HomeBreaking NewsLatest NewsPoliticsSportsCrimeCinema

ಸಿಎಂ ಸಿದ್ದರಾಮಯ್ಯಗೆ ಮತ್ತೆ ಮುಡಾ ಟೆನ್ಶನ್: ಇಂದು ಹೈಕೋರ್ಟ್ ನಲ್ಲಿ ವಿಚಾರಣೆ

10:30 AM Sep 09, 2024 IST | prashanth

ಬೆಂಗಳೂರು,ಸೆಪ್ಟಂಬರ್,9,2024 (www.justkannada.in): ಒಂದು ವಾರಗಳ ಕಾಲ ರೀಲೀಫ್ ಆಗಿದ್ದ ಸಿಎಂ ಸಿದ್ದರಾಮಯ್ಯಗೆ ಈಗ ಮತ್ತೆ ಮುಡಾ ಟೆನ್ಶನ್ ಶುರುವಾಗಲಿದ್ದು ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.

ಮುಡಾ ಹಗರಣ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಇಂದು ನಡೆಯಲಿದೆ.  ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಮುಡಾ ಹಗರಣ ಕ್ಲೈಮಾಕ್ಸ್ ಹಂತಕ್ಕೆ ತಲುಪಿದ್ದು ಎಲ್ಲರ ಚಿತ್ತ ಮುಡಾ ತೀರ್ಪಿನತ್ತ ಮೂಡಿದೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಸನ್ ಗೆ ರಾಜ್ಯಪಾಲರು ಅನುಮತಿ ನೀಡಿದ್ದು, ರಾಜ್ಯಪಾಲರ ನಡೆ ಖಂಡಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ  ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯಪಾಲರ ಪರ ತುಷಾರ್ ಮೆಹ್ತಾ, ಸಿಎಂ ಸಿದ್ದರಾಮಯ್ಯ ಪರ ಅಡೋಕೇಟ್ ಜನರಲ್ ವಾದ ಮಂಡನೆ ಮಾಡಿದ್ದಾರೆ.

ಸೆಪ್ಟಂಬರ್ 12 ಕ್ಕೆ ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡನೆ ಮಾಡಲಿದ್ದಾರೆ. ಇಂದು ಮಧ್ಯಾಹ್ನ 3.30 ಕ್ಕೆ ವಿಚಾರಣೆ ನಡೆಯಲಿದ್ದು, ಇದೇ ವಾರ ಮುಡಾ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯಗೆ ವ್ಯತಿರಿಕ್ತ ಆದೇಶ ಬಿದ್ದರೆ ಮುಂದಿನ ಸಿಎಂ ಯಾರು ಎಂಬ ಪ್ರಶ್ನೆ ಹುಟ್ಟಿಕೊಳ್ಳಲಿದೆ.

ಈಗಾಗಲೇ ಸಿಎಂ ಕುರ್ಚಿ ಮೇಲೆ ಹಲವರ  ಕಣ್ಣುಬಿದ್ದಿದ್ದು ಕೆಲ ಹಿರಿಯ ನಾಯಕರು ಈಗಾಗಲೇ ಟವೆಲ್ ಹಾಸಿದ್ದಾರೆ. ಕೈ ನಾಯಕರ‌ ಕಿತ್ತಾಟಕ್ಕೆ ಬಿಜೆಪಿ ಜೆಡಿಎಸ್ ನಾಯಕರ ಲೇವಡಿ ಮಾಡುತ್ತಿದ್ದು,  ಸಿಎಂ ವಿರುದ್ಧ ತೀರ್ಪು ಹೊರ ಬಿದ್ದರೆ ರಾಜ್ಯದಲ್ಲಿ ಕೈ ಕಾರ್ಯಕರ್ತರಿಂದ ಪ್ರತಿಭಟನೆಗಳ ಕಾವು ಹೆಚ್ಚಾಗಲಿವೆ. ಇತ್ತ ಸಿಎಂ ಪರವಾಗಿ ತೀರ್ಪು ಬಂದರೂ ವಿಪಕ್ಷಗಳಿಂದಲೂ ಪ್ರತಿಭಟನಾ ಧರಣಿ ಜೋರಾಗಲಿದೆ.

Key words: Muda, tensionCM Siddaramaiah, hearing, High Court

Tags :
hearingHigh CourtMUDAtensionCM Siddaramaiah
Next Article