ಚುನಾವಣಾಧಿಕಾರಿ ನಿರ್ಲಕ್ಷ್ಯ : ಪೋಸ್ಟಲ್ ಬ್ಯಾಲೆಟ್ ಉದ್ದೇಶ ಪೂರ್ವಕ ತಡೆ, ಆರೋಪಿಸಿದ ಬಿಜೆಪಿ.
ಮೈಸೂರು, ಏ.22, 2024 : (www.justkannada.in news) ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಸಮರ್ಪಕವಾಗಿ ಪೋಸ್ಟಲ್ ಬ್ಯಾಲೆಟ್ ಒದಗಿಸದೆ ಉದ್ದೇಶ ಪೂರ್ವಕವಾಗಿ ತಡೆ ಹಿಡಿಯಲಾಗುದೆ. ಆಮೂಲಕ ಮತದಾನ ಪ್ರಮಾಣ ಕಡಿಮೆಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ನಗರ ವಕ್ತಾರ ಮೋಹನ್ ಸೋಮವಾರ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.
ಮೈಸೂರು ಕೊಡುಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 2202 ಮತಗಟ್ಟೆಗಳಿವೆ. ಒಂದು ಪೋಲಿಂಗ್ ಸ್ಟೇಷನಲ್ಲಿ 5 ಕ್ಕೂ ಹೆಚ್ಚು ಜನ ಕರ್ತವ್ಯಕ್ಕೆ ನಿಯೋಜನೆ ಆಗಿರುತ್ತಾರೆ. ಅಂದಾಜು 10 ರಿಂದ 12 ಸಾವಿರ ಸರ್ಕಾರಿ ನೌಕರರು ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುತ್ತಾರೆ. ಅವರಿಗೆಲ್ಲಾ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನದ ಅವಕಾಶ ಇರುತ್ತದೆ. ಚುನಾವಣೆ ಕರ್ತವ್ಯದಲ್ಲಿ ಭಾಗಿಯಾಗುವವರಿಗೆ ನಮೂನೆ ನಂ. 12 ಕೊಡಲು ಜಿಲ್ಲಾ ಚುನಾವಣಾಧಿಕಾರಿಗಳು ವಿಳಂಬ ಮಾಡಿದ್ದಾರೆ. ಅದನ್ನ ಒದಗಿಸುವ ಕರ್ತವ್ಯ ಜಿಲ್ಲಾಡಳಿತ ಹೊಂದಿರುತ್ತದೆ. ಆದರೆ, ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಈ ತನಕ ಪೋಸ್ಟಲ್ ಬ್ಯಾಲೆಟ್ ಕೊಟ್ಟಿಲ್ಲ ಎಂಬ ದೂರು ಕೇಳಿ ಬಂದಿದೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ಸರ್ಕಾರಿ ನೌಕರರಿಗೆ ಪೋಸ್ಟಲ್ ಬ್ಯಾಲೆಟ್ ಒದಗಿಸದೆ ಉದ್ದೇಶ ಪೂರ್ವಕವಾಗಿ ತಡೆ ಹಿಡಿಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಮತದಾನ ಕಡಿಮೆಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಆಡಳಿತರೂಡ ಕಾಂಗ್ರೆಸ್ ಸರ್ಕಾರದ ಪ್ರಭಾವಕ್ಕೆ ಒಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳು ಸರ್ಕಾರದ ಏಜೆಂಟ್ಗಳಂತೆ ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ನೌಕರರಿಗೆ ಈ ಕೂಡಲೇ ಪೋಸ್ಟಲ್ ಬ್ಯಾಲೆಟ್ ವಿತರಿಸಬೇಕು. ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಲೋಪವನ್ನ ಕೇಂದ್ರ ಚುನಾವಣಾ ಆಯೋಗ ತನಿಖೆ ಮಾಡಬೇಕು ಎಂದು ಮೋಹನ್ ಒತ್ತಾಯಿಸಿದರು.
ಪೋಸ್ಟಲ್ ಬ್ಯಾಲೆಟ್ ನಲ್ಲಿ ಶೇ 70 ರಿಂದ 80 ರಷ್ಟು ಮತಗಳು ಬಿಜೆಪಿ ಪರವಾಗಿಯೇ ಬರುತ್ತದೆ . ಇದನ್ನು ತಡೆಯುವ ದೃಷ್ಟಿಯಿಂದ ಜಿಲ್ಲಾ ಚುನಾವಣಾ ಅಧಿಕಾರಿಗಳ ಮೂಲಕ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಎಂ.ಎ ಮೋಹನ್ ಗಂಭೀರ ಆರೋಪ.
ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಸಂತ್,ಮಹೇಶ್ ರಾಜೇ ಅರಸ್ ಮತ್ತಿತರರು ಉಪಸ್ಥಿತಿ.
key words : Mysore, election, postal ballet votes, bjp