ಮೈಸೂರು ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳಿವು
ಮೈಸೂರು,ಸೆಪ್ಟಂಬರ್,18,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈಗಾಗಲೇ ಕಾಡಿನಿಂದ ನಾಡಿಗೆ ಬಂದು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಗೆ ತಾಲೀಮು ನಡೆಸಲಾಗುತ್ತಿದೆ.
ನಾಡಹಬ್ಬ ದಸರಾದಲ್ಲಿ ವಿಶ್ವ ವಿಖ್ಯಾತ ಜಂಬೂಸವಾರಿ ಪ್ರಮುಖ ಆಕರ್ಷಣೆ. ಅಂತಹ ಜಂಬೂಸವಾರಿಯಲ್ಲಿ ಅಂಬಾರಿ ಹೊರುವ ಆನೆಗಳಿಗೂ ಅಷ್ಟೇ ಪ್ರಾಮುಖ್ಯತೆ ನೀಡಲಾಗುತ್ತದೆ. ಸದ್ಯ ಕ್ಯಾಪ್ಟನ್ ಅಭಿಮನ್ಯ ಕಳೆದ ಮೂರು ವರ್ಷಗಳಿಂದ ಅಂಬಾರಿ ಹೊತ್ತು ಜಂಬೂ ಸವಾರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದಾನೆ. ಈ ಬಾರಿಯೂ ಸಹ ಅಂಬಾರಿ ಹೊರಲಿದ್ದಾನೆ.
ಆದರೆ ಈ ದಸರಾ ಸಮಯದಲ್ಲಿ ಈ ಹಿಂದೆ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ್ದ ಆನೆಗಳ ಸಮಾಧಿಗಳನ್ನ ನೆನೆಯಬೇಕಿದೆ. 18 ಬಾರಿ ಅಂಬಾರಿ ಹೊತ್ತ ಆನೆ ದ್ರೋಣ ಹಾಗೂ 3 ಬಾರಿ ಅಂಬಾರಿ ಹೊತ್ತ ರಾಜೇಂದ್ರ ಆನೆಗಳ ಸಮಾಧಿ ಹೆಚ್.ಡಿ ಕೋಟೆ ತಾಲೂಕು ಬಳ್ಳೆಹಾಡಿ ಗ್ರಾಮದಲ್ಲಿವೆ. ರಾಜೇಂದ್ರ ಆನೆಯನ್ನು ಗಂಧದಗುಡಿ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ.
ಕೃಪೆ : ಅಶೋಕ್ ಕುಮಾರ್,
ಉಪ ನಿರ್ದೇಶಕರು,
ವಾರ್ತಾ ಇಲಾಖೆ, ಮೈಸೂರು.
Key words: Mysore Dasara, Elephant, Graves