HomeBreaking NewsLatest NewsPoliticsSportsCrimeCinema

ಆರೋಪಿ ಸತೀಶ್ ಬಾಬು ಮೊಬೈಲ್ ಸೀಜ್ ಮಾಡಿದ ಪೊಲೀಸರು..!

04:06 PM May 04, 2024 IST | mahesh

ಮೈಸೂರು, ಮೇ.04, 2024 : (www.justkannada.in news ) ಪ್ರಜ್ವಲ್ ರೇವಣ್ಣ ಮಾಸ್‌ ರೇಪ್‌ ಆರೋಪ ಪ್ರಕರಣದ ಬಳಿಕ ಬೆಳಕಿಗೆ ಬಂದದ್ದು  ಕೆ.ಆರ್.ನಗರದ ಅತ್ಯಾಚಾರಕ್ಕೊಳಗಾದ ಮಹಿಳೆ ದೂರು. ಈ ಪ್ರಕರಣದ ಸಂತ್ರಸ್ತ ಮಹಿಳೆ ಎಲ್ಲಿ ಎಂಬ ಅನುಮಾನ ಇದೀಗ ಕಾಡತೊಡಗಿದೆ.

ಮೇಲಿನ ಅ ಕೇಸಿನ ಸಂತ್ರಸ್ತ ಮಹಿಳೆ ಎಲ್ಲಿ ? ಒಂದೆಡೆ ಎಸ್ ಐಟಿ ಪೊಲೀಸರಿಂದ ಹುಟುಕಾಟ ನಡೆಯುತ್ತಿದ್ದರೆ  ಮತ್ತೊಂದೆಡೆ ಕೆ.ಆರ್.ನಗರ ಠಾಣಾ ಪೊಲೀಸರಿಂದ ಶೋಧಕಾರ್ಯ ನಡೆದಿದೆ.

ಮೈಸೂರು, ಬೆಂಗಳೂರು, ಹಾಸನ, ಹೊಳೆನರಸೀಪುರ, ಕೆ.ಆರ್.ನಗರ, ಮಂಡ್ಯ, ಕೆ.ಆರ್.ಪೇಟೆ ಎಲ್ಲಾ ಕಡೆ ತಲಾಶ್ ಮಾಡುತ್ತಿರುವ ಪೊಲೀಸ್‌ ಸಿಬ್ಬಂದಿ. ಆದರೆ ಎಷ್ಟೇ ಹುಡುಕಿದರೂ ಪತ್ತೆಯಾಗದ ಸಂತ್ರಸ್ತ ಮಹಿಳೆ. ಇದು ಆತಂಕಕ್ಕೆ ಎಡೆಮಾಡಿದೆ.

ಪ್ರಜ್ವಲ್ ಪ್ರಕರಣದಲ್ಲಿ ಮುಖ್ಯ ಎನಿಸಿರುವ ಸಾಕ್ಷಿ ಇದು. ಸಂತ್ರಸ್ತೆ ಮಗ ದೂರು ನೀಡಿದರೂ ಮಹಿಳೆ ಪತ್ತೆಯಚ್ಚುವಲ್ಲಿ ಪೊಲೀಸರು ವಿಫಲ. ಮಹಿಳೆ ಹೊರಬಂದು ಹೇಳಿಕೆ ನೀಡಿದರೆ  ಮಾಜಿ ಸಚಿವ ಎಚ್.ಡಿ. ರೇವಣ್ಣ ಕುಟುಂಬಕ್ಕೆ ಸಂಕಷ್ಟ ತಪ್ಪಿದ್ದಲ್ಲ.

ಈ ಕಾರಣಕ್ಕೆ ಆಕೆಯನ್ನ ಅಪಹರಣ ಮಾಡಿರುವ ಶಂಕೆ ಕುಟುಂಬದವರದ್ದು, ಅದರಲ್ಲೂ ಆಕೆಯ ಮಗನನ್ನು ಕಾಡುತ್ತಿರುವ ಆತಂಕ ಇದು. ಕಿಡ್ನಾಪ್ ಕಂಪ್ಲೇಂಟ್ ಆದರೂ ಅಧಿಕಾರಿಗಳ ಜಾಣ ನಡೆ ಆಶ್ಚರ್ಯಕ್ಕೆ ಎಡೆಮಾಡಿದೆ.

A2 ಆರೋಪಿ ಸತೀಶ್ ಬಾಂಬು ಬಂಧಿಸಿದ ಅಧಿಕಾರಿಗಳು,  A2 ಆರೋಪಿಯನ್ನ ವಿಚಾರಣೆಗೊಳಪಡಿಸಲಿಲ್ಲ.

ಇದೀಗ, ಕೆ.ಆರ್.ನಗರ ಕಿಡ್ನಾಪ್ ಕೇಸ್ ಕಹಾನಿಗೆ ಸಂಬಂಧಿಸಿದಂತೆ A2 ಆರೋಪಿ ಸತೀಶ್ ಬಾಬು ಮೊಬೈಲ್ ಸೀಜ್ ಮಾಡಲಾಗಿದೆ. ಸತೀಶ್ ಬಾಬು ಪೊಲೀಸರಿಗೆ ಅಸಹಕಾರ ಹಿನ್ನೆಲೆ. ಆತನ ಮೊಬೈಲ್ ಕಾಲ್ ಡಿಟೈಲ್ಸ್ ಮೇಲೆ ಕಣ್ಣು. ಸತೀಶ್ ಬಾಬು ಫೋನಿನಲ್ಲಿರುವ ಡಾಟಾ ಕೂಡ ಸಂಗ್ರಹ.

ಏ.29 ರ ರಾತ್ರಿ 9 ಗಂಟೆ ಸಮಯದಲ್ಲಿ ಸತೀಶ್ ಬಾಬು ಎಲ್ಲಿದ್ದ ? ಸತೀಶ್ ಬಾಬು ಯಾರಿಗೆಲ್ಲ ಕರೆ ಮಾಡಿದ್ದ.

ಸತೀಶ್ ಬಾಬು ಅವರಿಗೆ ಯಾರೆಲ್ಲ ಕರೆ ಮಾಡಿದ್ದರು. ಸತೀಶ್ ಬಾಬು ಯಾರೆಲ್ಲರ ಜೊತೆ ಸಂಪರ್ಕದಲ್ಲಿದ್ದ ಮಾಹಿತಿ ಕಲೆ ಹಾಕಲು ಮುಂದಾದ ಕೆ.ಆರ್.ನಗರ ಪೊಲೀಸರು.

key words: Mysore-city-corporation, failed-to address, rain-issues

 

Tags :
failed-to addressmysore-city-corporationrain-issues
Next Article