For the best experience, open
https://m.justkannada.in
on your mobile browser.

ಮಣ್ಣಿನ ಗಣೇಶ ಮೂರ್ತಿ ಮಾಡುವ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿದ ಶಾಲಾ ಮಕ್ಕಳು

01:24 PM Sep 04, 2024 IST | prashanth
ಮಣ್ಣಿನ ಗಣೇಶ ಮೂರ್ತಿ ಮಾಡುವ ಕಾರ್ಯದಲ್ಲಿ ಉತ್ಸಾಹದಿಂದ ತೊಡಗಿದ ಶಾಲಾ ಮಕ್ಕಳು

ಮೈಸೂರು,ಸೆಪ್ಟಂಬರ್,4,2024 (www.justkannada.in): ಪರಿಸರ ಬಳಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಇಂದು ನಗರದ ಎರಡು ಕಡೆ, ಶಾಲಾ ಮಕ್ಕಳಿಗೆ ಮಣ್ಣಿನ ಗಣಪತಿ ಮಾಡುವ ಕಾರ್ಯಾಗಾರ ‌ನಡೆಸಲಾಗುತ್ತಿದ್ದು,  ಶಾಲಾಮಕ್ಕಳು ಉತ್ಸಾಹದಿಂದ ತೊಡಗಿದ್ದಾರೆ.

ನಗರದ ಲಲಿತ್ ಮಹಲ್ ಪ್ಯಾಲೇಸ್ ಪಕ್ಕದ ಮೈದಾನದಲ್ಲಿ ಮತ್ತು ವಿಜಯನಗರ ಬಡಾವಣೆಯ ಯೋಗ ನರಸಿಂಹ ದೇವಸ್ಥಾನದ ಎದುರಿನ ಪಾರ್ಕ್ ನಲ್ಲಿ, ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭವಾದ ಕಾರ್ಯಾಗಾರದಲ್ಲಿ ಜೆಎಸ್ಎಸ್ ಪ್ರೌಢಶಾಲೆ, ಭಾರತೀಯ ವಿದ್ಯಾಭವನ ಶಾಲೆ‌ಯ ವಿದ್ಯಾರ್ಥಿಗಳು ಭಾಗಿಯಾಗಿದ್ದು ಇದರಲ್ಲಿ ನುರಿತ ಶಿಲ್ಪಿಗಳು ಮಣ್ಣಿನ ಗಣಪತಿ ಮಾಡುವ ವಿಧಾನವನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ.  ಮಕ್ಕಳು ಬಹಳ ಉತ್ಸಾಹದಿಂದ ಪಾಲ್ಗೊಂಡು ವಿವಿಧ ಆಕಾರದ, ಬಹು ಬಗೆಯ ಗಣಪತಿ ಮೂರ್ತಿಗಳನ್ನು ಜೇಡಿಮಣ್ಣಿನಿಂದ ರೂಪಿಸಿದ್ದಾರೆ.

ಕಾರ್ಯಾಗಾರದಲ್ಲಿ ಪರಿಸರ ಬಳಗದ ಪರಶುರಾಮೇಗೌಡ, ಗಂಟಯ್ಯ, ಭಾಗ್ಯ, ಶಂಕರ್, ಅಂಜನಾ, ಕಲಾ, ರಾಗಿಣಿ, ಇಂದಿರಾ , ಶೈಲಜೇಶ್ ವೆಂಕಟೇಶ್, ಪ್ರಭಾ, ಸತೀಶ್, ಲೀಲಾ, ಕಸ್ತೂರಿ ಮುಂತಾದವರು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

Key words: mysore, School children, Ganesha idols

Tags :

.