For the best experience, open
https://m.justkannada.in
on your mobile browser.

ಅಹಿಂದ ದುಂಡು ಮೇಜಿನ ಅಧಿವೇಶನ : ಕಾಂಗ್ರೆಸ್‌ ಬೆಂಬಲಿಸಲು ಒಕ್ಕೊರಲಿನ ನಿರ್ಣಯ.

07:39 PM Apr 24, 2024 IST | mahesh
ಅಹಿಂದ ದುಂಡು ಮೇಜಿನ ಅಧಿವೇಶನ   ಕಾಂಗ್ರೆಸ್‌ ಬೆಂಬಲಿಸಲು ಒಕ್ಕೊರಲಿನ ನಿರ್ಣಯ

ಮೈಸೂರು, ಏ.24, 2024 : (www.justkannada.in news ) ದುಂಡು ಮೇಜಿನ ಅಧಿವೇಶನ ಸಭೆಯಲ್ಲಿಓಕ್ಕೋರಲನಿಂದ   ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೋರುವ ನಿರ್ಣಯ ಅಂಗೀಕರಿಸಲಾಯಿತು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಹಾಗೂ ದಲಿತ, ಹಿಂದುಳಿದ,ಅಲ್ಪಸಂಖ್ಯಾತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಅಹಿಂದ ದುಂಡು ಮೇಜಿನ ಅಧಿವೇಶನ ಇಂದು ಅಯೋಜಿಸಲಾಗಿತ್ತು.

ಮೈಸೂರಿನ ಜೆ ಎಲ್ ಬಿ ರಸ್ತೆಯಲ್ಲಿ ಇರುವ ಗುರು ರೆಸಿಡೆನ್ಸಿ ಯಲ್ಲಿ,  ಭಾರತದ ಸಂವಿಧಾನ ಪೀಠಿಕೆಯನ್ನು ಮಂಡಿಸುವ ಮೂಲಕ ಕಾರ್ಯಕ್ರಮದ ಉದ್ಘಾಟನೆ ನೆರವೇರಿತು.

ಅಹಿಂದ ದುಂಡು ಮೇಜಿನ ಅಧಿವೇಶನದ ಪ್ರಾಸ್ತವಿಕ ಭಾಷಣ ಮಾಡಿದ ರಾಜ್ಯ  ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಕೆ. ಎಸ್. ಶಿವರಾಮು, ಸಂವಿಧಾನ ಹಾಗು ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಕೋರಿದರು.  ಅಹಿಂದ ಸಂಘಟನೆಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವದ ಅಸ್ತಿತ್ವವನ್ನು ನಾವೆಲ್ಲರೂ ಕಳೆದುಕೊಳ್ಳುತ್ತೇವೆ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರುತ್ತಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒರ್ವ ಸುಳ್ಳುಗಾರನೆಂದು ತೋರಿಸಿಕೊಟ್ಟಿದ್ದಾರೆ.  ಬಿಜೆಪಿ ಮತ್ತು ಆರ್ ಎಸ್ ಎಸ್ ಸಂಘಟನೆಗಳ ರೂವಾರಿಯಾಗಿ ಕೆಲಸ ಮಾಡುತ್ತಿರುವ ಮೋದಿಯವರಿಗೆ ತಕ್ಕ ಪಾಠವನ್ನು ಕಲಿಸಲು ಎಲ್ಲಾ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಪ್ರೊ. ಅರವಿಂದ ಮಾಲಗತ್ತಿ ಅಧಿವೇಶನದ ಉದ್ಘಾಟಿಸಿದರು. ವಿಧಾನಪರಿಷತ್ ಸದಸ್ಯ ಡಾ. ಡಿ ತಿಮ್ಮಯ್ಯ  ಮಾತನಾಡಿ ಬಿಜೆಪಿ ತೊಲಗಿಸಿ ಕಾಂಗ್ರೆಸ್ ಉಳಿಸಿ ಎಂಬ ಶೀರ್ಷಿಕೆ ಅಡಿಯಲ್ಲಿ ತಮ್ಮ ನಿರ್ಣಯವನ್ನು ಸಭೆಯಲ್ಲಿ ಮಂಡಿಸಿದರು.

ಮೈಸೂರು ಕಾಂಗ್ರೆಸ್ ಗ್ರಾಮಾಂತರ ಸಮಿತಿ  ಅಧ್ಯಕ್ಷ ಬಿ.ಜೆ. ವಿಜಯ್ ಕುಮಾರ್  ಮಾತನಾಡಿ, ಸಾಹಿತಿಗಳು ಪ್ರಗತಿಪರ ಚಿಂತಕರು ಅಹಿಂದ ಸಂಘಟನೆಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿರುವುದಕ್ಕೆ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು. ಇಡೀ ರಾಜ್ಯದಲ್ಲಿ ಮೈಸೂರು ಭಾಗದಲ್ಲಿ ಮೊದಲಿಂದಲೂ ಸಹ ಪ್ರಗತಿಪರ ಸಂಘಟನೆಗಳು ಕೋಮುವಾದದ ವಿರುದ್ಧ ನಿಂತು ಹೋರಾಟ ಮಾಡಿಕೊಂಡು ಬರುತ್ತಿದೆ ಎಂದರು.

ಮಾಜಿ ಸಚಿವ  ಶಿವಣ್ಣ ಮಾಜಿ ಶಾಸಕರಾದ ನಂಜುಂಡಸ್ವಾಮಿ,  ಭಾರತೀ ಶಂಕರ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಕೋರುವರ ಮೂಲಕ ನಿರ್ಣಯಕ್ಕೆ ಸಾಕ್ಷಿಯಾದರು.

ಅಧಿವೇಶನದಲ್ಲಿ ಪ್ರೊಫೆಸರ್ ಕಾಳೇಗೌಡ ನಾಗವಾರ,  ಶ್ರೀ ಹರಿಹರ ಆನಂದ ಸ್ವಾಮಿ,  ಆರ್ ಮೂರ್ತಿ ಅ ಎಫ್ ಎಂ ಕಲೀಮ್ , ಕದೀರ್ ಅಹ್ಮದ್, ಫ್ರಾನ್ಸಿಸ್, ಮಾಜಿ ಮೇಯರ್‌  ನಾರಾಯಣ್ , ಸುಬ್ರಹ್ಮಣ್ಯ,  ವೆಂಕೋಬ, ಎಚ್ಎಸ್ ಪ್ರಕಾಶ್, ಎಸ್ ಯೋಗೀಶ, ಎಸ್ ರವೀ ನಂದನ್, ಮೊಗಣ್ಣಚಾರ್, ಎನ್ ಆರ್ ನಾಗೇಶ್, ಲೋಕೇಶ್ ಕುಮಾರ್,  ಮಾದಾಪುರ ತಿಮ್ಮಯ್ಯ , ಎ ಆರ್ ಕಾಂತರಾಜು ಹಾಜರಿದ್ದರು.

ದುಂಡು ಮೇಜಿನ ಅಧಿವೇಶನದ ಈ ಸಭೆಯಲ್ಲಿ ಹಾಜರಿದ್ದ ಎಲ್ಲ ಸಂಘಟನೆಗಳ ಮುಖಂಡರುಗಳು ಪದಾಧಿಕಾರಿಗಳು ಸಾಹಿತಿಗಳು ವಿಮರ್ಶಕರು ಪ್ರಗತಿಪರ ಮಹಿಳಾ ಮುಖಂಡರುಗಳು ಚಿಂತಕರು ಓಕ್ಕೋರಲನಿಂದ   ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವನ್ನು ಕೋರುವ ಮುಖಾಂತರ ನಿರ್ಣಯವನ್ನು ಮಂಡಿಸಲಾಯಿತು.

key words : Mysore, obc, roundtable, meeting, supports, congress

Tags :

.