For the best experience, open
https://m.justkannada.in
on your mobile browser.

ಗುರಾಯಿಸಿದ್ದಕ್ಕೆ ನಾಲ್ವರಿಂದ ಯುವಕನ ಹತ್ಯೆ.

01:04 PM May 31, 2024 IST | prashanth
ಗುರಾಯಿಸಿದ್ದಕ್ಕೆ ನಾಲ್ವರಿಂದ ಯುವಕನ ಹತ್ಯೆ

ಮೈಸೂರು,ಮೇ,31,2024 (www.justkannada.in):  ಕೇವಲ ಗುರಾಯಿಸಿದ್ದಕ್ಕೇ ಯುವಕನನ್ನು ನಾಲ್ವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಈ  ಘಟನೆ ನಡೆದಿದೆ.  ಅರ್ಬಾಜ್ ಖಾನ್(18) ಕೊಲೆಯಾದ ಯುವಕ. ಶಾದಿಲ್, ಶಹಬಾಜ್, ಶೋಯಬ್, ಸಾಹಿಲ್ ಕೊಲೆ ಮಾಡಿದ ಆರೋಪಿಗಳು. ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್‌ಗೂ ಗಾಯಗಳಾಗಿದ್ದು,  ಶಹಬಾಜ್ ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದ್ದಾನೆ ಎನ್ನಲಾಗಿದೆ. ಈ ವಿಚಾರದಲ್ಲಿ ಗಲಾಟೆ ಶುರುವಾಗಿದ್ದು ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಾರಕಾಸ್ತ್ರಗಳಿಂದ ಅರ್ಬಾಜ್ ಖಾನ್ ನನ್ನ ನಾಲ್ವರು ಹತ್ಯೆಗೈದಿದ್ದಾರೆ. ಈ ಕುರಿತು ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: mysore, murder, youth, four people

Tags :

.