For the best experience, open
https://m.justkannada.in
on your mobile browser.

ದಸರಾ 2ನೇ ಹಂತದ ಗಜಪಡೆಗೆ ತೂಕ ಪರೀಕ್ಷೆ: ಸುಗ್ರೀವನಿಗೆ ತೂಕದಲ್ಲಿ ಎರಡನೇ ಸ್ಥಾನ

10:30 AM Sep 06, 2024 IST | prashanth
ದಸರಾ 2ನೇ ಹಂತದ ಗಜಪಡೆಗೆ ತೂಕ ಪರೀಕ್ಷೆ  ಸುಗ್ರೀವನಿಗೆ ತೂಕದಲ್ಲಿ ಎರಡನೇ ಸ್ಥಾನ

ಮೈಸೂರು,ಸೆಪ್ಟಂಬರ್,6,2024 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ನಿನ್ನೆಯಷ್ಟೆ ಮೈಸೂರಿಗೆ ಆಗಮಿಸಿರುವ ಎರಡನೇ ಹಂತದ ಗಜಪಡೆಗೆ ಇಂದು ತೂಕ ಪರೀಕ್ಷೆ ನಡೆಸಲಾಗಿದೆ.

ಮೈಸೂರಿನ ಸಾಯಿರಾಂ ತೂಕ ಪರೀಕ್ಷಾ ಕೇಂದ್ರದಲ್ಲಿ ಮಹೇಂದ್ರ, ಸುಗ್ರೀವ, ಪ್ರಶಾಂತ, ಲಕ್ಷ್ಮಿ, ಹಿರಣ್ಯ ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿದೆ.  ನಿನ್ನೆಯಷ್ಟೇ ಐದು ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದವು. ಇನ್ನು ತೂಕದಲ್ಲಿ ಸುಗ್ರೀವ ಎರಡನೇ ಸ್ಥಾನದಲ್ಲಿದ್ದು ಅಭಿಮನ್ಯು ನಂತರ ಅತಿ ಹೆಚ್ಚು ತೂಕವನ್ನ ಸುಗ್ರೀವ ಹೊಂದಿದ್ದಾನೆ.

ಐದು ಆನೆಗಳ ತೂಕ ಈ ಕೆಳಕಂಡಂತಿದೆ.

ಪ್ರಶಾಂತ  : 4875 ಕೆ.ಜಿ

ಹಿರಣ್ಯ     : 2930 ಕೆ.ಜಿ

ಮಹೇಂದ್ರ: 4910 ಕೆ.ಜಿ

ಲಕ್ಷ್ಮಿ    : 3485 ಕೆ.ಜಿ

ಸುಗ್ರೀವ    : 5190 ಕೆ.ಜಿ

ಇಂದು ತೂಕ ಪರೀಕ್ಷೆ ಬಳಿಕ ಎರಡನೇ ಹಂತದ ಗಜಪಡೆ ಸಂಜೆಯಿಂದ ತಾಲೀಮಿನಲ್ಲಿ ಭಾಗಿಯಾಗಲಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಫ್ ಡಾ ಪ್ರಭುಗೌಡ, ಎರಡನೇ ಹಂತದ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ. ನಿನ್ನೆಯಷ್ಟೇ ಐದು ಆನೆಗಳು ಅರಮನೆ ಅವರಣಕ್ಕೆ ಬಂದಿವೆ. ಅಭಿಮನ್ಯು ನಂತರ ಸುಗ್ರೀವ ಅತಿ ಹೆಚ್ಚು ತೂಕ ಹೊಂದಿದ್ದಾನೆ. ಇಂದು ಸಂಜೆಯಿಂದಲೇ ಎಲ್ಲಾ ಆನೆಗಳು ತಾಲೀಮಿನಲ್ಲಿ ಭಾಗಿಯಾಗುತ್ತವೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ. ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗಿದೆ. ಸೆಪ್ಟೆಂಬರ್ 15ರ ಬಳಿಕ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತದೆ. ವರಲಕ್ಷ್ಮಿ ಕ್ಯಾಂಪ್ ನ ಅತ್ಯಂತ ಹಿರಿಯ ಆನೆಯಾಗಿದ್ದು, ಅವಶ್ಯಕತೆ ಇದ್ದಾಗ ಮಾತ್ರ ವರಲಕ್ಷ್ಮಿ ಆನೆಯನ್ನ ತಾಲೀಮಿಗೆ ಕರೆ ತರಲಾಗುತ್ತದೆ ಎಂದು ತಿಳಿಸಿದರು.

Key words: mysore dasara, 2nd Phase, Gajapade, Weight Test

Tags :

.