ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಗಾಂಭೀರ್ಯ ನಡಿಗೆ : ಜಂಬಸವಾರಿ ಕಣ್ತುಂಬಿಕೊಳ್ಳುತ್ತಿರುವ ಜನಸಾಗರ.
05:46 PM Oct 24, 2023 IST
|
prashanth
ಮೈಸೂರು,ಅಕ್ಟೋಬರ್,24,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಐತಿಹಾಸಿಕ ಜಂಬೂಸವಾರಿ ಮೆರವಣಿಗೆಗೆ ಸಿಎಂ ಸಿದ್ಧರಾಮಯ್ಯ ವಿದ್ಯುಕ್ತ ಚಾಲನೆ ನೀಡಿದ್ದು ಚಿನ್ನದ ಅಂಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಗಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಹಬ್ಬ ದಸರಾ ವೈಭವ ಕಳೆಗಟ್ಟುದ್ದು, ನಾಡಿನ ಅಧಿದೇವತೆಯನ್ನ ಪ್ರತಿಷ್ಟಾಪಿಸಲಾಗಿರುವ 750 ಕೆಜಿ ಚಿನ್ನದ ಅಂಬಾರಿಯನ್ನ ಹೊತ್ತು ಕ್ಯಾಪ್ಟನ್ ಅಭಿಮನ್ಯು ರಾಜಪಥದದಲ್ಲಿ ಹೆಜ್ಜೆ ಹಾಕುತ್ತಿದ್ದಾನೆ. ಅಭಿಮನ್ಯುವಿಗೆ ಲಕ್ಷ್ಮಿ ವಿಜಯ ಕುಮ್ಕಿ ಆನೆಗಳು, ನಿಶಾನೆಯಾಗಿ ಅರ್ಜುನ ಸಾಥ್ ನೀಡಿದ್ದಾನೆ.
ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಕಿಕ್ಕಿರಿದು ನಿಂತು ಜಂಬುಸವಾರಿ ಮೆರವಣಿಗೆಯನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ. ಮೈಸೂರು ಅರಮನೆ ಹೊರಟಿರುವ ಜಂಬೂ ಸವಾರಿ ಮೆರವಣಿಗೆ ಸುಮಾರು 5 ಕಿ ಮೀ ಸಾಗಿ ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ.
-V.Mahesh kumar
Key words: mysore-dasara-jamboo savari-Abhimanyu-ambari
Next Article