For the best experience, open
https://m.justkannada.in
on your mobile browser.

ಬೆಳಗಿನ ಜಾವ ಒಂದರ ತನಕ ವ್ಯಾಪಾರಕ್ಕೆ ಅನುವು: ಆದೇಶ ಜಾರಿಗೆ ಒತ್ತಾಯ.

12:52 PM Aug 14, 2024 IST | prashanth
ಬೆಳಗಿನ ಜಾವ ಒಂದರ ತನಕ ವ್ಯಾಪಾರಕ್ಕೆ ಅನುವು  ಆದೇಶ ಜಾರಿಗೆ ಒತ್ತಾಯ

ಮೈಸೂರು,ಆಗಸ್ಟ್,14,2024 (www.justkannada.in): ಬೆಳಿಗಿನ ಜಾವ 1 ಗಂಟೆವರೆಗೆ  ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂದು ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ,  ಪೊಲೀಸ್ ಆಯುಕ್ತರಾದ ಸೀಮಾಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್  ಅವರಿಗೆ ಮೈಸೂರು ಹೋಟೆಲ್ ಮಾಲೀಕರ ಸಂಘ ಮನವಿ ಸಲ್ಲಿಸಿತು.

ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ. ಸಿ ಅವರ ನೇತೃತ್ವದಲ್ಲಿ ಮೂವರು ಅಧಿಕಾರಿಗಳನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯಾದ್ಯಂತ ಬೆಂಗಳೂರು ಸೇರಿದಂತೆ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಎಲ್ಲಾ ವಾಣಿಜ್ಯ ವ್ಯಾಪಾರದ ದೃಷ್ಠಿಯಿಂದ ರಾತ್ರಿ ವೇಳೆಯ ವ್ಯಾಪಾರದ ವಹಿವಾಟಿನ  ನಿರ್ಬಂಧವನ್ನು ಬೆಳಗಿನ ಜಾವ ಒಂದು ಗಂಟೆಯವರಿಗೆ ವಿಸ್ತರಿಸಲು  2024-25ರ ರಾಜ್ಯ ಬಜೆಟ್ ಕಂಡಿಕೆ 269 ರಲ್ಲಿ ಘೋಷಿಸಲಾಗಿದೆ. ಇದರನ್ವಯ  ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಸಹಕಾರ ನೀಡಿ ಕೂಡಲೇ ಈ ಆದೇಶ ಜಾರಿಗೆ ತರಬೇಕೆಂದು ಒತ್ತಾಯಿಸಲಾಯಿತು.

ಇದರಿಂದ ಮೈಸೂರು ಪ್ರವಾಸೋದ್ಯಮ ಜಿಲ್ಲೆಯಾಗಿರುವುದರಿಂದ  ಮೈಸೂರಿಗೆ ಆಗಮಿಸುವ ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಮತ್ತು ಆಸ್ಪತ್ರೆಗಳಿಗೆ ಆಗಮಿಸುವವರಿಗೆ ಬಹಳ ಉಪಯುಕ್ತವಾಗುತ್ತದೆ. ಇದರಿಂದ ಸರಕಾರಕ್ಕೆ ವಿವಿದ ರೀತಿಯ ತೆರಿಗೆಗಳ ರೂಪದಲ್ಲಿ ಆದಾಯವು ಹೆಚ್ಚುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತವು ಕೂಡಲೇ  ರಾತ್ರಿ ವೇಳೆಯ ವ್ಯಾಪಾರದ ವಹಿವಾಟಿಗೆ ಅನುಮತಿಯನ್ನ ರಾತ್ರಿ 1.00 ರವರಿಗೆ ವಿಸ್ತರಿಸಿ  ಆದೇಶ ಜಾರಿಗೆ ತರಬೇಕು  ಎಂದು ಮೈಸೂರು ಹೋಟೆಲ್  ಮಾಲೀಕರ ಸಂಘದಿಂದ ಒತ್ತಾಯಿಸಿ ಮನವಿಮಾಡಲಾಯಿತು.

ಈ ವೇಳೆ ಮೈಸೂರು ಹೋಟೆಲ್  ಮಾಲೀಕರ ಸಂಘದ ಕಾರ್ಯದರ್ಶಿ ಎ. ಆರ್ ರವೀಂದ್ರಭಟ್,  ರಾಜ್ಯ ಹೋಟೆಲ್  ಸಂಘದ ಉಪಾಧ್ಯಕ್ಷ ರವಿಶಾಸ್ತ್ರಿ . ಮೈಸೂರು ಹೋಟೆಲ್ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಾಲಕ್ಷ್ಮಿ ಸ್ವೀಟ್ಸ್  ಶಿವಕುಮಾರ್ , ಮೈಸೂರು ಹೋಟೆಲ್  ಸಂಘ ಧರ್ಮದತ್ತಿಯ ಕಾರ್ಯದರ್ಶಿ  ಆರ್ ಸುಬ್ರಹ್ಮಣ್ಯ ತಂತ್ರಿ ಮತ್ತು  ಕ್ರೆಡಾಯ್ ನಿಕಟಪೂರ್ವ ಅಧ್ಯಕ್ಷ  ಶ್ರಿ ಮುರಳಿ ಉಪಸ್ಥಿತರಿದ್ದರು.

Key words: mysore, hotel, Business , extend, request

Tags :

.