ಮುಸ್ಲೀಂ ಬಾಂಧವರಿಗೆ ಬಿಜೆಪಿಯಿಂದ ಚಿತ್ರಹಿಂಸೆ: ದೇಶ ಬಿಟ್ಟು ಓಡಿಸುವ ಯತ್ನ- ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ.
11:36 AM Apr 22, 2024 IST
|
prashanth
ಬೆಂಗಳೂರು,ಏಪ್ರಿಲ್,22,2024 (www.justkannada.in): ಮುಸ್ಲೀಂ ಬಾಂಧವರಿಗೆ ಬಿಜೆಪಿಯವರು ಚಿತ್ರಹಿಂಸೆ ನೀಡುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ಕೊಟ್ಟು ದೇಶವನ್ನು ಬಿಟ್ಟು ಓಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಕಿಡಿ ಕಾರಿದರು.
ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಗೆ ಆಕ್ರೋಶ ವ್ಯಕ್ತಪಡಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಆದರೆ ಮುಸ್ಲಿಂ ಬಾಂಧವರಿಗೆ ಬಿಜೆಪಿ ಮಾನಸಿಕ ಹಿಂಸೆ ನೀಡಿ ದೇಶ ಬಿಟ್ಟು ಓಡಿಸಲು ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯಕ್ಕೆ ಬಿಜೆಪಿಯವರು ಏನು ಮಾಡಲಿಲ್ಲ. ಡಬಲ್ ಇಂಜಿನ್ ಸರ್ಕಾರ ಫೇಲ್ ಆಗಿಹೋಯ್ತು ಬಿಜೆಪಿ ದೊಡ್ಡ ಇಂಜಿನ್ ಫೇಲ್ ಆಗಿ ಹೋಯಿತು ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
Key words: Muslim -BJP- DCM -DK Shivakumar
Next Article