For the best experience, open
https://m.justkannada.in
on your mobile browser.

ಸಿಎಂ ಹಿಂಬಾಲಕ ಹಿನಕಲ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ನಿವೇಶನ ತಡೆ ಹಿಡಿದ MUDA

01:30 PM Jul 08, 2024 IST | mahesh
ಸಿಎಂ ಹಿಂಬಾಲಕ ಹಿನಕಲ್‌ ಪಾಪಣ್ಣಗೆ ಹಂಚಿಕೆಯಾಗಿದ್ದ ನಿವೇಶನ ತಡೆ ಹಿಡಿದ muda
Rakesh papanna s/o hinkal papanna

MUDA withholds plot allotted to CM's follower Hinkal Papanna

ಮೈಸೂರು, ಜು.08,2024: (www.justkannada.in news) ಸಿಎಂ  ಸಿದ್ದರಾಮಯ್ಯ ಅವರ ಸ್ವಜಾತಿ ಹಿಂಬಾಲಕ , ಹಿನ್‌ಕಲ್ ಪಾಪಣ್ಣಗೆ ಮುಡಾ ಬದಲಿ ನಿವೇಶನ ಹಂಚಿಕೆ ವಿಚಾರ. ನಿವೇಶನ ಹಂಚಿಕೆ ತಡೆ ಹಿಡಿಯಲಾಗಿದೆ. ಸುದ್ದಿಗೋಷ್ಟಿಯಲ್ಲಿ ಮುಡಾ ಅಧ್ಯಕ್ಷ ಮರೀಗೌಡ ಹೇಳಿಕೆ.

ಈ ಮೊದಲು ನ್ಯಾಯಾಲಯ ಆದೇಶದಂತೆ ಬದಲಿ ನಿವೇಶನ ಹಂಚಿಕೆ ಆಗಿತ್ತು. ಹಂಚಿಕೆ ವೇಳೆ ತಪ್ಪಾಗಿದೆ ಎಂದು ಗೊತ್ತಾಗಿದೆ. ಈಗ ಅದನ್ನೂ ತಡೆ ಹಿಡಿಯಲಾಗಿದೆ. ಹಿನ್‌ಕಲ್ ಸರ್ವೆ ನಂ.211ರಲ್ಲಿ 3.05 ಗುಂಟೆ ಜಮೀನು ಸಂಬಂಧಿಸಿದ ಪ್ರಕರಣ. 1981ರಲ್ಲಿ ಸ್ವಾದೀನ ಪಡೆದು, 1984ರಲ್ಲಿ ಕೈ ಬಿಡಲಾಗಿತ್ತು.

ಬರೋಬ್ಬರಿ ೪೦ ವರ್ಷಗಳ ಬಳಿಕ ಅದಕ್ಕೆ ಪರಿಹಾರ ನೀಡಲಾಯಿತು. ಅಂದ್ರೆ.  2024ರ ಜೂನ್‌12 ರಂದು ಪರಿಹಾರ ಕೊಟ್ಟಿದ್ದರು. 36,753 ಚದರ ಅಡಿ ಪರಿಹಾರ ಕೊಡಲಾಗಿತ್ತು. ಇದಕ್ಕಾಗಿ ವಿಜಯನಗರದ ವಿವಿಧ ಬಡಾವಣೆಗಳಲ್ಲಿ‌ 20 ನಿವೇಶನ ಹಂಚಿಕೆ ಮಾಡಿ ಆದೇಶಿಸಲಾಗಿತ್ತು. ಈಗ ನಿವೇಶನ ಹಂಚಿಕೆ ಪ್ರಕರಣವೇ ದೊಡ್ಡ ಹಗರಣವಾಗಿ ಮಾರ್ಪಾಡಾಗಿರುವ ಹಿನ್ನೆಲೆಯಲ್ಲಿ ಕಳೆದ ತಿಂಗಳ ಆದೇಶಕ್ಕೂ ತಡೆ ಬಿದ್ದಿದೆ.

ಗೆಜೆಟ್ ನೋಟಿಫಿಕೇಶನ್ :

50:50 ಅನುಪಾತದಲ್ಲಿ ನಿವೇಶನ ಕೊಡಲಿಕ್ಕೆ ಗೆಜೆಟ್ ನೋಟಿಫಿಕೇಶನ್ ಆಗಿದೆ. 50:50 ಅನುಪಾತದಲ್ಲಿ ಪರಿಹಾರ ನೀಡಲಿಕ್ಕು ಆದೇಶ ಆಗಿದೆ. 2015 ರಲ್ಲಿ ಗೆಜೆಟ್ ನೋಟಿಫಿಕೇಶನ್ ಆಗಿದೆ. ಆಗ 60:40 ಅನುಪಾತದಲ್ಲಿ ನೀಡಬೇಕೆಂದು ಆದೇಶ ಇದೆ. ಅದಾದ ಬಳಿಕ 2020ರಲ್ಲಿ 50:50 ಅನುಪಾತದಲ್ಲಿ ನಿವೇಶನ ನೀಡಲಿಕ್ಕೆ ಪ್ರಾಧಿಕಾರ ನಿರ್ಣಯ ಮಾಡುತ್ತದೆ. ಸುದ್ದಿಗೋಷ್ಠಿಯಲ್ಲಿ ಶಾಸಕ ಕೆ ಹರೀಶ್ ಗೌಡ ಮಾಹಿತಿ.

key words: MUDA, withholds plot, allotted to, CM's follower, Hinkal Papanna

Tags :

.