For the best experience, open
https://m.justkannada.in
on your mobile browser.

ಕಾವೇರಿ ನೆಲದಲ್ಲಿ ಕಾಲ್ನಡಿಗೆ ವಿದೇಶಿ ವೀರ..!

07:25 PM Feb 09, 2024 IST | mahesh
ಕಾವೇರಿ ನೆಲದಲ್ಲಿ ಕಾಲ್ನಡಿಗೆ ವಿದೇಶಿ ವೀರ

 

ಮೈಸೂರು, ಫೆ. ೦೯, ೨೦೨೪ : ಪ್ರತಿ ದಿನ ತಮ್ಮ‌ ದೇಹವನ್ನು‌ ಆರೋಗ್ಯವಾಗಿ ಇಟ್ಟುಕೊಳ್ಳವುದಕ್ಕೆ ವಾಕಿಂಗ್ ಮಾಡಿ ಎಂದರೆ ಎಷ್ಟೋ ಜನ ನನಗೆ ನಡೆಯುವುದಕ್ಕೆ ಅಗುವುದಿಲ್ಲ‌ ಎನ್ನುವವರೇ ಹೆಚ್ಚು ಆದರೆ ಇಲ್ಲೊಬ್ಬ ವಿದೇಶಿ‌ ಪ್ರಜೆ ಭಾರತವನ್ನ ಕಾಲ್ನಡಿಗೆ ಮೂಲಕವೇ ಪ್ರವಾಸಿ ತಾಣಗಳ ವಿಕ್ಷಣೆ ಮಾಡುತ್ತಿದ್ದಾನೆ.

ಇಂಗ್ಲೆಂಡ್ ದೇಶದ ಪ್ರಜೆ ಬೇನ್ ನಡೆದುಕೊಂಡು ಕಾವೇರಿ‌ ನದಿಯ ಆಸು ಪಾಸಿನಲ್ಲಿ ‌ಸಿಗುವ ಪ್ರವಾಸಿತಾಣಗಳ ವಿಕ್ಷಣೆ ಮಾಡುತ್ತಿದ್ದಾನೆ.

ಬೆನ್ ಇಂಗ್ಲೆಂಡ್ ನಿಂದ ವಿಮಾನದ ಮೂಲಕ ಗೋವಾ ರಾಜ್ಯಕ್ಕೆ ಬಂದು ಅಲ್ಲಿ‌ನ ಸ್ಥಳಗಳನ್ನು ವೀಕ್ಷಣೆ ಮಾಡಿ ನಂತರ ರೈಲಿನ ಮೂಲಕ ಕೇರಳ ರಾಜ್ಯಕ್ಕೆ ಅಗಮಿಸಿ‌ ಅಲ್ಲಿಂದ ಪ್ರಮುಖ ಪ್ರವಾಸಿ ಸ್ಥಳಗಳನ್ನು ವಾಹನದಲ್ಲಿ ಸಂಚಾರ ಮಾಡದೇ ಕಾಲ್ನಡಿಗೆಯಲ್ಲಿ ಸಂಚಾರಿಸುತ್ತ ಕೊಡಗು ಜಿಲ್ಲೆಗೆ ಅಗಮಿಸಿದ್ದಾನೆ. ನಂತರ ತಲಕಾವೇರಿಗೆ ಭೇಟಿ ನೀಡಿ ಕಾವೇರಿ ನದಿ ಉಗಮ ಸ್ಥಳವನ್ನು ವಿಕ್ಷಣೆ ನಡೆಸಿದಾಗ , ಸ್ಥಳೀಯರು ಕಾವೇರಿ ಉಗಮ ಹಾಗೂ ಅಂತ್ಯವಾಗುವ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತಾರೆ.ಈ ವಿಚಾರ ಬೆನ್ ನನ್ನ ಹೆಚ್ಚು ಅಕರ್ಷಣೆ ಮಾಡುವುದರಿಂದ ಬೆನ್ ಕಾವೇರಿ ನದಿಯು ಹರಿಯುವ ಕಡೆಯಲ್ಲಿ ಸಂಚಾರ ಅರಂಭ ನಡೆಸುತ್ತಾನೆ.

ಪ್ರತಿ ದಿನ 25 ರಿಂದ‌ 30 ಕಿ.ಮೀ‌ವರೆಗೂ ನಡೆಯುವ ಬೆನ್ ಕತ್ತಲೆಯಾಗುತ್ತಿದಂತೆ ಊರುಗಳಲ್ಲಿ ರೂಮ್ ಮಾಡುವುದಾಗಲಿ ಅಥವಾ ರೂಮ್ ಗಳು ಸಿಗದೆ ಇರುವ ಸ್ಥಳಗಳಲ್ಲಿ ಅಲ್ಲಿನ ಸ್ಥಳೀಯರ ಮನೆಗಳನ್ನು ಅಶ್ರಯಿಸಿ ನಂತರ ಮತ್ತೆ ತನ್ನ ಪಯಣವನ್ನು ಶುರು ಮಾಡುತ್ತಾನೆ.

ಇಲ್ಲಿಯವರೆಗೂ ಬೆನ್ ಸುಮಾರು 300 ಕ್ಕೂ ಹೆಚ್ಚು ಕಿ.ಮೀ ಕಾಲ್ನಡಿಗೆಯಲ್ಲಿ ಪಯಣವನ್ನು ನಡೆಸಿದ್ದು ಕಾವೇರಿ ಅಂತ್ಯ ಸ್ಥಳವಾದ ತಮಿಳುನಾಡಿನವರೆಗೂ ಪಯಣ ಮಾಡಬೇಕು ಎನ್ನುವ ಆಶಯವನ್ನು ಬೆನ್ ಹೊಂದಿದ್ದಾನೆ.

ಒಟ್ಟಾರೆ ಹೇಳುವುದಾದರೆ ಬಾಷೆಯಾಗಲಿ ಜನಗಳಾಗಲಿ ಗೊತ್ತಿಲ್ಲದೇ ಇದ್ದರು ಕೂಡ ಧೈರ್ಯದಿಂದ ಕಾಲ್ನಡಿಗೆ ಮೂಲಕ ನಡೆಸುತ್ತಿರುವ ಬೆನ್ ಪಯಣ ಸುಖಕರವಾಗಿರಲಿ ಎನ್ನುವುದೇ ನಮ್ಮ ಆಶಯ.

  • ಅನಿಲ್ ರಾಜ್ ಎಸ್ ಎಂ ಸೋಸಲೆ , ಯಶ್ ಟೆಲ್ ಟಿವಿ , ಮೈಸೂರು.

key words :mysore ̲ cauvery ̲ walk ̲ ben ̲ karnataka

Tags :

.