ಒಡೆಯರ್ ಕನ್ವೆನ್ಷನ್ ಹಾಲ್ ; ಮುಡಾ ವಶಕ್ಕೆ, ಗುತ್ತಿಗೆದಾರನಿಗೆ ನೋಟೀಸ್..!
ಮೈಸೂರು,ಏ.5,2024 : (www.justkannada.in news ) ನಿಯಮಾನುಸಾರ ಅವಧಿಯೊಳಗೆ ಗುತ್ತಿಗೆ ಹಣ ಪಾವತಿಸುವಲ್ಲಿ ವಿಫಲವಾದ ʼ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ʼ ಗುತ್ತಿಗೆದಾರನಿಗೆ ಮುಡಾ ಅಧಿಕಾರಿಗಳಿಂದ ನೋಟೀಸ್ ಜಾರಿ.
ಗುತ್ತಿಗೆ ಹಣ ಪೂರ್ಣ ಪಾವತಿಸಿ ಕನ್ವೆನ್ಷನ್ ಹಾಲ್ ನ್ನ ವಶಕ್ಕೆ ನೀಡುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.
ಬೆಂಗಳೂರು ಮೂಲದ ಸರ್ಕಾರ್ ಕನ್ಸ್ಟ್ರಕ್ಷನ್ ನ ಮಾಲೀಕ ಸಿದ್ದರಾಜಪ್ಪ ಎಂಬುವರಿಗೆ ಮೈಸೂರಿನ ಹೆಬ್ಬಾಳ್ ಬಡಾವಣೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಅನ್ನು ಮದುವೆ ಮುಂತಾದ ಕಾರ್ಯಕ್ರಮಗಳನ್ನ ನಡೆಸಲು ಗುತ್ತಿಗೆ ನೀಡಲಾಗಿತ್ತು.
ಕರಾರಿನ ವೇಳೆ ನಿಗದಿಪಡಿಸಿದ ಗುತ್ತಿಗೆ ಹಣವನ್ನ ನಿಗದಿತ ಸಮಯದಲ್ಲಿ ಪಾವತಿಸುವಲ್ಲಿ ಸಿದ್ದರಾಜಪ್ಪ ವಿಫಲರಾಗಿದ್ದರು.
ಈ ಸಂಬಂದ , ಈ ಹಿಂದೆಯೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಬಾಕಿ ಗುತ್ತಿಗೆ ಹಣ ಪಾವತಿಸುವಂತೆ ನೋಟೀಸ್ ನೀಡಿ ಎಚ್ಚರಿಕೆ ನೀಡಿತ್ತು.ಈ ವೇಳೆ ಬಾಕಿ ಇರುವ ಗುತ್ತಿಗೆ ಹಣ ಪಾವತಿಸಲು ಸಮಯಾವಕಾಶ ಕೋರಿ ಸಿದ್ದರಾಜಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.
ಸದ್ಯ ನ್ಯಾಯಾಲಯದಲ್ಲಿ ಹೂಡಲಾಗಿದ್ದ ರಿಟ್ ಪಿಟಿಷನ್ ಸಂಖ್ಯೆ 26241/2023 ನ್ನ ವಜಾ ಮಾಡಲಾಗಿದೆ.
ಈ ಹಿನ್ನಲೆ, ಸದರಿ ಗುತ್ತಿಗೆದಾರನಿಗೆ ಪ್ರಾಧಿಕಾರದ ಕಾರ್ಯದರ್ಶಿ ನೋಟೀಸ್ ಜಾರಿ ಮಾಡಿದ್ದಾರೆ. ಬಾಕಿ ಗುತ್ತಿಗೆ ಹಣವನ್ನ ಸಂಪೂರ್ಣ ಪಾವತಿಸಿ ಸದರಿ ಕನ್ವೆನ್ಷನ್ ಹಾಲ್ ಅನ್ನು ಪ್ರಾಧಿಕಾರದ ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ. ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
key words : Mysore, MUDA, Wodeyar convention hall, court, notice
ENGLISH SUMMARY :
MUDA officials have issued a notice to the contractor of Nalwadi Krishnaraja Wodeyar Convention Hall for failing to pay the lease amount within the stipulated time. The notice also directed that the contract amount be paid in full and handed over to the convention hall.