For the best experience, open
https://m.justkannada.in
on your mobile browser.

ಅಕ್ರಮ ಸಂಬಂಧ ಶಂಕೆ: ಪತ್ನಿಯನ್ನ ಹತ್ಯೆಗೈದ ಪತಿ.

03:37 PM Jan 03, 2024 IST | prashanth
ಅಕ್ರಮ ಸಂಬಂಧ ಶಂಕೆ  ಪತ್ನಿಯನ್ನ ಹತ್ಯೆಗೈದ ಪತಿ

ಮೈಸೂರು.ಜನವರಿ,3,2024(www.justkannada.in): ಅಕ್ರಮ ಸಂಬಂಧ ಶಂಕೆ ಹಿನ್ನೆಲೆ ಪತ್ನಿಗೆ ಪತಿ ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಜಯದೇವ ನಗರದಲ್ಲಿ ಈ ಘಟನೆ ನಡೆದಿದೆ. ಒಡಿಸ್ಸಾ ಮೂಲದ ಕಾವೇರಿ (40) ಮೃತಪಟ್ಟವರು. ಪ್ರಮೋದ್ ಕುಮಾರ್ (43) ಪತ್ನಿಯನ್ನೇ ಹತ್ಯೆಗೈದ ಆರೋಪಿ. ಆರು ತಿಂಗಳ ಹಿಂದೆ ದಂಪತಿಗಳು ಕೆಲಸಕ್ಕಾಗಿ ಮೈಸೂರಿಗೆ ಆಗಮಿಸಿದ್ದರು. ಪತಿ ಪ್ರಮೋದ್ ಕುಮಾರ್ ಮೈಸೂರಿನ ಜೆಕೆ ಟೈರ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ.

ಈ ನಡುವೆ ಪತ್ನಿಯ ಅಕ್ರಮ ಸಂಬಂಧ ಬಗ್ಗೆ ಪ್ರಮೋದ್ ಕುಮಾರ್ ಆಗಾಗ ಶಂಕೆ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರಕ್ಕೆ ತಡರಾತ್ರಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪತ್ನಿ ಕಾವೇರಿ  ಮೇಲೆ ಮನಸೊ ಇಚ್ಛೆ ಪತಿ ಪ್ರಮೋದ್ ಕುಮಾರ್ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ.

ಘಟನೆ ಬಳಿಕ ಆರೋಪಿ ಪ್ರಮೋದ್ ಕುಮಾರ್ ಮೇಟಗಳ್ಳಿ ಪೊಲೀಸರಿಗೆ ಶರಣಾಗಿದ್ದು,  ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore-Husband- killed- his wife.

Tags :

.