ಮೈಸೂರು ದಸರಾ 2024: ಕಿರು ಸ್ತಬ್ದಚಿತ್ರ ತಯಾರಿಸುವ ಸ್ಪರ್ಧೆಗೆ ಆಹ್ವಾನ
ಮೈಸೂರು,ಸೆಪ್ಟಂಬರ್,2,2024 (www.justkannada.in): ಈ ಬಾರಿ ಮೈಸೂರು ದಸರಾವನ್ನ ಅದ್ಧೂರಿಯಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಸಕಲ ಸಿದ್ದತೆಗಳು ನಡೆಯುತ್ತಿವೆ. ಈ ಮಧ್ಯೆ ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ದಚಿತ್ರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸ್ತಬ್ದಚಿತ್ರ ಉಪಸಮಿತಿಯು ಆಹ್ವಾನಿಸಿದೆ.
ಮೈಸೂರು ದಸರಾ 2024 ಆಚರಣೆಯ ಭಾಗವಾಗಿ, ಸ್ತಬ್ದ ಚಿತ್ರ ಉಪಸಮಿತಿಯು ಭಾರತದ ಸೃಜನಾತ್ಮಕ ನಾಗರೀಕರನ್ನು ನಾವೀನ್ಯತೆ ಮತ್ತು ಭವಿಷ್ಯಾತ್ಮಕ ಕಲ್ಪನೆಯುಳ್ಳ ಕಿರು ಸ್ತಬ್ದಚಿತ್ರ ತಯಾರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದೆ.
ಈ ಸ್ಪರ್ಧೆಯು ಸಾಂಸ್ಕೃತಿಕವಾಗಿ ಶ್ರೀಮಂತವಾದ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರ ವಿನ್ಯಾಸಗಳನ್ನು ರಚಿಸಲು ಸಾರ್ವಜನಿಕ ಭಾಗೀದಾರಿಕೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಿದೆ. ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಅತ್ಯುತ್ತಮ ವಿನ್ಯಾಸವನ್ನು ಪೂರ್ಣಪ್ರಮಾಣದ ಸ್ತಬ್ಧಚಿತ್ರ ಆಗಿ ಪರಿವರ್ತಿಸಲಾಗುವುದು ಮತ್ತು ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಸ್ತಬ್ದಚಿತ್ರ ಉಪಸಮಿತಿಯು ತಿಳಿಸಿದೆ.
ಈ ಸ್ಪರ್ಧೆಯಲ್ಲಿ ಎಲ್ಲಾ ಭಾರತೀಯ ನಾಗರಿಕರಿಗೆ ಅವಕಾಶವಿದ್ದು, ಸ್ಪರ್ಧಾತ್ಮಕತೆಯು ವೈಯಕ್ತಿಕವಾಗಿ ಅಥವಾ ತಂಡವಾಗಿ (ತಂಡದಲ್ಲಿ ಗರಿಷ್ಠ 4 ಸದಸ್ಯರು) ಪಾಲ್ಗೊಳ್ಳಬಹುದು. ಪ್ರತಿ ಸ್ಪರ್ಧಿ ಅಥವಾ ತಂಡವು ಒಂದು ಪ್ರವೇಶವನ್ನು ಮಾತ್ರ ಸಲ್ಲಿಸಬಹುದು.
ನೊಂದಣಿ:
ಸ್ಪರ್ಧಿಗಳು 13 ಸೆಪ್ಟೆಂಬರ್ 2024 ರೊಳಗೆ ನೋಂದಾಯಿಸಬೇಕು. ನೊಂದಣಿ ಫಾರ್ಮ್- https://forms.gle/Ep9Ab2Ghi2dx8NiKA ಅನ್ನು ತುಂಬಬೇಕು. ನೋಂದಣಿ ಉಚಿತವಾಗಿದೆ.
ಕಿರು ಸ್ತಬ್ಧಚಿತ್ರವು ಕರ್ನಾಟಕ ಅಥವಾ ಭಾರತದ ಸಾಂಸ್ಕೃತಿಕ, ಐತಿಹಾಸಿಕ ಅಥವಾ ಸಾಮಾಜಿಕ ಅಂಶಗಳನ್ನು, ಭವಿಷ್ಣಾತ್ಮಕ ಅಂಶಗಳನ್ನು ಒಳಗೊಂಡಂತೆ ಪ್ರತಿಬಿಂಬಿಸಬೇಕು. ಸ್ಪರ್ಧೆಗೆ ಸಲ್ಲಿಸುವ ವಿನ್ಯಾಸವು ಮೂಲತಃ ಹೊಸದು ಆಗಿರಬೇಕು ಮತ್ತು ಹಿಂದಿನ ಯಾವುದೇ ಸ್ಪರ್ಧೆಗೆ ಸಲ್ಲಿಸಬಾರದು ಎಂಬ ಷರತ್ತು ವಿಧಿಸಲಾಗಿದೆ
ಆಯಾಮಗಳು: ಗರಿಷ್ಠ 60 ಸೆಂಮೀ x 60 ಸೆಂಮೀ x 60 ಸೆಂಮೀ.ಪರಿಸರ ಸ್ನೇಹಿ ಮತ್ತು ನಾವೀನ್ಯ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತದೆ. ಕಿರು ಸ್ತಬ್ಧಚಿತ್ರ ಸದೃಢವಾಗಿ ಸ್ವಯಂ ಬೆಂಬಲಿತವಾಗಿಯೂ ಇರಬೇಕು.
ಸ್ಪರ್ಧಾ ಕಿರು ಸ್ತಬ್ಧಚಿತ್ರವನ್ನು 17 ಸೆಪ್ಟೆಂಬರ್ 2024 ರಂದು ಸಂಜೆ 5:00 ಗಂಟೆಗೆ ಮೈಸೂರು ಜಿಲ್ಲೆಯ ಪಂಚಾಯತ್ ಕಚೇರಿಗೆ ಕಡ್ಡಾಯವಾಗಿ ಸ್ವತಃ ಸಲ್ಲಿಸುವುದು. ಸ್ಪರ್ಧಾ ಕಿರು ಸ್ತಬ್ದಚಿತ್ರದ ಜೊತೆ 300 ಪದಗಳ ಒಳಗಿನ ವಿವರಣೆ (ವಿನ್ಯಾಸದ ಪರಿಕಲ್ಪನೆ, ಭವಿಷ್ಯಾತ್ಮಕ ಅಂಶಗಳು, ಮತ್ತು ಪ್ರೇರಣೆ) ಸಲ್ಲಿಸಬೇಕು ಎಂದು ದಸರಾ ಉಪಸಮಿತಿ ತಿಳಿಸಿದೆ.
ಬಹುಮಾನಗಳು:
ವಿಜೇತ: INR 25,000 ಮತ್ತು ವಿಜೇತ ವಿನ್ಯಾಸವು ಮೈಸೂರು ದಸರಾ 2024 ನ ಸಂಪೂರ್ಣ ಪ್ರಮಾಣದ ಸ್ತಬ್ದಚಿತ್ರ ಆಗಿ ಪರಿವರ್ತಿಸಲ್ಪಡುತ್ತದೆ.
ದ್ವಿತೀಯ ಬಹುಮಾನ: INR 15,000
ತೃತೀಯ ಬಹುಮಾನ: INR 10,000
ಆಯ್ಕೆಯಾದ ಎಲ್ಲ ಸ್ಪರ್ಧಿಗಳಿಗೆ ಪಾಲ್ಗೊಳ್ಳುವ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಅತ್ಯುತ್ತಮ 10 ಕಿರು ಸ್ತಬ್ಧಚಿತ್ರಗಳನ್ನು ದಸರಾ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುತ್ತದೆ.
ನಿಯಮಗಳು ಮತ್ತು ಷರತ್ತುಗಳು:
ಸ್ತಬ್ಧಚಿತ್ರ ಉಪಸಮಿತಿಯು ವಿಜೇತ ವಿನ್ಯಾಸದಲ್ಲಿ ಪ್ರಾಯೋಗಿಕ ಉದ್ದೇಶಗಳಿಗೆ ತಿದ್ದುಪಡಿ ಮಾಡಲೂ ಅಧಿಕಾರ ಹೊಂದಿರುತ್ತದೆ.
ಸ್ಪರ್ಧಾತ್ಮಕ ಸ್ತಬ್ಧಚಿತ್ರಗಳನ್ನು ಉಚಿತವಾಗಿ ಪ್ರಚಾರ ಉದ್ದೇಶಗಳಿಗೆ ಉಪಯೋಗಿಸಲು ಸ್ಪರ್ಧಾರ್ಥಿಗಳು ಒಪ್ಪಿಗೆ ನೀಡಬೇಕು.
ನಿರ್ಣಾಯಕರ ತೀರ್ಮಾನ ಅಂತಿಮವಾಗಿರುತ್ತದೆ.
ಸ್ಪರ್ಧೆಯನ್ನು ರದ್ದುಪಡಿಸಲು ಅಥವಾ ಬದಲಾಯಿಸಲು ಉಪಸಮಿತಿಯು ಹಕ್ಕನ್ನು ಹೊಂದಿರುತ್ತದೆ.
ಈ ಸಂಬಂಧ ಮಾಹಿತಿಗಾಗಿ ಚೇತನ್ ಕುಮಾರ್ ಎಂ: 91-8296536692 ಮತ್ತು ಯಶ್ವಂತ್ ಎಂ.ಕೆ 91-9738405358 ಸಂಪರ್ಕಿಸಬಹುದು.
Key words: Mysore Dasara 2024, Invitation, Short tablo, Competition