ಮತ್ತೆ ಒಂದಾದ ಹಳೆಯ ಗೆಳೆಯರು! : ಮೈಸೂರಿನ ಕಾವೇರಿ ಸಮೂಹ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿಗಳ ಸಭೆ
ಮೈಸೂರು, ಡಿಸೆಂಬರ್ 22, 2023 (www.justkannada.in): ಮೈಸೂರಿನ ಕಾವೇರಿ ಸಮೂಹ ಸಂಸ್ಥೆ ವತಿಯಿಂದ ಹಳೆಯ ವಿದ್ಯಾರ್ಥಿಗಳ ಮೊದಲ ಸಭೆ ಸಂಭ್ರಮದಿಂದ ನಡೆಯಿತು.
ಕಾವೇರಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಭಾಗವಾಗಿರುವ ಕಾವೇರಿ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಸೈನ್ಸಸ್’ನ ಹಳೆಯ ವಿದ್ಯಾರ್ಥಿಗಳ ಮೊದಲ ಸಭೆ ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಸಂಭ್ರಮದಿಂದ ನಡೆಯಿತು.
ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾವೇರಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಜಿ.ಆರ್.ಚಂದ್ರಶೇಖರ ಅವರು ಹಳೆಯ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ನೋಡಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹಳೆ ವಿದ್ಯಾರ್ಥಿಗಳು ಒಂದು ಸಂಘವನ್ನು ರಚಿಸಿಕೊಂಡು ಮುಂದಿನ ವರ್ಷಗಳಲ್ಲಿ ಈಗಿನ ವಿದ್ಯಾರ್ಥಿಗಳ ಮತ್ತಷ್ಟು ಪ್ರಗತಿಗೆ ಸಹಕರಿಸುವಂತೆ ಕೋರಿದರು.
ಸಂಸ್ಥೆ ಡೀನ್ ಡಾ.ಶ್ರೀಕಂಠಸ್ವಾಮಿ ಮಾತನಾಡಿ, ಹಳೆಯ ವಿದ್ಯಾರ್ಥಿಗಳೇ ಬ್ರಾಂಡ್ ಅಂಬಾಸಿಡರ್ ಆಗಬಲ್ಲ ಸಂಸ್ಥೆಗಳ ಶಕ್ತಿ ಎಂದು ಹೇಳಿದರು. ಕಾವೇರಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ.ಸರಳಾ ಚಂದ್ರಶೇಖರ್, ಪ್ರಾಂಶುಪಾಲರಾದ ಡಾ.ಅರವಿಂದ್, ಕಾವೇರಿ ಆರೋಗ್ಯ ವಿಜ್ಞಾನ ಸಂಸ್ಥೆಯ ಉಪ ಪ್ರಾಂಶುಪಾಲರಾದ ಪ್ರೊ.ಶಿಮ್ಯಾ ಮತ್ತು ಪ್ರೊ.ಸಂಪಾದ ಹಾಗೂ ಕಾವೇರಿ ಸಮೂಹ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯ, ವಿದೇಶಗಳಲ್ಲಿ ನೆಲೆಸಿರುವ ಸಂಸ್ಥೆಯ 200 ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
English Summary
Mysore Cauvery Group of Institutions had their first Alumni meet
In a first of its kind, Cauvery Institute of Health Sciences, a part of Cauvery Group of Institutions had first Alumni meet of their old students.
In the inaugural function, Dr. G R Chandrashekar, Chairman, Cauvery Group of Institutions, expressed his happiness about seeing all the old students again and felt proud about the achievements of the alumni in their life. He also called upon the alumni to form an association and help in further advancement of the present students in the upcoming years.
Dean, Dr. Srikantaswamy spoke on the occasion and told that the alumni are the strength of an institutions who can become the brand ambassadors.
Dr. Sarala Chandrashekar, Managing Director, Cauvery Group of Institutions, Dr. Aravind, Principal, Prof. Shimya and Prof Sampada, Vice Principals of Cauvery Institute of Health Sciences and all the principals of Cauvery Group of Institutions were present during the event. About 200 alumni settled in Karnataka and Various places of India and Abroad attended the event.