್ಟು…

ಈರನಗೆರೆಯಲ್ಲಿ ಸೈಯದ್ ಹಬೀಬ್ ಉರ್ ರೆಹಮನ್, ಸೈಯದ್ ನಸೃತ್, ಬಿಬಿ ಆಯೇಷ ಸೇರಿ 11 ಜನರ ಹೆಸ್ರಲ್ಲಿದ್ದ ಜಂಟಿ ಜಾಗ. ಈರನಗೆರೆ ಸರ್ವೆ ನಂ 85/2 ರಲ್ಲಿ 1 ಎಕರೆ  3 ಗುಂಟೆ ಜಾಗ ವಶಕ್ಕೆ ಪಡೆದಿತ್ತು. ಇದೇ ಜಾಗಕ್ಕೆ 7-7-2021ರಂದು ಬದಲಿ ನಿವೇಶನಕ್ಕೆ ಪ್ರಾಧಿಕಾರಕ್ಕೆ ಅರ್ಜಿ. ಅರ್ಜಿ ಸಲ್ಲಿಸಿದ ಬಳಿಕ‌ 13-7-2021 ರಂದು 50:50 ಅನುಪಾತದಲ್ಲಿ 12057 ಅಡಿ ವಿಸ್ತೀರ್ಣದ ಜಾಗ ಮಂಜೂರಾತಿ.

೫೦ ವರ್ಷಗಳ ನಂತರ ಮುಡಾಗೆ ಮೂಲ ಮಾಲೀಕರ ಕಡೆಯಿಂದ ಬದಲಿ ನಿವೇಶನಕ್ಕೆ ಅರ್ಜಿ. ಅಂದಿನ ಮುಡಾ ಆಯುಕ್ತ ನಟೇಶ್, ಇಂದಿನ ಬಿಜೆಪಿ ಜಿಲ್ಲಾಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಸೇರಿಕೊಂಡು ಅಕ್ರಮ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪ್ತ ವಲಯದ ಮಹಾದೇವಸ್ವಾಮಿ. ಎಲ್.ಆರ್. ಮಹದೇವಸ್ವಾಮಿ ಅವರ ಪತ್ನಿ ಹೆಸರಲ್ಲಿ ಬಿ.ವೈ. ವಿಜಯೇಂದ್ರ ಬೇನಾಮಿ ಆಸ್ತಿ ಮಾಡ್ತಾ ಇದ್ದಾರೆ ಎಂದು ಆರೋಪಿಸಿದ ಶಿವರಾಮು.

ಬಳಿಕ ಹೆಚ್ಚುವರಿಯಾಗಿ ಸರಸ್ವತಿಪುರಂನಲ್ಲಿ 50x80 ಹೆಚ್ಚುವರಿ ನಿವೇಶನ ಕಾನೂನು ಬಾಹಿರವಾಗಿ ಮಂಜೂರು. ಅದೇ ಬಡಾವಣೆ ಬಿಟ್ಟು ಕೋಟಿ ಕೋಟಿ ಬೆಲೆ ಬಾಳುವ ಜಾಗದಲ್ಲಿ ನಿವೇಶನ ಹಂಚಿಕೆ.

file photo

ಬಳಿಕ ಇದೇ ನಿವೇಶನ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಪತ್ನಿ ಸೌಮ್ಯ ಎಂ ಸ್ವಾಮಿ ಹೆಸರಲ್ಲಿ ನಿವೇಶನ ಖರೀದಿ. ಸರಸ್ವತಿ ಪುರಂನಲ್ಲಿ ಭವ್ಯ ಬಂಗಲೆ ನಿರ್ಮಾಣ ಮಾಡ್ತಿರೋ ಬಿಜೆಪಿ ಜಿಲ್ಲಾಧ್ಯಕ್ಷ. ಕೂಡಲೇ ನಿವೇಶನವನ್ನ ತಡೆ ಹಿಡಿಯುವಂತೆ ಒತ್ತಾಯ.

ಮುಡಾ ಭ್ರಷ್ಟಾಚಾರದ ಪಿತಾಮಹ ಬಿ.ವೈ. ವಿಜಯೇಂದ್ರ. 2021 ರಲ್ಲಿ ವಿಜಯೇಂದ್ರ ಪಟಾಲಮ್ ಮೂಲಕ ಭ್ರಷ್ಟಾಚಾರ ಮಾಡಿದ್ದರು. ಡಿ.ಬಿ. ನಟೇಶ್ ಮುಡಾ ಮಾಜಿ ಆಯುಕ್ತ, ಹಾಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ದೇವಸ್ಥಾನಗಳಿಗೆ ಹೆಲಿಕಾಪ್ಟರ್ ನಲ್ಲಿ ಹೊಗ್ತಾ ಇದ್ರು. ಸುದ್ದಿಗೋಷ್ಟಿಯಲ್ಲಿ ಕೆ.ಎಸ್. ಶಿವರಾಮ ಗಂಭೀರ ಆರೋಪ.

ಆರೋಪ ಸತ್ಯಕ್ಕೆ ದೂರ, ಕಾನೂನು ಹೋರಾಟ ಮಾಡಲಿ:

ಯಾವುದೇ ನಿವೇಶವನ್ನು ಅಕ್ರಮವಾಗಿ ಖರೀದಿ ಮಾಡಿಲ್ಲ. ಸರಕಾರ ನಿಗಧಿಪಡಿಸಿದ ಹಣವನ್ನು ಪಾವತಿಸಿಯೇ ಖರೀದಿಸಿರುವುದು. ಈ ಬಗ್ಗೆ ಕರ್ನಾಟಕ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು ಅವರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ೫೦ ವರ್ಷದ ಬಳಿಕ ಬದಲಿ ನಿವೇಶನಕ್ಕೆ ಮೂಲ ಮಾಲೀಕರು ಅರ್ಜಿ ಸಲ್ಲಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಅನುಮಾನಗಳಿದ್ದಲ್ಲಿ ಕಾನೂನು ಹೋರಾಟ ನಡೆಸಲಿ ಎಂದು ಮೈಸೂರು ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ "ಜಸ್ಟ್‌ ಕನ್ನಡ"‌ ಗೆ ಪ್ರತಿಕ್ರಿಯಿಸಿದರು.

KEY WORDS:  MUDA SCANDAL, Mysuru BJP, district president, allotted plot, worth Rs 7 crore, for Rs 5 lakh

 

 

Tags :
allotted plotdistrict presidentfor Rs 5 lakhMuda scandalMysuru BJPworth Rs 7 crore
Next Article