ಮುಡಾ ಹೋರಾಟದಲ್ಲಿ ಗೆಲುವಾಗಲೇಬೇಕು: ‘ಕೈ‘ ಸರ್ಕಾರ ತೊಲಗಲೇಬೇಕು- ಶಾಸಕ ಜಿ.ಟಿ ದೇವೇಗೌಡ
ಮೈಸೂರು,ಆಗಸ್ಟ್,10,2024 (www.justkannada.in): ಮುಡಾ ಹೋರಾಟದಲ್ಲಿ ಗೆಲುವಾಗಲೇಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.
ಮೈಸೂರಿನಲ್ಲಿ ನಡೆಯುತ್ತಿರುವ ಮೈಸೂರು ಚಲೋ ಪಾದತಯಾತ್ರೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಆಗಮಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು. ಮುಂದಿನ ದಿನಗಳಲ್ಲಿ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದು 14ತಿಂಗಳು ಕಳೆದರು ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಮುಡಾ ಹೋರಾಟದಲ್ಲಿ ಗೆಲುವಾಗಲೇಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಲೇಬೇಕು ಎಂದರು.
ಈ ಭ್ರಷ್ಟ ಸರ್ಕಾರವನ್ನು ಮೈತ್ರಿ ಪಕ್ಷಗಳು ನಾವು ಕಿತ್ತೊಗೆಯುತ್ತೇವೆ- ಶಾಸಕ ಬಂಡೇಪ್ಪ ಕಾಶೇಂಪೊರ್
ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಂಡೇಪ್ಪ ಕಾಶೇಂಪೊರ್, ಕಾಂಗ್ರೆಸ್ ಜನಾಂದೋಲನ ಸಮಾವೇಶ ಮಾಡಿದೆ. ಜನಾಂದೋಲನ ಮಾಡಬೇಕಿರೋದು ವಿರೋಧ ಪಕ್ಷದ ಕೆಲಸ. ಅದರೆ ಆಡಳಿತ ಪಕ್ಷದವರು ವಿರೋಧ ಪಕ್ಷದ ವಿರುದ್ದ ಜನಾಂದೋಲನ ಮಾಡಿದ್ದಾರೆ ಇದು ಹಾಸ್ಯಾಸ್ಪದ. ರಾಜ್ಯದಲ್ಲಿ ನೆರೆ ಹೆಚ್ಚಾಗಿದೆ ಗುಡ್ಡಗಳು ಕುಸಿಯುತ್ತಿವೆ. ಸರ್ಕಾರದ ಸಚಿವರು ಹಳ್ಳಿಗಳಿಗೆ ಹೋಗಲು ತಯಾರಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಲಾಟರಿಯಿಂದ ಆಯ್ಕೆಯಾದವರು ಎಂಬ ಪರಮೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ ಬಂಡೆಪ್ಪ ಕಾಶೆಂಪೊರ್, ಕುಮಾರಸ್ವಾಮಿ ಮೂರು ಲಕ್ಷಕ್ಕೂ ಹೆಚ್ಚು ಮತ ಪಡೆದು ಸಂಸದರಾಗಿದ್ದಾರೆ. ಇಂದು ಕಾಂಗ್ರೆಸ್ ಸರ್ಕಾರ ಎತ್ತ ಸಾಗುತ್ತಿದೆ ಎಂದು ಜನ ನೋಡಿದ್ದಾರೆ. ಈ ಭ್ರಷ್ಟ ಸರ್ಕಾರವನ್ನು ಮೈತ್ರಿ ಪಕ್ಷಗಳು ನಾವು ಕಿತ್ತೊಗೆಯುತ್ತೇವೆ. ಜೆಡಿಎಸ್ ಪ್ರಾದೇಶಿಕ ಪಕ್ಷ ಗಟ್ಟಿಯಾಗಿ ಬೇರೂರಿದೆ. ರಾಜ್ಯದಲ್ಲಿ ಎರಡು ಸೀಟ್ ಗೆದ್ದರೂ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಇದು ಜೆಡಿಎಸ್ ಪಕ್ಷದ ಶಕ್ತಿ ಎಂದರು.
Key words: mysore, JDS, BJP, Padayatra, GT Devegowda