For the best experience, open
https://m.justkannada.in
on your mobile browser.

ವರ್ಷದ ಮೊದಲ ಮಳೆ : ಭಾರಿ ಧೂಳಿನ ಬಿರುಗಾಳಿಗೆ ತತ್ತರಿಸಿದ ಮುಂಬೈ..!, ವಿಮಾನ ಸಂಚಾರಕ್ಕೂ ಕುತ್ತು.!

08:32 PM May 13, 2024 IST | mahesh
ವರ್ಷದ ಮೊದಲ ಮಳೆ   ಭಾರಿ ಧೂಳಿನ ಬಿರುಗಾಳಿಗೆ ತತ್ತರಿಸಿದ ಮುಂಬೈ     ವಿಮಾನ ಸಂಚಾರಕ್ಕೂ ಕುತ್ತು

ಮುಂಬೈ, ಮೇ .13, 2024: (www.justkannada.in news )  ಈ ಋತುವಿನ ಮೊದಲ ಮಳೆಗೆ ಸಾಕ್ಷಿಯಾಯಿತು ಮಹಾನಗರಿ ಮುಂಬಯಿ. ಮಳೆ ಜತೆಗೆ  ಭಾರಿ ಧೂಳಿನ ಬಿರುಗಾಳಿ ಮಧ್ಯಾಹ್ನ 3 ಗಂಟೆಗೆ ಆಕಾಶವನ್ನು ಕತ್ತಲೆಯಾಗಿಸಿತು.

ಮಳೆಯಿಂದ ಮುಂಬೈ ಮತ್ತು ಸಮೀಪ ಪ್ರದೇಶದ ನಿವಾಸಿಗಳಿಗೆ ಬಿಸಿಯಿಂದ ಪರಿಹಾರವನ್ನು ತಂದಿತು ಆದರೆ ಮಹಾನಗರ ಸಂಪೂರ್ಣ ಧೂಳಿನ ಗಾಳಿಯಿಂದ ಸುತ್ತುವರಿಯಲ್ಪಟ್ಟಿತು.

ಚಂಡಮಾರುತದ ಸಮಯದಲ್ಲಿ ಪ್ರಯಾಣಿಕರು ಆಶ್ರಯ ಪಡೆದಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಜತೆಗೆ  ಹವಾಮಾನದಲ್ಲಿ ಹಠಾತ್ ಬದಲಾವಣೆ ಸಂಚಾರ ವ್ಯವಸ್ಥೆ ಸ್ಥಗಿತಗೊಳಿಸಿತ್ತು.

ಮುಂಬೈನ ಘಾಟ್‌ಕೋಪರ್, ಬಾಂದ್ರಾ ಕುರ್ಲಾ, ಧಾರಾವಿ ಪ್ರದೇಶದಲ್ಲಿ ಬಲವಾದ ಗಾಳಿ ಮತ್ತು ಮಳೆಯಾಗಿದೆ. ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾದ ಮುಂಬೈ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮುಂಬೈನ ಘಾಟ್‌ಕೋಪರ್‌ನ ಚೆಡ್ಡಾನಗರ ಜಂಕ್ಷನ್‌ನಲ್ಲಿ 100 ಅಡಿ ಎತ್ತರದ ಜಾಹೀರಾತು ಫಲಕವು ಕಿತ್ತು ಪೆಟ್ರೋಲ್ ಪಂಪ್‌ನ ಮೇಲೆ ಬಿದ್ದಿದ್ದು, ವಾಹನಗಳು ಮತ್ತು ಜನರು ಸಿಲುಕಿದ ಘಟನೆ ನಡೆದಿದೆ.  ಅದೃಷ್ಠವಶಾತ್‌ ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಆದರೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಸಿಕ್ಕಿಬಿದ್ದವರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್)ಗೆ ಕರೆ ನೀಡಲಾಗಿದೆ.

ಮುಂದಿನ 3 ಗಂಟೆಗಳ ಅವಧಿಯಲ್ಲಿ ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗಂಟೆಗೆ 50-60 ಕಿಮೀ ವೇಗದಲ್ಲಿ ಬಿರುಗಾಳಿ ಸಹಿತ ಗುಡುಗು ಸಹಿತ ಮಿಂಚು ಮತ್ತು ಮಧ್ಯಮದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಬಲವಾದ ಗಾಳಿಯಿಂದಾಗಿ ತಂತಿಯ ಮೇಲೆ ಬ್ಯಾನರ್ ಬಿದ್ದ ನಂತರ ಆರೆ ಮತ್ತು ಅಂಧೇರಿ ಪೂರ್ವ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೆಟ್ರೋ ರೈಲಿನ ವಕ್ತಾರರು ತಿಳಿಸಿದ್ದಾರೆ.

ಕೃಪೆ : ಎನ್.ಡಿ.ಟಿವಿ

key words :  mumbai, witnesses, first rain-of-season, accompanied, by-massive, dust-storm

summary: 

Mumbai witnessed the first rains of the season, accompanied by a massive duststorm which turned the sky dark around 3 pm today. Rainfall brought relief to the residents of Mumbai and its adjoining area from heat but the skyline of the metropolitan was encircled by dusty winds.

The sudden change in weather brought traffic to a standstill as commuters took shelter during the storm.

Tags :

.