For the best experience, open
https://m.justkannada.in
on your mobile browser.

ಸೋಮನಾಥಪುರ ದೇವಸ್ಥಾನಕ್ಕೆ ಬ್ಲಾಗರ್ ಗಳ ತಂಡ ಭೇಟಿ: ಶಿಲ್ಪಕಲೆ, ಕೆತ್ತನೆಯ ಬಗ್ಗೆ ಶ್ಲಾಘನೆ

05:53 PM Sep 12, 2024 IST | prashanth
ಸೋಮನಾಥಪುರ ದೇವಸ್ಥಾನಕ್ಕೆ ಬ್ಲಾಗರ್ ಗಳ ತಂಡ ಭೇಟಿ  ಶಿಲ್ಪಕಲೆ  ಕೆತ್ತನೆಯ ಬಗ್ಗೆ ಶ್ಲಾಘನೆ

 ಮೈಸೂರು,ಸೆಪ್ಟಂಬರ್,12,2024 (www.justkannada.in): ಮೈಸೂರಿನಲ್ಲಿ ಅಕ್ಟೋಬರ್ 3 ರಿಂದ ಅಕ್ಟೋಬರ್ 12 ರವರೆಗೆ ದಸರಾ-2024 ಉತ್ಸವಗಳು ನಡೆಯಲಿದ್ದು, ಪ್ರವಾಸೋದ್ಯಮ ಇಲಾಖೆಯು ಸಾಮಾಜಿಕ ಜಾಲತಾಣಗಳನ್ನು ಕೇಂದ್ರೀಕರಿಸಿ 'ಡಿಸ್ಕವರ್ ಮೈಸೂರು' ಉಪಕ್ರಮದ ಮೂಲಕ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ,  ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕರ್ನಾಟಕ ಟೂರಿಸಂ ಸೊಸೈಟಿ (ಕೆಟಿಎಸ್‌) ಸಹಯೋಗದಲ್ಲಿ ಮೈಸೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುವುದು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ಇಂದು ಬ್ಲಾಗರ್ ಗಳ ತಂಡ ಇಂದು ಸೋಮನಾಥಪುರದ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಇತಿಹಾಸ ಹಾಗೂ ವಾಸ್ತುಶಿಲ್ಪದ ಬಗ್ಗೆ ಗೈಡ್ ಗಳಿಂದ ಮಾಹಿತಿ ಪಡೆದು  ದೇವಸ್ಥಾನದ ಶಿಲ್ಪ ಕಲೆ ಹಾಗೂ ಕೆತ್ತನೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತಾ ಅವರು ಬ್ಲಾಗರ್ ಗಳನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಪ್ರಾದೇಶಿಕ ಆಯುಕ್ತ ಫಾರುಕ್ ಅಹಮದ್, ಸಹಾಯಕ ನಿರ್ದೇಶಕ ಕೇದಾರ್ ನಾಥ್ , ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ದಸರಾ ವಸ್ತುಪ್ರದರ್ಶನ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್, ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾರಾಯಣ ಗೌಡ, ಸೇಫ್ ವೀಲ್ ಚೇರ್ ಮೆನ್ ಪ್ರಶಾಂತ್ , ಗೈಡ್ ಅಸೋಸಿಯೇಷನ್ ಅಧ್ಯಕ್ಷರಾದ ಅಶೋಕ್ ಹಾಗೂ ಇತರರು ಉಪಸ್ಥಿತರಿದ್ದರು.

Key words: mysore dasara, Team of bloggers, visit, Somanathapura temple

Tags :

.