ನನ್ನ ವಿರುದ್ದದ ಆರೋಪ ಸಾಬೀತಾದರೇ ಶಾಸಕ ಸ್ಥಾನಕ್ಕೆ ರಾಜೀನಾಮೆ- ಎಂ.ಲಕ್ಷ್ಮಣ್ ಗೆ ಶ್ರೀವತ್ಸ ತಿರುಗೇಟು
ಮೈಸೂರು,ಆಗಸ್ಟ್,22,2024 (www.justkannada.in): ಶಾಸಕ ಶ್ರೀವತ್ಸ ಮುಡಾ ಜಿ.ಕೆಟಗಿರಿ ಸೈಟ್ ಪಡೆದಿದ್ದಾರೆ ಎಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರಿಗೆ ಶಾಸಕ ಶ್ರೀವತ್ಸ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಶ್ರೀವತ್, ನನ್ನ ವಿರುದ್ದದ ಆರೋಪ ಸಾಬೀತಾದರೇ 24 ಗಂಟೆಗಳಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ. ಒಂದು ಸಣ್ಣ ದಾಖಲೆ ಬಿಡುಗಡೆ ಮಾಡಿದರೂ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ನನ್ನ ಮೇಲಿನ ಆರೋಪ ಸುಳ್ಳಾದರೆ ಲಕ್ಷ್ಮಣ್ ರಾಜಕೀಯ ನಿವೃತ್ತಿ ಹೊಂದುತ್ತಾರಾ.? ಎಂದು ಸವಾಲು ಹಾಕಿದ್ದಾರೆ.
ಮಾತನಾಡುವಾಗ ಜವಾಬ್ದಾರಿಯುತವಾಗಿ ಮಾತನಾಡಬೇಕು. ಎಲುಬಿಲ್ಲದ ನಾಲಿಗೆಯಲ್ಲಿ ಬಾಯಿಗೆ ಬಂದಂತೆ ಮಾತನಾಡಬಾರದು. ನನ್ನ ಹಾಗೂ ನನ್ನ ಕುಟುಂಬದ ಹೆಸರಿನಲ್ಲಿ ಮುಡಾ ಸಂಬಂಧಿಸಿದ ಒಂದು ತುಂಡು ಜಾಗವೂ ಇಲ್ಲ. ಬೇಸರತ್ ಕ್ಷಮೆಗೆ ನೋಟಿಸ್ ಕಳುಹಿಸಿದ್ದೇವೆ. ಕ್ಷಮೆಯಾಚಿಸದಿದ್ದರೆ ಕಾನೂನು ಸಂಕಷ್ಟ ಎದುರಿಸಬೇಕಾಗುತ್ತದೆ. ಅಷ್ಟು ಸುಲಭವಾಗಿ ಬಿಡುವವನಲ್ಲ ನಾನು. ಇನ್ನೂ ಮುಂದೆ ಲಕ್ಷ್ಮಣ್ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಏನಿದ್ದರೂ ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದರು.
ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಲಕ್ಷ್ಮಣ್ ಅವರು ಪ್ರತಾಪ್ ಸಿಂಹ ಅವರ ಬಗ್ಗೆ ಮಾತನಾಡಲಿ. ಪ್ರತಾಪ್ ಸಿಂಹ ವಿರುದ್ಧ ಮಾತಾನಾಡಲು ಹೆದರುತ್ತಾರೆ. ರಾಜಕೀಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈಗಾಗಲೇ ಬರ್ಬಾದ್ ಆಗಿರುವ ಲಕ್ಷ್ಮಣ್ ಲ್ಯಾಕ್ ಅಂಡ್ ಪೇಂಟಿಂಗ್ ಮೃಗಾಲಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಈ ರೀತಿ ಮಾತಾಡುತ್ತಿದ್ದಾರೆ ಎಂದು ಶಾಸಕ ಶ್ರೀವತ್ಸ ಲೇವಡಿ ಮಾಡಿದರು.
Key words: muda, site, M. Laxman, MLA , Srivatsa