HomeBreaking NewsLatest NewsPoliticsSportsCrimeCinema

MYSORE DASARA: ಜಂಬೂಸವಾರಿ ಅ.12 ಕ್ಕೆ ;18 ಆನೆಗಳ ʼ ಗಜ ಪಡೆʼ  ಶಾರ್ಟ್‌ ಲಿಸ್ಟ್‌ ರೆಡಿ..!

11:30 AM Jul 20, 2024 IST | mahesh
ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌

 

It is proposed to finalize 18 elephants, including 14 elephants and an additional four elephants, who will take part in the Jumbo Savary procession this time. These elephants will enter Mysuru on August 9 or 11. The first batch will have nine elephants.

ಮೈಸೂರು, ಜು.20,2024: (www.justkannada.in news)  ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯ ಗಜಪಡೆ ಆಯ್ಕೆಗೆ ಚಾಲನೆ.

ಈ ಬಾರಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 14 ಆನೆ, ಹೆಚ್ಚುವರಿ ನಾಲ್ಕು ಆನೆ ಸೇರಿದಂತೆ 18 ಆನೆಗಳನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಈ ಆನೆಗಳು ಆಗಸ್ಟ್ 9 ಅಥವಾ 11 ರಂದು ಮೈಸೂರು ಪ್ರವೇಶಿಸಲಿದೆ. ಮೊದಲ ತಂಡದಲ್ಲಿ 9 ಆನೆಗಳು ಬರಲಿವೆ.

ಈ ಸಾಲಿನ ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆ ಅ.೧೨ರಂದು ನಡೆಯಲಿದೆ. ಎಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವ ವಿಜೃಂಭಣೆಯಿಂದ  ಆಚರಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಹೆಚ್ಚಿನ ತರಬೇತಿ, ನೀಡುವುದಕ್ಕಾಗಿ ೬೦ ದಿನ ಮುಂಚಿತವಾಗಿ ಆನೆಗಳನ್ನು ಕರೆತರಲು ಉದ್ದೇಶಿಸಲಾಗಿದೆ.

ಈಗಾಗಲೇ ನಾಗರಹೊಳೆ ಅರಣ್ಯ ವ್ಯಾಪ್ತಿಯ ಮತ್ತಿಗೋಡು, ಭೀಮನಕಟ್ಟೆ, ದೊಡ್ಡಹರವೆ, ಕೊಡಗಿನ ದುಬಾರೆ, ಬಂಡೀಪುರದ ರಾಂಪುರ ಕ್ಯಾಂಪ್‌ಗೆ ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಬಿ.ಎಂ.ಶರಣಬಸಪ್ಪ ನೇತೃತ್ವದ ಅರಣ್ಯಾಧಿಕಾರಿಗಳ ತಂಡ ತೆರಳಿ ಪಶುವೈಧ್ಯರೊಂದಿಗೆ ಒಟ್ಟು ೨೨ ಆನೆಗಳನ್ನು ಪರಿಶೀಲನೆ ನಡೆಸಿದೆ. ಅವುಗಳಲ್ಲಿ ೧೮ ಆನೆಗಳ ಪಟ್ಟಿ ಸಿದ್ಧಪಡಿಸಿ, ೧೪ ಆನೆ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿವೆ. ಉಳಿದ ೪ ಆನೆ ಕಾಯ್ದಿರಿಸಲಾಗಿದೆ.

ಮೊದಲ ತಂಡದಲ್ಲಿ ೯ ಆನೆ:

ಆಯ್ಕೆ ಮಾಡಿರುವ ೧೪ ಆನೆಗಳಲ್ಲಿ ಮೊದಲ ತಂಡದಲ್ಲಿ ೯ ಆನೆಗಳನ್ನು ಗಜಪಯಣದ ಮೂಲಕ ಕರೆತರಲಾಗುತ್ತಿದೆ. ಮೊದಲ ತಂಡದಲ್ಲಿ ಮತ್ತಿಗೋಡು ಕ್ಯಾಂಪ್‌ನಿಂದ ಗಜಪಡೆಯ ನಾಯಕ, ಅಂಬಾರಿ ಆನೆ ಅಭಿಮನ್ಯು(೫೮), ಭೀಮ, ಹೊಸ ಆನೆ ಏಕಲವ್ಯ(೩೯), ಭೀಮನಕಟ್ಟೆ ಕ್ಯಾಂಪ್‌ನಿಂದ ವರಲಕ್ಷ್ಮೀ(೬೮), ದುಬಾರೆ ಕ್ಯಾಂಪ್‌ನಿಂದ ಧನಂಜಯ(೪೧), ಗೋಪಿ(೪೨), ಕಂಜನ್(೨೫), ರಾಮಾಪುರ ಕ್ಯಾಂಪ್‌ನಿಂದ ರೋಹಿತ(೨೨), ಲಕ್ಷ್ಮೀ (೨೩) ಆನೆಗಳು ಸಾಂಸ್ಕೃತಿಕ ನಗರಿಗೆ ಆಗಮಿಸಲಿವೆ.

ಎರಡನೇ ತಂಡದಲ್ಲಿ ದುಬಾರೆ ಕ್ಯಾಂಪ್‌ನಿಂದ ಪ್ರಶಾಂತ(೫೧), ಸುಗ್ರೀವ(೪೨), ಮತ್ತಿಗೋಡು ಕ್ಯಾಂಪ್‌ನಿಂದ ಮಹೇಂದ್ರ(೪೧), ದೊಡ್ಡಹರವೆಯಿಂದ  ಲಕ್ಷ್ಮೀ(೫೩), ರಾಂಪುರ ಕ್ಯಾಂಪ್‌ನಿಂದ ಹಿರಣ್ಯ(೩೭) ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಕರೆತರಲು ಉದ್ದೇಶಿಸಲಾಗಿದೆ.

ಕಾಯ್ದಿರಿಸಿದ ಆನೆಗಳು: ಈ ಬಾರಿ ೧೪ ಆನೆಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆಯಾದರೂ, ಹೆಚ್ಚುವರಿಯಾಗಿ ೪ ಆನೆಗಳನ್ನು ಕಾಯ್ದಿರಿಸಲಾಗಿದೆ. ಅರಮನೆಯಲ್ಲಿ ಬೀಡುಬಿಟ್ಟ ದಸರಾ ಗಜಪಡೆಯಲ್ಲಿ ಯಾವುದಾದರೂ ಆನೆಗೆ ಅನಾರೋಗ್ಯ ಸಮಸ್ಯೆ ಕಾಡಿದರೆ, ಅದಕ್ಕೆ ಪರ್ಯಾಯವಾಗಿ ಬಳಕೆ ಮಾಡಲು ಹಾಗೂ ಭವಿಷ್ಯದಲ್ಲಿ ದಸರಾ ಆನೆಗಳನ್ನು ಸಜ್ಜುಗೊಳಿಸಲು ನಾಲ್ಕು ಆನೆಗಳನ್ನು ಕಾಯ್ದಿರಿಸಲಾಗಿದೆ. ಅವುಗಳಲ್ಲಿ ಅವುಗಳಲ್ಲಿ ದುಬಾರೆ ಕ್ಯಾಂಪ್‌ನಿಂದ ಅನುಭವಿ ಪ್ರಶಾಂತ(೪೯), ಅಯ್ಯಪ್ಪ(೧೩), ರಾಮಾಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ(೧೯) ಹಾಗೂ ಮಾಲಾದೇವಿ(೩೭) ಆನೆಗಳನ್ನು ಆಯ್ಕೆ ಮಾಡಿ ಕಾಯ್ದಿರಿಸಲಾಗಿದೆ. ಕೆಲವರು ಅರಣ್ಯ ಇಲಾಖೆಗೆ ಸಲಹೆ ನೀಡಿದ್ದು, ಕಾಯ್ದಿರಿಸಿದ್ದ ಆನೆಗಳಲ್ಲಿ ಹೊಸ ಆನೆಗಳನ್ನು ಮೈಸೂರಿಗೆ ತಂದು ಇತರೆ ಆನೆಗಳೊಂದಿಗೆ ತರಬೇತಿ ನೀಡಿದರೆ, ಭವಿಷ್ಯದಲ್ಲಿ ದಸರಾ ಆನೆ ಸಜ್ಜುಗೊಳಿಸಲು ಸುಲಭವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಸಧ್ಯಕ್ಕೆ ಮೊದಲ ತಂಡದಲ್ಲಿ ೯, ಎರಡನೇ ತಂಡದಲ್ಲಿ ೫ ಆನೆ ಮೈಸೂರಿಗೆ ಬರುವುದು ಖಚಿತವಾಗಿದೆ.

KEY WORDS: MYSORE DASARA, Jumbo Savary, to be held on, Oct. 12, A shortlist of 18 elephants, is ready.

SUMMARY:

ಮತ್ತಿಗೋಡು ಕ್ಯಾಂಪ್ ನಲ್ಲಿ‌ ಮಹೇಂದ್ರ, ಭೀಮ, ಏಕಲವ್ಯ ಆನೆಯನ್ನು ಪರಿಶೀಲಿಸುತ್ತಿರುವ ಡಿಸಿಎಫ್ ಶರಣಬಸಪ್ಪ‌

It is proposed to finalize 18 elephants, including 14 elephants and an additional four elephants, who will take part in the Jumbo Savary procession this time. These elephants will enter Mysuru on August 9 or 11. The first batch will have nine elephants.

Tags :
A shortlist of 18 elephantsis ready.Jumbo Savarymysore dasaraOct. 12to be held on
Next Article