HomeBreaking NewsLatest NewsPoliticsSportsCrimeCinema

ನಾಡ ಕಚೇರಿಗೆ ಮೈಸೂರು ಡಿಸಿ ಡಾ.ಕೆ.ವಿ ರಾಜೇಂದ್ರ ದಿಢೀರ್‌ ಭೇಟಿ, ಪರಿಶೀಲನೆ.

04:15 PM Jun 13, 2024 IST | prashanth
featuredImage featuredImage

ಮೈಸೂರು,ಜೂನ್,13,2024 (www.justkannada.in): ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಅವರು ವರುಣಾ ನಾಡ ಕಚೇರಿಗೆ ಇಂದು ದಿಢೀರ್‌ ಭೇಟಿ ನೀಡಿ ಕಚೇರಿಯಲ್ಲಿ ಹಲವಾರು ಕಡತಗಳನ್ನು ಪರೀಶಿಲಿಸಿದರು.

ಈ ಸಂದರ್ಭದಲ್ಲಿ ಪಹಣಿ, ಆಧಾರ್ ತಿದ್ದುಪಡಿ ನೋಂದಣಿ ಸಂಬಂಧ ಕಂದಾಯ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು  ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಸೂಚಿಸಿದರು.

ನಂತರ ನಗರದ ಕರ್ನಾಟಕ ಓನ್ ಕೇಂದ್ರಕ್ಕೆ ಭೇಟಿ ನೀಡಿ  ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.  ತದಾ ನಂತರ ಪಕ್ಕದಲ್ಲಿದಲ್ಲಿರುವ ಆಹಾರ ಇಲಾಖೆಗೆ ಭೇಟಿ ನೀಡಿ ಉತ್ತಮವಾದ ಹಾಗೂ ಗುಣಮಟ್ಟದ ಅಕ್ಕಿ, ರಾಗಿ ವಿತರಣೆ ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕರಾದ ವೇಣುಗೋಪಾಲ್ ಹಾಗೂ ವಿನೋದ್ ಕುಮಾರ್ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

Key words: Mysore DC, Dr. KV Rajendra,  visit, Nada kacheri

Tags :
Dr. KV RajendraMysore DCNada kacherivisit