For the best experience, open
https://m.justkannada.in
on your mobile browser.

MYSORE PALACE: ಹುಷಾರು..ನೀವೀಗಾ IP BASED CCTV ಕಣ್ಗಾವಲಿನಲ್ಲಿದ್ದೀರಾ…?

03:43 PM Sep 10, 2024 IST | mahesh
mysore palace  ಹುಷಾರು  ನೀವೀಗಾ ip based cctv ಕಣ್ಗಾವಲಿನಲ್ಲಿದ್ದೀರಾ…

CCTV Surveillance: The entire palace complex is equipped with a network of 132 CCTV cameras (IP Based) to monitor visitor movement and ensure security.

ಮೈಸೂರು, ಸೆ.10,2024: (www.justkannada.in news) ಇಲ್ಲಿನ ಅಂಬಾವಿಲಾಸ ಅರಮನೆ (Mysore Palace) ಭಾರತದ ಪ್ರಮುಖ ಆಕರ್ಷಣೆಯಾಗಿದೆ. ಇದು ದಕ್ಷಿಣ ಭಾರತದ ಪ್ರಮುಖ ಐತಿಹಾಸಿಕ ವಾಸ್ತುಶಿಲ್ಪಕೃತ್ಯಗಳಲ್ಲಿ ಒಂದಾಗಿದೆ. ಇದನ್ನು ಭಾರತೀಯ-ಸಾರಸೆನಿಕ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪಾರಂಪರಿಕ ಮಹತ್ವ ಹೊಂದಿರುವ ಅರಮನೆಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಹಿನ್ನೆಲೆಯಲ್ಲಿ ಇದರ ರಕ್ಷಣೆಯೂ ಅಷ್ಟೆ ಮಹತ್ವದ್ದು.

ಈ ನಿಟ್ಟಿನಲ್ಲಿ ಮೈಸೂರು ಅರಮನೆ ಮಂಡಳಿ ಮುಂದಡಿ ಇಟ್ಟಿದ್ದು, ಅರಮನೆ ಪ್ರವೇಶದ್ವಾರದಿಂದ ಹಿಡಿದು ವ್ಯಕ್ತಿ ನಿರ್ಗಮಿಸುವ ತನಕ ಆತನ ಮೇಲೆ ಹದ್ದಿನ ಕಣ್ಣಿಡುವ ವ್ಯವಸ್ಥೆ ಜಾರಿಗೊಳಿಸಿದೆ. ಈ ಬಗ್ಗೆ ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಮಣ್ಯ ಅವರು ಜಸ್ಟ್‌ ಕನ್ನಡ ಜತೆ ಮಾತನಾಡಿ ನೀಡಿದ ಮಾಹಿತಿ ಹೀಗಿದೆ..

ಮೈಸೂರು ಅರಮನೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವುದರಿಂದ, ಆಸ್ತಿ ಮತ್ತು ವ್ಯಕ್ತಿಯ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ಹರಿಸಲಾಗಿದೆ. ಅರಮನೆ ಸೆಕ್ಯೂರಿಟಿ ವ್ಯವಸ್ಥೆ ನಿರ್ವಹಣೆಗೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಾಗಿದೆ.

ಸುಧಾರಿತ ಸಿಸಿಟಿವಿ (CCTV) ಕ್ಯಾಮೆರಾಗಳನ್ನು ಸಂಪೂರ್ಣ ಅರಮನೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿದೆ. ಒಟ್ಟು 132  ಐಪಿ ಬೇಸ್ಡ್‌ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ದಿನದ 24 ಗಂಟೆಯೂ ನಿಗಾವಹಿಸುತ್ತದೆ.

ವ್ಯಕ್ತಿಯೊಬ್ಬರು ಅರಮನೆಗೆ ಪ್ರವೇಶ ಪಡೆದಾಗಿನಿಂದ ಅವರು ಅರಮನೆಯಿಂದ ಹೊರಗಡೆಗೆ ನಿರ್ಗಮಿಸುವ ತನಕ ಸಿಸಿಟಿವಿ ಕಣ್ಗಾವಲಿನಲ್ಲಿರುತ್ತಾರೆ. ಫಿಕ್ಸ್ಡ್‌ ಕ್ಯಾಮೆರಾ ಜತೆಗೆ 360 ಡಿಗ್ರಿ ಕೋನದ ಕ್ಯಾಮೆರಾಗಳನ್ನು ಸಹ ಬಳಸಲಾಗುತ್ತಿದೆ. ಈ ಸಿಸಿಟಿವಿ ಫ್ಯೂಟೇಜ್‌ ಗಳನ್ನು ಮೂರು ತಿಂಗಳವರೆಗೆ ಸಂರಕ್ಷಿಸಿಡಲಾಗುತ್ತದೆ. ಇದರ ನಿರ್ವಹಣೆಗೆ ಪ್ರತ್ಯೇಕವಾದ ಕಂಟ್ರೋಲ್‌ ರೂಂ ನಿರ್ಮಿಸಲಾಗಿದೆ. ಅಲ್ಲಿ ದಿನದ 24 ಗಂಟೆಗಳು ಪೊಲೀಸರು ಕರ್ತವ್ಯ ನಿರ್ವಹಿಸುತ್ತಾರೆ. ಇಲ್ಲಿ ಬಯೋ ಮೆಟ್ರಿಕ್‌ ಪದ್ಧತಿ ಜಾರಿಗೊಳಿಸಿದ್ದು ಅತ್ಯಂತ ಸುರಕ್ಷಿತವಾಗಿ ನಿರ್ವಹಣೆ ಮಾಡಲಾಗುತ್ತಿದೆ.

ಈ ಕಂಟ್ರೋಲ್‌ ರೂಂ ನಲ್ಲಿ ಕುಳಿತುಕೊಂಡು ಸಾರ್ವಜನಿಕರಿಗೆ ಎಚ್ಚರಿಕೆ  ಸಂದೇಶ ಅಥವಾ ಸೂಕ್ತ ಮಾಹಿತಿ ನೀಡುಬಹುದಾಗಿದೆ. ಅರಮನೆಯಲ್ಲಿ ಚಿನ್ನದ ಅಂಬಾರಿ, ಖಾಸಗಿ ದರ್ಬಾರ್‌, ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಪ್ರಾಂಗಾಣಗಳಿದ್ದು, ನಿರ್ಧಿಷ್ಠ ಪ್ರಾಂಗಣದಲ್ಲಿ ಇರುವ ವ್ಯಕ್ತಿಗಳಿಗೆ ಮಾತ್ರ ತಲುಪುವಂತೆ ಸಂದೇಶಗಳನ್ನು ಈ ವ್ಯವಸ್ಥೆ ಸಹಾಯದಿಂದ ಪ್ರಚಾರ ಮಾಡಬಹುದು.

ಇನ್ನಷ್ಟು ರಕ್ಷಣೆ:

ಪ್ರವಾಸಿಗರ ಪ್ರವೇಶವನ್ನು ನಿಯಂತ್ರಿಸಲು ನಿಗದಿತ ಸ್ಥಳಗಳಲ್ಲಿ ತಪಾಸಣೆ ಗೇಟುಗಳು ಕಾರ್ಯನಿರ್ವಹಿಸುತ್ತವೆ. ಅರಮನೆ ಸಿಬ್ಬಂದಿ ಜತೆಗೆ ಪೊಲೀಸರು, ಹಾಗೂ ಮೆಟಲ್‌ ಡಿಟೆಕ್ಟರ್‌ ಉಪಕರಣಗಳು ಇರುತ್ತವೆ.  ಬೃಹತ್ ಸಮಾರಂಭಗಳು ನಡೆಯುವ ವೇಳೆ (DASARA) ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗುತ್ತದೆ.

Key words: MYSORE PALACE, beware, you are now under, IP-based CCTV, surveillance.

SUMMARY:

The Mysore Palace, also known as Amba Vilas Palace, is one of the most famous and frequently visited landmarks in India, located in Mysuru (Mysore), Karnataka. It is the official residence of the Wadiyar dynasty and a stunning example of Indo-Saracenic architecture, blending elements of Hindu, Mughal, Rajput, and Gothic styles.

Security at Mysore Palace

Given its historical and cultural importance, security at the Mysore Palace is taken very seriously. The palace is a high-profile tourist destination, drawing millions of visitors annually, especially during the Dussehra festival. Key security measures include:

  1. Security Personnel:  The palace is guarded by Karnataka state police officers and private security staff. Armed personnel are stationed at strategic points, especially during festivals and special events.
  2. CCTV Surveillance: The entire palace complex is equipped with a network of 132 CCTV cameras (IP Based) to monitor visitor movement and ensure security.
  3. Entry Restrictions and Screening: Visitors are required to pass through metal detectors and their belongings are screened through X-ray machines. Certain restricted areas are off-limits to the public to protect valuable artifacts and sensitive zones within the palace.

During major festivals, like Dasara, when the palace is illuminated and events are held, security is tightened further with additional forces, crowd management teams, and emergency services on standby.

Tags :

.