ಮೈಸೂರಿನ ಕೆ.ಆರ್.ಆಸ್ಪತ್ರೆ ಕಿರಿಯ-ರೆಸಿಡೆಂಟ್ ವೈದ್ಯರ ಪ್ರತಿಭಟನೆ
ಮೈಸೂರು,ಆಗಸ್ಟ್,16,2024 (www.justkannada.in): ಕೆ.ಆರ್.ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸರಿಪಡಿಸಲು ಆಗ್ರಹ, ಜತೆಗೆ ಕಿರಿಯ ಹಾಗೂ ರೆಸಿಡೆಂಟ್ ವೈದ್ಯರು ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಆಸ್ಪತ್ರೆ ಕಿರಿಯ-ರೆಸಿಡೆಂಟ್ ವೈದ್ಯರು ಪ್ರತಿಭಟನೆ ನಡೆಸಿದರು.
ಕಿರಿಯ ಹಾಗೂ ರೆಸಿಡೆಂಟ್ ವೈದ್ಯರ ಮುಷ್ಕರದಿಂದ ಹೊರ ರೋಗಿಗಳ ವಿಭಾಗದಲ್ಲಿ (ಒಪಿಡಿ ಸೇವೆಯಲ್ಲಿ) ವ್ಯತ್ಯಯವಾಗುವ ಸಂಭವವಿದೆ. ಮೈಸೂರು ಮೆಡಿಕಲ್ ಕಾಲೇಜು ಹಾಗೂ ಕೆ.ಆರ್.ಆಸ್ಪತ್ರೆ ನಿರ್ದೇಶಕರು ಸಮಸ್ಯೆ ಪರಿಹಾರಕ್ಕೆ ಶೀಘ್ರ ಕ್ರಮ ವಹಿಸಬೇಕಿದೆ.
ಜತೆಗೆ ಕೊಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸ್ನಾತಕೋತ್ತರ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನ ಖಂಡಿಸಿ, ಶೀಘ್ರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಪ್ರತಿಭಟನೆಯಲ್ಲಿ ಕಿರಿಯ ಹಾಗೂ ರೆಸಿಡೆಂಟ್ ವೈದ್ಯರು ಆಗ್ರಹಿಸಿದರು.
ಕಳೆದ ಎರಡು ದಿನಗಳ ಹಿಂದಷ್ಟೆ ವೀಲ್ ಚೇರ್ ಪ್ರಕರಣದಿಂದ ಮುಜುಗರಕ್ಕೀಡಾಗಿದ್ದ ಈ ಘಟನೆ ಮಾಸುವ ಮುನ್ನವೇ ಇದೀಗ ಖುದ್ದು ಕೆ.ಆರ್. ಆಸ್ಪತ್ರೆ ಕಿರಿಯ ವೈದ್ಯರೇ ಮೂಲಸವಲತ್ತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
Key words: Mysore, KR Hospital, junior-resident, doctors, protest