For the best experience, open
https://m.justkannada.in
on your mobile browser.

Mysore police ಎಡವಟ್ಟು; ಸಸ್ಪೆಂಡ್ ಆದ ಕಾನ್ಸ್‌ ಟೇಬಲ್ ಗೂ ಸಿಎಂ ಮೆಡಲ್..!

03:17 PM Aug 15, 2024 IST | prashanth
mysore police ಎಡವಟ್ಟು  ಸಸ್ಪೆಂಡ್ ಆದ ಕಾನ್ಸ್‌ ಟೇಬಲ್ ಗೂ ಸಿಎಂ ಮೆಡಲ್

ಮೈಸೂರು,ಆಗಸ್ಟ್,15,2024 (www.justkannada.in): ಅಮಾನತಾದ ಪೊಲೀಸ್ ಕಾನ್ಸ್ ಟೇಬಲ್ ಗೂ ಮುಖ್ಯಮಂತ್ರಿ ಪದಕ ಪ್ರಕಟವಾಗಿದ್ದುಈ  ಮೂಲಕ ಮೈಸೂರು ಪೊಲೀಸ್ ಇಲಾಖೆಯ ಯಡವಟ್ಟು ಇದೀಗ ಬಯಲಾಗಿದೆ.

ಹೌದು  ಮೈಸೂರು ಸಿಸಿಬಿ ಘಟಕ ಕಾನ್ಸ್ ಟೇಬಲ್ ಸಲೀಂ ಪಾಷಾ ಒಂದು ತಿಂಗಳ ಹಿಂದೆ ಸಸ್ಪೆಂಡ್ ಆಗಿದ್ದರೂ ಕೂಡ ಇದೀಗ ಬಿಡುಗಡೆಯಾದ ಮುಖ್ಯಮಂತ್ರಿಗಳ ಪದಕದ ಪಟ್ಟಿಯಲ್ಲಿ ಅವರ ಸಲೀಂ ಪಾಷಾ ಹೆಸರು ಪ್ರಕಟವಾಗಿದೆ.

ಸಲೀಂ ಪಾಷಾ ಅವರು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಜೊತೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ, ದಾಖಲೆಗಳ ಸೋರಿಕೆ ಮಾಡುವ ಶಂಕೆ ಎಲ್ಲಾ  ಆರೋಪಗಳ ಮೇಲೆ ಅಮಾನತಾಗಿದ್ದರು.

ವಿಜಯನಗರ ಹಾಗೂ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕನ್ನ ಕಳುವು ಹಾಗೂ ಗಾಂಜಾ ಪ್ರಕರಣಗಳ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿರುವ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಈ  ಹಿನ್ನೆಲೆಯಲ್ಲಿ ಸಲೀಂ ಪಾಷಾ ಅವರನ್ನ ಸಸ್ಪೆಂಡ್ ಮಾಡಲಾಗಿತ್ತು.

ಆದರೆ ಇದೀಗ ಸಲೀಂ ಪಾಷಾ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಘೋಷಣೆಯಾಗಿದ್ದು ಅಚ್ಚರಿ ಮೂಡಿಸಿದೆ. ಇದು 2023 ರ ಕರ್ತವ್ಯದ ಆಧಾರದ ಮೇಲೆ ಕೊಟ್ಟಿದ್ದಾರೆಂದು ಅಧಿಕಾರಿಯೊಬ್ಬರ ಅಭಿಪ್ರಾಯವಾಗಿದೆ.

ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಬೇಕಾದರೇ ಒಂದು ಸಮಿತಿ ರಚನೆ ಮಾಡಲಾಗುತ್ತದೆ. ಸಮಿತಿಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಇರುತ್ತಾರೆ. ಈ ಅಧಿಕಾರಿಗಳು ಯಾರನ್ನ ಶಿಫಾರಸ್ಸು ಮಾಡಿರುತ್ತಾರೋ ಅದರ ಪ್ರಕಾರ ಸರ್ಕಾರ ಸಿಎಂ ಪದಕವನ್ನ ಪ್ರಕಟ ಮಾಡುತ್ತದೆ. ಇನ್ನೊಂದು ವಿಚಾರ ಏನೆಂದರೇ 6 ತಿಂಗಳ ಹಿಂದೆಯೇ ಸಮಿತಿಯಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಸಿಎಂ ಪದಕಕ್ಕೆ ಹೆಸರನ್ನ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಾರೆ ಎನ್ನಲಾಗಿದೆ.

Key words: Mysore police, Suspended Constable, CM Medal

Tags :

.