For the best experience, open
https://m.justkannada.in
on your mobile browser.

ನಟ ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ- ಶಾಸಕ ಉದಯ್ ಗೌಡ  ಸಮರ್ಥನೆ

04:52 PM Jun 21, 2024 IST | prashanth
ನಟ ದರ್ಶನ್ ಕೊಲೆ ಮಾಡುವಷ್ಟು ಕಟುಕನಲ್ಲ  ಶಾಸಕ ಉದಯ್ ಗೌಡ  ಸಮರ್ಥನೆ

ಬೆಂಗಳೂರು, ಜೂನ್​ 21,2024 (www.justkannada.in): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ವಿಚಾರಣೆ ಎದುರಿಸುತ್ತಿರುವ  ನಟ ದರ್ಶನ್ ಪರ ಮದ್ದೂರು ಶಾಸಕ ಉದಯ್ ಗೌಡ ಬ್ಯಾಟ್ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಮದ್ದೂರು ಶಾಸಕ ಉದಯ್ ಗೌಡ,  ದರ್ಶನ್ ಗೆ ಸ್ವಲ್ಪ ‌ಮುಂಗೋಪ, ಸಿಟ್ಟು ಜಾಸ್ತಿ. ಆದರೆ ಕೊಲೆ ಮಾಡುವಷ್ಟು ಕಟುಕನಲ್ಲ. ನನಗೆ ಹಲವು ವರ್ಷಗಳಿಂದ ದರ್ಶನ್ ಸ್ನೇಹಿತ. ಆದರೆ ಈ ರೀತಿ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಕೊಲೆ ಮಾಡುವಂತಹ ಬುದ್ಧಿ ದರ್ಶನ್ ಗೆ ಇಲ್ಲ. ನಾನು ಹಲವು ವರ್ಷಗಳಿಂದ ದರ್ಶನ್ ಅವರನ್ನು ಬಲ್ಲೆ. ಈ ಪ್ರಕರಣ ಯಾಕಾಯ್ತು? ಹೇಗಾಯ್ತು ನನಗೆ ಮಾಹಿತಿ ಇಲ್ಲ.ಅವರ ಜೊತೆಗಿರುವವರು ಮಾಡಿದ್ರಾ? ಇವರ ಮೇಲೆ ಏನಾದ್ರೂ‌ ಹಾಕಿದ್ರಾ ಗೊತ್ತಿಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಬೇಕು ಎಂದರು.

ಆತ ಅಭಿಮಾನಿಗಳ ಬಳಿ ಮಾಧ್ಯಮದವರ ಬಳಿ ಸ್ವಲ್ಪ ಮುಂಗೋಪದಿಂದ ಮಾತನಾಡುತ್ತಾನೆ ಅಷ್ಟೇ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ತನಿಖೆ ನಡೆದು ಸತ್ಯ ಹೊರಗೆ ಬರಲಿ. ಇನ್ನೇನು‌ ಕೆಲವೇ ದಿನಗಳಲ್ಲಿ ಏನು ಎತ್ತ ಹೊರಬರುತ್ತೆ. ರಾಜ್ಯದ ಜನರಿಗೂ‌ ಗೊತ್ತಾಗುತ್ತದೆ ಎಂದಿದ್ದಾರೆ.

ತಮ್ಮ ಗನ್ ಮ್ಯಾನ್ ಮೇಲೆ ದರ್ಶನ್ ಬೆಂಬಲಿಗರ ಹಲ್ಲೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಉದಯ್ ಗೌಡ, ನನ್ನ ಗನ್ ಮ್ಯಾನ್‌ ಮೇಲೆ ಹಲ್ಲೆ ಅನ್ನೋದು ಗೊತ್ತಿಲ್ಲ. ಅದೆಲ್ಲವೂ ಸುಳ್ಳು. ನಿಮಗೆ ಇದೆಲ್ಲಾ ಯಾರು ಹೇಳಿದ್ದು. ಆ ರೀತಿಯ ಘಟನೆ ಆಗೇ ಇಲ್ಲ ಎಂದು ತಿಳಿಸಿದರು.

Key words: murder case, Actor-Darshan, MLA, Uday Gowda

Tags :

.