HomeBreaking NewsLatest NewsPoliticsSportsCrimeCinema

ಬೆಂಗಳೂರಿನ ಬಳಿಕ ಇದೀಗ ಮೈಸೂರಲ್ಲಿ ಕಾಲರಾ ಪತ್ತೆ : ಮುಂಜಾಗ್ರತೆಗೆ ಮುಂದಾದ ಎಂ.ಸಿ.ಸಿ

03:47 PM Apr 05, 2024 IST | mahesh

 

ಮೈಸೂರು, ಏ. 05, 2024  : (www.justkannada.in news ) ರಾಜಧಾನಿ ಬೆಂಗಳೂರಿನ ಬಳಿಕ ಈಗ ಮೈಸೂರು ನಗರದಲ್ಲೂ ಕಾಲರಾ ಸೋಂಕು ಕಾಣಿಸಿಕೊಂಡಿದೆ.

ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸಂಪೂರ್ಣ ವಾಗಿ ನಿರ್ಮೂಲನೆಯಾಗಿದ್ದ ಕಾಲರಾ ಸಾಂಕ್ರಾಮಿಕ ರೋಗ ಹಲವು ವರ್ಷಗಳ ಬಳಿಕ ಇದೀಗ ಮತ್ತೆ ಪತ್ತೆಯಾಗಿದೆ.

ಬಡಾವಣೆ ಸರ್ವೆ :

ಕಾಲರಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಅದರಂತೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಡಾ.ಮಧು ತಿಳಿಸಿದರು.

ಈ ಬಗ್ಗೆ ಜಸ್ಟ್‌ ಕನ್ನಡ ಜತೆ ಮಾತನಾಡಿದ ಎಂ.ಸಿ.ಸಿ. ಆಯುಕ್ತರಾದ ಡಾ.ಮಧು ಹೇಳಿದಿಷ್ಟು..

ಕಾಲರಾ ಕಾಣಿಸಿಕೊಂಡ ಬಡಾವಣೆ ಸುತ್ತಮುತ್ತಲಿನ ನಿವಾಸಿಗಳ ೬೦೦ ಕ್ಕೂ ಹೆಚ್ಚು ಸ್ಯಾಂಪಲ್‌ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದೆ. ಆದರೆ ಬೇರೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಕಾರಣ ಸೋಂಕು ಬಂದ ಮಹಿಳೆಯ ಟ್ರಾವೆಲ್‌ ಹಿಸ್ಟರಿ ಪರೀಕ್ಷಿಸಲಾಗುತ್ತಿದೆ.  ಇದರಿಂದ ಅವರು ಬೇರೆ ಎಲ್ಲಾದರೂ ನೀರು, ಆಹಾರ ಪದಾರ್ಥ ಸೇವಿಸಿದ್ದರೆ ಎಂಬುದು ತಿಳಿದು ಬರಲಿದೆ.

ಜತೆಗೆ ಮೈಸೂರು ನಗರದ ಸುತ್ತಮುತ್ತ ಎಲ್ಲೂ ನೀರಿನಿಂದ ಹರಡುವ ರೋಗಗಳಾಗಲಿ ಅಥವಾ ರೋಗ ಲಕ್ಷಣಗಳಾಗಲಿ ಪತ್ತೆಯಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮ ಜರುಗಿಸುವ ನಿಟ್ಟಿನಲ್ಲಿ ಪಾಲಿಕೆ ಆರೋಗ್ಯಾಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರುವೆ . ಅಗತ್ಯ ಕಂಡು ಬಂದಲ್ಲಿ, ಹೋಟೆಲ್‌ ಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರು ಪೂರೈಸುವ ಸಂಬಂದ ಸೂಚನೆ ನೀಡಲಾಗುವುದು. ಜತೆಗೆ ಶುಚಿತ್ವದ ಕಡೆ ಗಮನ ಹರಿಸುವಂತೆಯೂ ಆದೇಶಿಸಲಾಗುತ್ತದೆ ಎಂದರು.

ಕಾಲರಾ ಭೀತಿ : ಕುಡಿಯಲು ಬಿಸಿ ನೀರು ಕೊಡುವಂತೆ ಕೆಫೆಗಳಿಗೆ ಆದೇಶಿಸಿದ ಬಿಬಿಎಂಪಿ.

 

ಪತ್ತೆಯಾಗಿದ್ದು ಹೇಗೆ :

ಮೈಸೂರಿನ ಎನ್‌.ಆರ್. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳೇ ಬಡಾವಣೆ ನಿವಾಸಿ ಮಹಿಳೆಗೆ ಕಾಲರಾ ದೃಢಪಟ್ಟಿದೆ. ಆ ಮಹಿಳೆ  ಕೆ.ಆರ್.ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಕೆಲದಿನಗಳ ಹಿಂದಷ್ಟೇ ಮನೆಗೆ ಹಿಂದಿರುಗಿದ್ದರು.

ತೀವ್ರ ಹೊಟ್ಟೆನೋವು, ವಾಂತಿ-ಭೇದಿ ಕಾಣಿಸಿಕೊಂಡ ಕಾರಣ ಮಹಿಳೆ ಕೆ.ಆರ್.ಆಸ್ಪತ್ರೆಗೆ ತೆರಳಿ ತಪಾಸಣೆ  ಮಾಡಿಸಿಕೊಂಡಾಗ ಸಾಂಕ್ರಾಮಿಕ ರೋಗ ಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ಸುಮಾರು 52 ವರ್ಷ ವಯಸ್ಸಿನ ಮಹಿಳೆ ತೀವ್ರ ನಿತ್ರಾಣ ಗೊಂಡಿದ್ದರಿಂದ ಅಪೌಷ್ಟಿಕತೆ ಬಾಧಿಸ ದಂತೆ ಚಿಕಿತ್ಸೆ ನೀಡಲಾಗಿತ್ತು. ಪ್ರಯೋಗಾ ದಲ್ಲಿ ಮಲ ಪರೀಕ್ಷೆ ಮಾಡಿಸಿ ಬಳಿಕ ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಗಿತ್ತು.

ಬಿಸಿಲಿನ ತೀವ್ರತೆ, ಅಶುಚಿತ್ವ, ಕಲುಷಿತ ನೀರು, ಆಹಾರ ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡಲು ಕಾರಣ ವಾಗಿದ್ದು, ಹಲವು ವರ್ಷಗಳ ಬಳಿಕ ಮೈಸೂರಲ್ಲಿ ಇದೇ ಮೊದಲು ಕಾಲರಾ ದೃಢಪಟ್ಟಿದ್ದು. ಅವರನ್ನು ದಾಖಲಿಸಿ ಕೊಂಡು ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ.

key words : Mysore, CHOLERA, MCC, CORPORATION, HEALTH

ENGLISH SUMMARY : 

After Bengaluru, now Mysuru city has also been infected with cholera. The cholera epidemic, which was completely eradicated in Mysuru city and district, has now been detected again after many years.

Mysuru City Corporation (MCC) Commissioner Dr. Madhu said that the Deputy Commissioner has held a meeting and instructed to take precautionary measures in the wake of the outbreak of cholera and necessary action has been taken accordingly.

 

Tags :
CHOLERAmccMysore.
Next Article